ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ
Health Insurance, term life insurance may get big GST exemption boost: ಇನ್ಷೂರೆನ್ಸ್ ಕ್ಷೇತ್ರವನ್ನು ಬಲಪಡಿಸಲು ಮತ್ತು ಹೆಚ್ಚು ಜನರಿಗೆ ವಿಮಾ ಸೇವೆ ತಲುಪಿಸಲು ಸರ್ಕಾರ ಜಿಎಸ್ಟಿ ಕಡಿತ ಮಾರ್ಗ ಅನುಸರಿಸಬಹುದು. ಟರ್ಮ್ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಉತ್ಪನ್ನಗಳಿಗೆ ಜಿಎಸ್ಟಿ ವಿನಾಯಿತಿ ಮತ್ತು ರಿಯಾಯಿತಿ ನೀಡಬಹುದು. ಹಿರಿಯ ನಾಗರಿಕರ ಯಾವುದೇ ವಿಮಾ ಪಾಲಿಸಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬಹುದು.

ನವದೆಹಲಿ, ಆಗಸ್ಟ್ 19: ಟರ್ಮ್ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ಗಳ ಮೇಲಿನ ಜಿಎಸ್ಟಿಯನ್ನು (GST) ಗಣನೀಯವಾಗಿ ಇಳಿಸಲು ಸರ್ಕಾರ ಯೋಜಿಸಿದೆ. ಜಿಎಸ್ಟಿ ಕೌನ್ಸಿಲ್ ಇಂಥದ್ದೊಂದು ಮಹತ್ವದ ನಿರ್ಧಾರಕ್ಕೆ ಸಿದ್ಧವಾಗಿದೆ. ಈ ನಿರ್ಧಾರ ಜಾರಿಗೆ ಬಂದರೆ ಇನ್ಷೂರೆನ್ಸ್ ಪ್ರೀಮಿಯಮ್ ತಗ್ಗಲಿದ್ದು, ಹೆಚ್ಚೆಚ್ಚು ಜನರನ್ನು ವಿಮಾ ವ್ಯಾಪ್ತಿಗೆ ತರುವ ಪ್ರಯತ್ನ ಮತ್ತಷ್ಟು ಯಶಸ್ವಿಯಾಗಬಹುದು. ಸದ್ಯ ಎಲ್ಲಾ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇದು ಸೊನ್ನೆ ಅಥವಾ ಶೇ. 5ಕ್ಕೆ ಇಳಿಯಲಿದೆ.
ಹಿರಿಯ ನಾಗರಿಕರ ಇನ್ಷೂರೆನ್ಸ್ ಪಾಲಿಸಿಗಳಿಗೆ ಸೊನ್ನೆ ಜಿಎಸ್ಟಿ
60 ವರ್ಷ ವಯಸ್ಸು ದಾಟಿದ ವ್ಯಕ್ತಿಗಳ ಹೆಲ್ತ್ ಇನ್ಷೂರೆನ್ಸ್ ಮತ್ತು ಟರ್ಮ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಮೇಲೆ ಯಾವುದೇ ಜಿಎಸ್ಟಿ ಇರುವುದಿಲ್ಲ. ಎಷ್ಟೇ ಖಾತ್ರಿ ಮೊತ್ತವಿದ್ದರೂ ಪ್ರೀಮಿಯಮ್ಗೆ ಜಿಎಸ್ಟಿ ಹಾಕದೇ ಇರಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ.
ಇದನ್ನೂ ಓದಿ: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ
ಯಾವದೇ ವಯೋಮಾನದವರ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ ವಿನಾಯಿತಿ
ಯಾವುದೇ ವಯಸ್ಸಿನ ವ್ಯಕ್ತಿಗಳು ಮಾಡಿಸುವ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಕೊಡುವ ಸಾಧ್ಯತೆ ಇದೆ.
ಹೆಲ್ತ್ ಇನ್ಷೂರೆನ್ಸ್: 5 ಲಕ್ಷ ರೂವರೆಗಿನ ಕವರೇಜ್ಗೆ ವಿನಾಯಿತಿ…
ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲಿ 5 ಲಕ್ಷ ರೂವರೆಗಿನ ಕವರೇಜ್ ಇರುವ ಪ್ಲಾನ್ಗಳ ಪ್ರೀಮಿಯಮ್ಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬಹುದು.
ಹೆಲ್ತ್ ಇನ್ಷೂರೆನ್ಸ್: ಶೇ. 18ರಿಂದ ಶೇ. 5ಕ್ಕೆ ಜಿಎಸ್ಟಿ ಇಳಿಕೆ?
ಹೆಲ್ತ್ ಇನ್ಷೂರೆನ್ಸ್ನ ಯಾವುದೇ ಪಾಲಿಸಿಯಾದರೂ ಗರಿಷ್ಠ ಶೇ. 5 ಜಿಎಸ್ಟಿ ಮಾತ್ರವೇ ಇರುತ್ತದೆ. 5 ಲಕ್ಷ ರೂವರೆಗಿನ ಕವರೇಜ್ಗೆ ಜಿಎಸ್ಟಿ ವಿನಾಯಿತಿ ಇರುತ್ತದೆ. 5 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಕವರೇಜ್ ಇರುವ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ಗೆ ಜಿಎಸ್ಟಿಯನ್ನು ಶೇ. 18ರಿಂದ ಶೇ. 5ಕ್ಕಿ ಇಳಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಎಲ್ಐಸಿಯಲ್ಲಿ ಬಿಮಾ ಸಖಿ ಕೆಲಸ; ತಿಂಗಳಿಗೆ 7,000 ರೂ ಸ್ಟೈಪೆಂಡ್, ಜೊತೆಗೆ ಕಮಿಷನ್
ಜಿಎಸ್ಟಿ ಕೌನ್ಸಿಲ್ ಮುಂದಿರುವ ಪ್ರಸ್ತಾಪಗಳಿವು…
- ಟರ್ಮ್ ಲೈಫ್ ಇನ್ಷೂರೆನ್ಸ್: ಎಲ್ಲಾ ಪಾಲಿಸಿ ಪ್ರೀಮಿಯಮ್ಗಳಿಗೆ ಜಿಎಸ್ಟಿಯಿಂದ ವಿನಾಯಿತಿ
- ಹೆಲ್ತ್ ಇನ್ಷೂರೆನ್ಸ್: 5 ಲಕ್ಷ ರೂವರೆಗಿನ ಕವರೇಜ್ ಇರುವ ಪಾಲಿಸಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ
- ಹೆಲ್ತ್ ಇನ್ಷೂರೆನ್ಸ್: 5 ಲಕ್ಷ ರೂ ಮೇಲ್ಪಟ್ಟ ಮೊತ್ತದ ಕವರೇಜ್ ಇರುವ ಪಾಲಿಸಿಗಳಿಗೆ ಶೇ. 18 ಬದಲು ಶೇ. 5 ಜಿಎಸ್ಟಿ
- ಹೆಲ್ತ್ ಇನ್ಷೂರೆನ್ಸ್: ಹಿರಿಯ ನಾಗರಿಕರಿಗೆ ಜಿಎಸ್ಟಿಯಿಂದ ವಿನಾಯಿತಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




