ಆಪರೇಷನ್ ಸಿಂದೂರ್ನಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದವರೆಗೆ, ಭಾರತದ ಶಕ್ತಿ ಸಾಮರ್ಥ್ಯ, ಗುರಿ ತೆರೆದಿಟ್ಟ ಪ್ರಧಾನಿ
PM Narendra Modi's independence day speech: ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದಾರೆ. 2047ರೊಳಗೆ ವಿಕಸಿತ ಭಾರತದ ನಿರ್ಮಾಣದ ಗುರಿಯಲ್ಲಿ ಪ್ರಮುಖ ಭಾಗವಾಗಿರುವ ಆತ್ಮನಿರ್ಭರ್ ಭಾರತದ ಮಾತನಾಡಿದ್ದಾರೆ. ರಕ್ಷಣೆ, ಬಾಹ್ಯಾಕಾಶ, ಸೆಮಿಕಂಡಕ್ಟರ್, ನವೀಕರಣ ಇಂಧನ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಭಾರತ ತೋರಿರುವ ಪ್ರಗತಿಯನ್ನು ವಿವರಿಸಿದ್ದಾರೆ.

ನವದೆಹಲಿ, ಆಗಸ್ಟ್ 15: ವಿಕಸಿತ ಭಾರತ ಅಥವಾ ಮುಂದುವರಿದ ದೇಶಕ್ಕೆ ಪ್ರಮುಖ ಅಡಿಗಲ್ಲಾದ ಸ್ವಾವಲಂಬನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಒತ್ತು ನೀಡಿದ್ದಾರೆ. ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿಗಳು ಆತ್ಮನಿರ್ಭರ್ ಭಾರತದ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ. ವಿಕಾಸ ಮತ್ತು ಸ್ವಾವಲಂಬನೆಯತ್ತ ಈಗಾಗಲೇ ಇಡಲಾಗಿರುವ ಹೆಜ್ಜೆಗಳನ್ನು ಅವರು ಉಲ್ಲೇಖ ಮಾಡಿದ್ದಾರೆ. ರಕ್ಷಣೆ, ತಂತ್ರಜ್ಞಾನ, ಇಂಧನ, ಬಾಹ್ಯಾಕಾಶ, ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎಷ್ಟು ಉನ್ನತಿ ಸಾಧಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಸ್ವಾವಲಂಬನೆ ಗುರಿ ಬಗ್ಗೆ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಹೇಳಿದ ಕೆಲ ಮುಖ್ಯಾಂಶಗಳು ಇಲ್ಲಿವೆ…
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ಭಾರತದ ರಕ್ಷಣಾ ವ್ಯವಸ್ಥೆಯು ವಿದೇಶಗಳ ಅವಲಂಬನೆ ಇರಬಾರದು. ಸ್ವಂತವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳಿರಬೇಕು ಎಂದು ಹೇಳಿರುವ ಪ್ರಧಾನಿ ಮೋದಿ, ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂದೂರ್ ಅನ್ನು ಇದಕ್ಕೆ ನಿದರ್ಶನವಾಗಿ ಉಲ್ಲೇಖಿಸಿದರು.
ಇದನ್ನೂ ಓದಿ: ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ
ಜೆಟ್ ಎಂಜಿನ್ನಲ್ಲಿ ಸ್ವಾವಲಂಬನೆ: ಭಾರತದಲ್ಲಿ ಜೆಟ್ ಎಂಜಿನ್ಗಳನ್ನು ಅಭಿವೃದ್ಧಿಪಡಿಸುವಂತೆ ಭಾರತದ ಯುವಸಮುದಾಯ ಮತ್ತು ಸೃಜನಶೀಲ ತಂತ್ರಜ್ಞರಿಗೆ ಮೋದಿ ಕರೆ ನೀಡಿದರು. ಜೆಟ್ ಎಂಜಿನ್ ಅಭಿವೃದ್ಧಿಪಡಿಸುವ ಸಾಮರ್ಥ್ಯ ನಾಲ್ಕೈದು ದೇಶಗಳಿಗೆ ಮಾತ್ರವೇ ಇರುವುದು.
ಸೆಮಿಕಂಡಕ್ಟರ್ ಉದ್ಯಮದ ಅಭಿವೃದ್ಧಿ: ಈ ವರ್ಷಾಂತ್ಯದೊಳಗೆ (2025) ಭಾರತದಲ್ಲಿ ತಯಾರಾದ ಸೆಮಿಕಂಡಕ್ಟರ್ ಚಿಪ್ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿರುವ ನರೇಂದ್ರ ಮೋದಿ, ಅತಿಮುಖ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಬೆಳವಣಿಗೆ ಹೊಂದುತ್ತಿರುವುದಕ್ಕೆ ಇದು ಸಾಕ್ಷ್ಯ ಎಂದರು.
ಬಾಹ್ಯಾಕಾಶ ಕ್ಷೇತ್ರ: ಭಾರತದ್ದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿರುವುದು; ಬಾಹ್ಯಾಕಾಶ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟಪ್ಗಳು ನಾವೀನ್ಯತೆ ಸಾಧಿಸುತ್ತಿರುವುದು ಇತ್ಯಾದಿಯನ್ನು ಪ್ರಧಾನಿ ಎತ್ತಿತೋರಿಸಿದರು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ನಿಂತು ಸುದರ್ಶನ ಚಕ್ರ ಮಿಷನ್ ಘೋಷಿಸಿದ ಮೋದಿ, ಹಾಗೆಂದರೇನು?
ಸ್ವಚ್ಛ ಹಾಗು ನವೀಕರಣ ಇಂಧನ ತಯಾರಿಕೆಯಲ್ಲಿ ಆಗುತ್ತಿರುವ ಪ್ರಗತಿ; ಕೈಗಾರಿಕೆ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಬೇಕಾದ ಪ್ರಮುಖ ಖನಿಜಗಳನ್ನು ಪಡೆಯಲು ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ಸ್ ಮಿಷನ್ ಯೋಜನೆ; ಸಾಗರದಾಳ ಅನ್ವೇಷಣೆ ಯೋಜನೆ; ರಸಗೊಬ್ಬರ ತಯಾರಿಕೆ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ; ಭಾರತವು ವಿಶ್ವದ ಫಾರ್ಮಸಿಯಾಗಿ ಬೆಳೆದಿರುವುದು; ಶತ್ರುಗಳ ದಾಳಿಯನ್ನು ನಿಗ್ರಹಿಸಬಲ್ಲ ಸುದರ್ಶನ್ ಚಕ್ರ ಮಿಷನ್ ಆರಂಭಿಸಿರುವುದು ಇವೇ ಮುಂತಾದ ಸಾಧನೆ ಮತ್ತು ಗುರಿಗಳನ್ನು ಪ್ರಧಾನಿ ಮೋದಿ ವಿವರಿಸಿದರು.
ದೇಶದ ಜನರು ಸ್ವದೇಶೀ ವಸ್ತುಗಳನ್ನು ಬಳಸಬೇಕು. ಅಂಗಡಿ ಮುಂಗಟ್ಟುಗಳು ಸ್ವದೇಶೀ ವಸ್ತುಗಳನ್ನು ಮಾರಲು ಹೆಚ್ಚು ಒತ್ತುಕೊಡಬೇಕು ಎಂದು ಈ ಸಂದರ್ಭದಲ್ಲಿ ಮೋದಿ ಕರೆ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




