Gold Rate Today Bangalore: ಆಭರಣ ಚಿನ್ನದ ಬೆಲೆ 9,275 ರೂ; ಬೆಳ್ಳಿ ಬೆಲೆ 80 ಪೈಸೆ ಏರಿಕೆ

Bullion Market 2025 August 18th: ಇಂದು ಸೋಮವಾರ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಬೆಳ್ಳಿ ಬೆಲೆಯಲ್ಲಿ 80 ಪೈಸೆ ಏರಿಕೆ ಆಗಿದೆ ಆಭರಣ ಚಿನ್ನದ ಬೆಲೆ 9,275 ರೂ ಇದ್ದರೆ, ಅಪರಂಜಿ ಚಿನ್ನದ ಬೆಲೆ 10,118 ರೂನಲ್ಲಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 116.20 ರೂನಿಂದ 117 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 127 ರೂಗೆ ಏರಿದೆ.

Gold Rate Today Bangalore: ಆಭರಣ ಚಿನ್ನದ ಬೆಲೆ 9,275 ರೂ; ಬೆಳ್ಳಿ ಬೆಲೆ 80 ಪೈಸೆ ಏರಿಕೆ
ಚಿನ್ನ

Updated on: Aug 18, 2025 | 11:01 AM

ಬೆಂಗಳೂರು, ಆಗಸ್ಟ್ 18: ಕಳೆದ ವಾರ ಸತತವಾಗಿ ಇಳಿದಿದ್ದ ಚಿನ್ನದ ಬೆಲೆ (gold rate) ಈ ವಾರದ ಮೊದಲ ದಿನ ಯಾವ ವ್ಯತ್ಯಯ ಕಂಡಿಲ್ಲ. ಆಭರಣ ಚಿನ್ನದ ಬೆಲೆ 9,275 ರೂನಲ್ಲಿ ಮುಂದುವರಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆ ತುಸು ಏರಿಕೆ ಆಗಿದೆ. ಗ್ರಾಮ್​ಗೆ 80 ಪೈಸೆ ಹೆಚ್ಚಾಗಿದ್ದು ಬೆಲೆ 117 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,620 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,620 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,750 ರೂ
  • ಚೆನ್ನೈ: 92,750 ರೂ
  • ಮುಂಬೈ: 92,750 ರೂ
  • ದೆಹಲಿ: 92,900 ರೂ
  • ಕೋಲ್ಕತಾ: 92,750 ರೂ
  • ಕೇರಳ: 92,750 ರೂ
  • ಅಹ್ಮದಾಬಾದ್: 92,800 ರೂ
  • ಜೈಪುರ್: 92,900 ರೂ
  • ಲಕ್ನೋ: 92,900 ರೂ
  • ಭುವನೇಶ್ವರ್: 92,750 ರೂ

ಇದನ್ನೂ ಓದಿ: ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ ಜಿಎಸ್​ಟಿ ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,370 ರಿಂಗಿಟ್ (90,460 ರುಪಾಯಿ)
  • ದುಬೈ: 3,722.50 ಡಿರಾಮ್ (88,630 ರುಪಾಯಿ)
  • ಅಮೆರಿಕ: 1,035 ಡಾಲರ್ (90,490 ರುಪಾಯಿ)
  • ಸಿಂಗಾಪುರ: 1,335 ಸಿಂಗಾಪುರ್ ಡಾಲರ್ (91,030 ರುಪಾಯಿ)
  • ಕತಾರ್: 3,745 ಕತಾರಿ ರಿಯಾಲ್ (89,840 ರೂ)
  • ಸೌದಿ ಅರೇಬಿಯಾ: 3,800 ಸೌದಿ ರಿಯಾಲ್ (88,540 ರುಪಾಯಿ)
  • ಓಮನ್: 395 ಒಮಾನಿ ರಿಯಾಲ್ (89,700 ರುಪಾಯಿ)
  • ಕುವೇತ್: 302.90 ಕುವೇತಿ ದಿನಾರ್ (86,700 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,700 ರೂ
  • ಚೆನ್ನೈ: 12,700 ರೂ
  • ಮುಂಬೈ: 11,700 ರೂ
  • ದೆಹಲಿ: 11,700 ರೂ
  • ಕೋಲ್ಕತಾ: 11,700 ರೂ
  • ಕೇರಳ: 12,700 ರೂ
  • ಅಹ್ಮದಾಬಾದ್: 11,700 ರೂ
  • ಜೈಪುರ್: 11,700 ರೂ
  • ಲಕ್ನೋ: 11,700 ರೂ
  • ಭುವನೇಶ್ವರ್: 12,700 ರೂ
  • ಪುಣೆ: 11,700

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us