AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC campaign: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ

LIC special campaign till Oct 17th for policy revival: ನಿಗದಿತ ದಿನ ಕಳೆದು ಗ್ರೇಸ್ ಅವಧಿ ಕಳೆದರೂ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟದೇ ಇದ್ದರೆ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಇದನ್ನು ರಿವೈವಲ್ ಮಾಡಬೇಕಾದರೆ ತಡ ಪಾವತಿ ಶುಲ್ಕ ಪಾವತಿಸಬೇಕು. ಇದೀಗ ಎಲ್​ಐಸಿ ಸಂಸ್ಥೆಯು ಇಂಥ ಲ್ಯಾಪ್ಸ್ ಆದ ಪಾಲಿಸಿಗಳ ರಿವೈವಲ್​ಗೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

LIC campaign: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2025 | 6:28 PM

Share

ನವದೆಹಲಿ, ಆಗಸ್ಟ್ 26: ನಿಮ್ಮ ಎಲ್​ಐಸಿ ಪಾಲಿಸಿಯು ಪ್ರೀಮಿಯಮ್ ಕಟ್ಟದೆಯೇ ಲ್ಯಾಪ್ಸ್ ಆಗಿದೆಯಾ? ಲೇಟ್ ಫೀ ಕಟ್ಟಿ ಅದನ್ನು ರಿವೈವ್ ಮಾಡಬೇಕಾಗುತ್ತದೆ. ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆಯು ಈ ರೀತಿ ಲ್ಯಾಪ್ಸ್ ಆದ ಇನ್ಷೂರೆನ್ಸ ಪಾಲಿಸಿಗಳನ್ನು (Insurance policy) ರಿವೈವ್ ಮಾಡಲು ಕೆಂಪೇನ್ ಆರಂಭಿಸಿದೆ. ಆಗಸ್ಟ್ 18ರಿಂದಲೇ ಶುರುವಾಗಿರುವ ಈ ಅಭಿಯಾನವು ಅಕ್ಟೋಬರ್ 17ರವರೆಗೂ ಇರುತ್ತದೆ. ಈ ಕೆಂಪೇನ್ ಅವಧಿಯಲ್ಲಿ ಸ್ಪೆಷಲ್ ಆಫರ್ ಇರುತ್ತದೆ. ಲ್ಯಾಪ್​ಸ್ ಆದ ಇನ್ಷೂರೆನ್ಸ್ ಪಾಲಿಸಿಗಳಿಗೆ ತಡ ಪಾವತಿ ಶುಲ್ಕದಲ್ಲಿ ರಿಯಾಯಿತಿ ಅವಕಾಶವನ್ನು ನೀಡಲಾಗಿದೆ.

ಈ ಕೆಂಪೇನ್ ಅವಧಿಯಲ್ಲಿ ಎಲ್​ಐಸಿಯ ಪಾಲಿಸಿ ಪುನಶ್ಚೇತನಕ್ಕೆ ವಿಧಿಸಲಾಗುವ ತಡ ಪಾವತಿ ಶುಲ್ಕದಲ್ಲಿ ಶೇ. 30ರವರೆಗೆ, ಸುಮಾರು 5,000 ರೂವರೆಗೆ ರಿಯಾಯಿತಿ ಕೊಡಲಾಗುತ್ತದೆ. ಮೈಕ್ರೋ ಇನ್ಷೂರೆನ್ಸ್ ಪ್ಲಾನ್​ಗಳಲ್ಲಿ ಲೇಟ್ ಫೀನಲ್ಲಿ ನೂರಕ್ಕೆ ನೂರು ವಿನಾಯಿತಿ ಕೊಡಲಾಗುತ್ತದೆ. ಈ ಅವಕಾಶ ಅಕ್ಟೋಬರ್ 17ರವರೆಗೂ ಇರುತ್ತದೆ.

ಇನ್ಷೂರೆನ್ಸ್ ಪಾಲಿಸಿ ಯಾವಾಗ ಲ್ಯಾಪ್ಸ್ ಆಗುತ್ತೆ?

ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ ಪಾವತಿಸಲು ಗಡುವು ನೀಡಲಾಗಿರುತ್ತದೆ. ಆ ಗಡುವಿನೊಳಗೆ ಕಟ್ಟದಿದ್ದರೆ ಸುಮಾರು 15ರಿಂದ 30 ದಿನಗಳವರೆಗೆ ಗ್ರೇಸ್ ಪೀರಿಯಡ್ ನೀಡಲಾಗುತ್ತದೆ. ಈ ಗ್ರೇಸ್ ಅವಧಿಯಲ್ಲೂ ಪ್ರೀಮಿಯಮ್ ಕಟ್ಟಡದಿದ್ದಾಗ ಪಾಲಿಸಿ ಲ್ಯಾಪ್ಸ್ ಆಗುತ್ತದೆ.

ಇದನ್ನೂ ಓದಿ: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ

ಎಲ್​ಐಸಿ ಪಾಲಿಸಿ ಪುನಶ್ಚೇತನ ಹೇಗೆ ಮಾಡುವುದು?

ಎಲ್​ಐಸಿ ಪಾಲಿಸಿ ನಿಷ್ಕ್ರಿಯಗೊಂಡಿದ್ದರೆ ಅದನ್ನು ರಿವೈವ್ ಮಾಡಲು ಕೆಲ ಮಾರ್ಗೋಪಾಯಗಳಿವೆ. ಎಲ್​ಐಸಿ ಏಜೆಂಟ್ ಮುಖಾಂತರವೋ, ಅಥವಾ ಎಲ್​ಐಸಿ ಶಾಖೆಯೊಂದನ್ನು ಭೇಟಿ ಮಾಡಿಯೋ ಅಥವಾ ಕಸ್ಟಮರ್ ಸರ್ವಿಸ್ ವಿಭಾಗ ಸಂಪರ್ಕ ಮಾಡುವ ಮೂಲಕವೋ ಪಾಲಿಸಿ ರಿವೈವಲ್ ಮಾಡುವ ಪ್​ರಕ್ರಿಯೆ ಆರಂಭಿಸಬಹುದು.

ಅಗತ್ಯ ಬಿದ್ದರೆ ವೈದ್ಯಕೀಯ ಅಥವಾ ಇತರ ದಾಖಲೆಗಳನ್ನು ಪಾಲಿಸಿದಾರರು ಸಲ್ಲಿಸಬೇಕಾಗಬಹುದು. ಬಾಕಿ ಉಳಿಸಿಕೊಂಡಿರುವ ಪ್ರೀಮಿಯಮ್ ಹಣ ಹಾಗು ಅದಕ್ಕೆ ಬಡ್ಡಿ ಹಾಗೂ ತಡ ಪಾವತಿ ಶುಲ್ಕವನ್ನು ಸೇರಿಸಿ ಒಟ್ಟಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್​ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ

ಪಾಲಿಸಿ ಲ್ಯಾಪ್ಸ್ ಆದ ದಿನದಿಂದ ಐದು ವರ್ಷದೊಳಗೆ ಅದರ ರಿವೈವಲ್​ಗೆ ಅವಕಾಶ ಇರುತ್ತದೆ. ಹಾಗೆಯೇ, ಪಾಲಿಸಿಯ ಪ್ರೀಮಿಯಮ್ ಪಾವತಿ ಅವಧಿ ಮುಗಿದಿರಬಾರದು. ಪಾಲಿಸಿ ಮೆಚ್ಯೂರಿಟಿಗೆ ಬಂದಿರಬಾರದು. ಈ ಮೂರು ಅಂಶಗಳು ತಾಳೆಯಾದರೆ ಮಾತ್ರ ಪಾಲಿಸಿ ರಿವೈವಲ್​ಗೆ ಅವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ