Gold Rate Today Bangalore: ಚಿನ್ನದ ಬೆಲೆ ಮತ್ತೆ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2025 August 27th: ಚಿನ್ನದ ಬೆಲೆ ಇಂದು ಬುಧವಾರ ಏರಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಹಳದಿ ಲೋಹದ ಬೆಲೆ 35 ರೂನಷ್ಟು ಹೆಚ್ಚಳವಾಗಿದೆ. ಆಭರಣ ಚಿನ್ನದ ಬೆಲೆ 9,355 ರೂನಿಂದ 9,390 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 10,244 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 120 ರೂಗೆ ಇದೆ. ಚೆನ್ನೈ ಮೊದಲಾದೆಡೆ ಬೆಲೆ 130 ರೂ ಇದೆ.

Gold Rate Today Bangalore: ಚಿನ್ನದ ಬೆಲೆ ಮತ್ತೆ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Aug 27, 2025 | 10:56 AM

ಬೆಂಗಳೂರು, ಆಗಸ್ಟ್ 27: ಚಿನ್ನದ ಬೆಲೆ ಸತತ ಎರಡನೇ ಬಾರಿ ಏರಿಕೆ ಆಗಿದೆ. ಗೌರಿ ಹಬ್ಬದ ದಿನ 50 ರೂ ಏರಿದ್ದ ಚಿನ್ನದ ಬೆಲೆ (gold rate) ಇವತ್ತು ಗಣೇಶ ಹಬ್ಬದ ದಿನ 35 ರೂ ಹೆಚ್ಚಳಗೊಂಡಿದೆ. ದೆಹಲಿ ಮುಂತಾದ ಕಡೆ ಬೆಲೆ 9,400 ರೂ ಗಡಿ ದಾಟಿದೆ. ವಿದೇಶಗಳಲ್ಲಿ ಹಲವೆಡೆಯೂ ಬೆಲೆ ಏರಿದೆ. ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 93,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,02,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 12,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 93,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 12,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 13,000 ರೂ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 93,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,440 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,830 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,200 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 93,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,440 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,200 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 93,900 ರೂ
  • ಚೆನ್ನೈ: 93,900 ರೂ
  • ಮುಂಬೈ: 93,900 ರೂ
  • ದೆಹಲಿ: 94,050 ರೂ
  • ಕೋಲ್ಕತಾ: 93,900 ರೂ
  • ಕೇರಳ: 93,900 ರೂ
  • ಅಹ್ಮದಾಬಾದ್: 93,950 ರೂ
  • ಜೈಪುರ್: 94,050 ರೂ
  • ಲಕ್ನೋ: 94,050 ರೂ
  • ಭುವನೇಶ್ವರ್: 93,900 ರೂ

ಇದನ್ನೂ ಓದಿ: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,400 ರಿಂಗಿಟ್ (91,280 ರುಪಾಯಿ)
  • ದುಬೈ: 3,765 ಡಿರಾಮ್ (89,900 ರುಪಾಯಿ)
  • ಅಮೆರಿಕ: 1,050 ಡಾಲರ್ (92,090 ರುಪಾಯಿ)
  • ಸಿಂಗಾಪುರ: 1,354 ಸಿಂಗಾಪುರ್ ಡಾಲರ್ (92,240 ರುಪಾಯಿ)
  • ಕತಾರ್: 3,790 ಕತಾರಿ ರಿಯಾಲ್ (91,180 ರೂ)
  • ಸೌದಿ ಅರೇಬಿಯಾ: 3,860 ಸೌದಿ ರಿಯಾಲ್ (90,230 ರುಪಾಯಿ)
  • ಓಮನ್: 399.50 ಒಮಾನಿ ರಿಯಾಲ್ (91,020 ರುಪಾಯಿ)
  • ಕುವೇತ್: 307.70 ಕುವೇತಿ ದಿನಾರ್ (88,280 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 12,000 ರೂ
  • ಚೆನ್ನೈ: 13,000 ರೂ
  • ಮುಂಬೈ: 12,000 ರೂ
  • ದೆಹಲಿ: 12,000 ರೂ
  • ಕೋಲ್ಕತಾ: 12,000 ರೂ
  • ಕೇರಳ: 13,000 ರೂ
  • ಅಹ್ಮದಾಬಾದ್: 12,000 ರೂ
  • ಜೈಪುರ್: 12,000 ರೂ
  • ಲಕ್ನೋ: 12,000 ರೂ
  • ಭುವನೇಶ್ವರ್: 13,000 ರೂ
  • ಪುಣೆ: 12,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us