Gold Rate Today Bangalore: 10,845 ರೂಗೆ ಏರಿದ ಆಭರಣ ಚಿನ್ನದ ಬೆಲೆ

Bullion Market 2025 September 30th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದೂ ಕೂಡ ಭರ್ಜರಿ ಏರಿಕೆ ಕಂಡಿವೆ. ಚಿನ್ನದ ಬೆಲೆ 145 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10,671 ರೂನಿಂದ 10,845 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 11,831 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 150 ರೂನಿಂದ 151 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 161 ರೂ ಆಗಿದೆ.

Gold Rate Today Bangalore: 10,845 ರೂಗೆ ಏರಿದ ಆಭರಣ ಚಿನ್ನದ ಬೆಲೆ
ಚಿನ್ನ

Updated on: Sep 30, 2025 | 2:34 PM

ಬೆಂಗಳೂರು, ಸೆಪ್ಟೆಂಬರ್ 30: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಜಿಗಿಜಿಗಿದು ಓಡುತ್ತಿವೆ. ನಿನ್ನೆ ಸೋಮವಾರ 85 ರೂ ಏರಿಕೆಯಾಗಿದ್ದ ಚಿನ್ನದ ಬೆಲೆ (gold rate) ಇವತ್ತು 170 ರೂಗಳಷ್ಟು ಜಂಪ್ ಆಗಿದೆ. ಎರಡು ದಿನದ ಅಂತದಲ್ಲಿ 200ಕ್ಕೂ ಹೆಚ್ಚು ರೂಗಳಷ್ಟು ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯ ಏರಿಕೆಯೂ ಮುಂದುವರಿದಿದೆ. ನಿನ್ನೆಯಂತೆ ಇಂದೂ ಕೂಡ ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಮತ್ತೆ ಹೊಸ ದಾಖಲೆ ಸ್ಥಾಪಿಸಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,08,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,18,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,08,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 30ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,831 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,845 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 8,873 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,831 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 10,845 ರೂ
  • ಚೆನ್ನೈ: 10,860 ರೂ
  • ಮುಂಬೈ: 10,845 ರೂ
  • ದೆಹಲಿ: 10,860 ರೂ
  • ಕೋಲ್ಕತಾ: 10,845 ರೂ
  • ಕೇರಳ: 10,845 ರೂ
  • ಅಹ್ಮದಾಬಾದ್: 10,850 ರೂ
  • ಜೈಪುರ್: 10,860 ರೂ
  • ಲಕ್ನೋ: 10,860 ರೂ
  • ಭುವನೇಶ್ವರ್: 10,845 ರೂ

ಇದನ್ನೂ ಓದಿ: ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ ಶೇ. 100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 504 ರಿಂಗಿಟ್ (10,618 ರುಪಾಯಿ)
  • ದುಬೈ: 426.75 ಡಿರಾಮ್ (10,317 ರುಪಾಯಿ)
  • ಅಮೆರಿಕ: 119 ಡಾಲರ್ (10,567 ರುಪಾಯಿ)
  • ಸಿಂಗಾಪುರ: 153.70 ಸಿಂಗಾಪುರ್ ಡಾಲರ್ (10,577 ರುಪಾಯಿ)
  • ಕತಾರ್: 427 ಕತಾರಿ ರಿಯಾಲ್ (10,402 ರೂ)
  • ಸೌದಿ ಅರೇಬಿಯಾ: 435 ಸೌದಿ ರಿಯಾಲ್ (10,300 ರುಪಾಯಿ)
  • ಓಮನ್: 45.05 ಒಮಾನಿ ರಿಯಾಲ್ (10,390 ರುಪಾಯಿ)
  • ಕುವೇತ್: 34.75 ಕುವೇತಿ ದಿನಾರ್ (10,099 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 151 ರೂ
  • ಚೆನ್ನೈ: 161 ರೂ
  • ಮುಂಬೈ: 151 ರೂ
  • ದೆಹಲಿ: 151 ರೂ
  • ಕೋಲ್ಕತಾ: 151 ರೂ
  • ಕೇರಳ: 161 ರೂ
  • ಅಹ್ಮದಾಬಾದ್: 151 ರೂ
  • ಜೈಪುರ್: 151 ರೂ
  • ಲಕ್ನೋ: 151 ರೂ
  • ಭುವನೇಶ್ವರ್: 161 ರೂ
  • ಪುಣೆ: 151

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us