Gold Rate Today Bangalore: ಸತತ ಎರಡನೇ ದಿನ ಏರಿದ ಚಿನ್ನದ ಬೆಲೆ; ಇಲ್ಲಿದೆ ಪಟ್ಟಿ

Bullion Market 2025 July 2nd: ಮಂಗಳವಾರ ಗ್ರಾಮ್​​ಗೆ 105 ರೂ ಏರಿದ್ದ ಚಿನ್ನದ ಬೆಲೆ ಬುಧವಾರ 45 ರೂನಷ್ಟು ಹೆಚ್ಚಳವಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,065 ರೂಗೆ ಏರಿದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,890 ರೂ ಮುಟ್ಟಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ ಮತ್ತೆ 110 ರೂ ಮುಟ್ಟಿದೆ, ತಮಿಳುನಾಡು ಕೇರಳ ಇತ್ಯಾದಿ ಕಡೆ ಬೆಲೆ 120 ರೂ ಆಗಿದೆ.

Gold Rate Today Bangalore: ಸತತ ಎರಡನೇ ದಿನ ಏರಿದ ಚಿನ್ನದ ಬೆಲೆ; ಇಲ್ಲಿದೆ ಪಟ್ಟಿ
ಚಿನ್ನ

Updated on: Jul 02, 2025 | 11:24 AM

ಬೆಂಗಳೂರು, ಜುಲೈ 2: ಚಿನ್ನದ ಬೆಲೆ ಸತತ ಎರಡನೇ ದಿನ ಏರಿಕೆ ಆಗಿದೆ. ನಿನ್ನೆ ಬರೋಬ್ಬರಿ 105 ರೂ ಏರಿದ್ದ ಚಿನ್ನದ ಬೆಲೆ ಇವತ್ತು ಬುಧವಾರ 45 ರೂನಷ್ಟು ಹೆಚ್ಚಳಗೊಂಡಿದೆ. ಇದರೊಂದಿಗೆ ಅಪರಂಜಿ ಚಿನ್ನದ ಬೆಲೆ (gold rate today) ಮತ್ತೊಮ್ಮೆ 9,900 ರೂ ಗಡಿ ಸಮೀಪಕ್ಕೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 7,400 ರೂ ಗಡಿ ದಾಟಿ ಇನ್ನೂ ಮೇಲೇರಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಇವತ್ತು ವ್ಯತ್ಯಯಗಳಾಗಿಲ್ಲ. ಭಾರತದಲ್ಲಿ ಅದರ ಬೆಲೆ 110 ರೂ ಮತ್ತು 120 ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 2ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,890 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,170 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,650 ರೂ
  • ಚೆನ್ನೈ: 90,650 ರೂ
  • ಮುಂಬೈ: 90,650 ರೂ
  • ದೆಹಲಿ: 90,800 ರೂ
  • ಕೋಲ್ಕತಾ: 90,650 ರೂ
  • ಕೇರಳ: 90,650 ರೂ
  • ಅಹ್ಮದಾಬಾದ್: 90,700 ರೂ
  • ಜೈಪುರ್: 90,800 ರೂ
  • ಲಕ್ನೋ: 90,800 ರೂ
  • ಭುವನೇಶ್ವರ್: 90,650 ರೂ

ಇದನ್ನೂ ಓದಿ: GST: ಜೂನ್​​ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್​​ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,380 ರಿಂಗಿಟ್ (89,040 ರುಪಾಯಿ)
  • ದುಬೈ: 3,740 ಡಿರಾಮ್ (87,250 ರುಪಾಯಿ)
  • ಅಮೆರಿಕ: 1,045 ಡಾಲರ್ (89,570 ರುಪಾಯಿ)
  • ಸಿಂಗಾಪುರ: 1,332 ಸಿಂಗಾಪುರ್ ಡಾಲರ್ (89,690 ರುಪಾಯಿ)
  • ಕತಾರ್: 3,750 ಕತಾರಿ ರಿಯಾಲ್ (88,190 ರೂ)
  • ಸೌದಿ ಅರೇಬಿಯಾ: 3,820 ಸೌದಿ ರಿಯಾಲ್ (87,310 ರುಪಾಯಿ)
  • ಓಮನ್: 396.50 ಒಮಾನಿ ರಿಯಾಲ್ (88,280 ರುಪಾಯಿ)
  • ಕುವೇತ್: 303.50 ಕುವೇತಿ ದಿನಾರ್ (85,250 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,000 ರೂ
  • ಚೆನ್ನೈ: 12,000 ರೂ
  • ಮುಂಬೈ: 11,000 ರೂ
  • ದೆಹಲಿ: 11,000 ರೂ
  • ಕೋಲ್ಕತಾ: 11,000 ರೂ
  • ಕೇರಳ: 11,200 ರೂ
  • ಅಹ್ಮದಾಬಾದ್: 11,000 ರೂ
  • ಜೈಪುರ್: 11,000 ರೂ
  • ಲಕ್ನೋ: 11,000 ರೂ
  • ಭುವನೇಶ್ವರ್: 12,000 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us