Gold Rate Today Bangalore: ಭಾರತದಲ್ಲಿ ಚಿನ್ನದ ಬೆಲೆ ಏರಿಕೆ; ವಿದೇಶಗಳಲ್ಲಿ ಇಳಿಕೆ

Bullion Market 2025 July 18th: ಚಿನ್ನದ ಬೆಲೆ ಇವತ್ತೂ ಅಲ್ಪ ಏರಿಕೆ ಆಗಿದೆ. ಎರಡು ದಿನದಲ್ಲಿ ಗ್ರಾಮ್​ಗೆ 10 ರೂ ಬೆಲೆ ಹೆಚ್ಚಳ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,105 ರೂನಿಂದ 9,110 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 9,938 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದ ಕಡೆ 114 ರೂ ಇದ್ದರೆ, ಚೆನ್ನೈ ಮೊದಲಾದೆಎ ಬೆಲೆ 124 ರೂನಲ್ಲಿ ಮುಂದುವರಿದಿದೆ.

Gold Rate Today Bangalore: ಭಾರತದಲ್ಲಿ ಚಿನ್ನದ ಬೆಲೆ ಏರಿಕೆ; ವಿದೇಶಗಳಲ್ಲಿ ಇಳಿಕೆ
ಚಿನ್ನ

Updated on: Jul 18, 2025 | 10:41 AM

ಬೆಂಗಳೂರು, ಜುಲೈ 18: ನಿನ್ನೆ ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ (gold rate) ಇವತ್ತೂ ಕೂಡ ಸ್ವಲ್ಪವೇ ಹೆಚ್ಚಿದೆ. ಇಂದು ಶುಕ್ರವಾರ ಹಳದಿ ಲೋಹದ ಬೆಲೆ ಗ್ರಾಮ್​ಗೆ 5 ರೂ ಏರಿಕೆ ಆಗಿದೆ. ಎರಡು ದಿನದಲ್ಲಿ 10 ರೂ ಬೆಲೆ ಹೆಚ್ಚಳವಾದಂತಾಗಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ತಗ್ಗಿದೆ. ವಾರಾಂತ್ಯದಲ್ಲಿ ಭಾರತದಲ್ಲೂ ಚಿನ್ನದ ಬೆಲೆ ಕಡಿಮೆ ಆಗಬಹುದೆಂದು ನಿರೀಕ್ಷಿಸಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 91,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 91,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,380 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,540 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,140 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,140 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 91,100 ರೂ
  • ಚೆನ್ನೈ: 91,100 ರೂ
  • ಮುಂಬೈ: 91,100 ರೂ
  • ದೆಹಲಿ: 91,250 ರೂ
  • ಕೋಲ್ಕತಾ: 91,100 ರೂ
  • ಕೇರಳ: 91,100 ರೂ
  • ಅಹ್ಮದಾಬಾದ್: 91,150 ರೂ
  • ಜೈಪುರ್: 91,250 ರೂ
  • ಲಕ್ನೋ: 91,250 ರೂ
  • ಭುವನೇಶ್ವರ್: 91,100 ರೂ

ಇದನ್ನೂ ಓದಿ: ಪತಂಜಲಿ ಫೂಡ್ಸ್​ನಿಂದ 2:1 ಬೋನಸ್ ಷೇರು ವಿತರಣೆಗೆ ನಿರ್ಧಾರ; ಯಾರಿಗೇನು ಲಾಭ?

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,480 ರಿಂಗಿಟ್ (90,840 ರುಪಾಯಿ)
  • ದುಬೈ: 3,705 ಡಿರಾಮ್ (86,820 ರುಪಾಯಿ)
  • ಅಮೆರಿಕ: 1,035 ಡಾಲರ್ (89,090 ರುಪಾಯಿ)
  • ಸಿಂಗಾಪುರ: 1,335 ಸಿಂಗಾಪುರ್ ಡಾಲರ್ (89,430 ರುಪಾಯಿ)
  • ಕತಾರ್: 3,740 ಕತಾರಿ ರಿಯಾಲ್ (88,320 ರೂ)
  • ಸೌದಿ ಅರೇಬಿಯಾ: 3,800 ಸೌದಿ ರಿಯಾಲ್ (87,200 ರುಪಾಯಿ)
  • ಓಮನ್: 393.50 ಒಮಾನಿ ರಿಯಾಲ್ (87,970 ರುಪಾಯಿ)
  • ಕುವೇತ್: 303.10 ಕುವೇತಿ ದಿನಾರ್ (85,360 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,400 ರೂ
  • ಚೆನ್ನೈ: 12,400 ರೂ
  • ಮುಂಬೈ: 11,400 ರೂ
  • ದೆಹಲಿ: 11,400 ರೂ
  • ಕೋಲ್ಕತಾ: 11,400 ರೂ
  • ಕೇರಳ: 12,400 ರೂ
  • ಅಹ್ಮದಾಬಾದ್: 11,400 ರೂ
  • ಜೈಪುರ್: 11,400 ರೂ
  • ಲಕ್ನೋ: 11,400 ರೂ
  • ಭುವನೇಶ್ವರ್: 12,400 ರೂ
  • ಪುಣೆ: 11,400

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us