AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ ಶೇ. 100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

Tariffs on movies and furniture made outside US: ಅಮೆರಿಕದಿಂದ ಹೊರಗೆ ನಿರ್ಮಾಣವಾದ ಎಲ್ಲಾ ಸಿನಿಮಾಗಳ ಮೇಲೂ ಶೇ. 100ರಷ್ಟು ಟ್ಯಾರಿಫ್ ಹಾಕುತ್ತಿರುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ತಯಾರಾಗದ ಪೀಠೋಪಕರಣಗಳ ಮೇಲೂ ದೊಡ್ಡ ಪ್ರಮಾಣದ ಸುಂಕ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷರು ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್​ನಲ್ಲಿ ಇದನ್ನು ಪ್ರಕಟಿಸಿದ್ದಾರೆ.

ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ ಶೇ. 100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2025 | 8:23 PM

Share

ವಾಷಿಂಗ್ಟನ್, ಸೆಪ್ಟೆಂಬರ್ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮತ್ತೆ ಮತ್ತೆ ಟ್ಯಾರಿಫ್ ವರಸೆ ತೆಗೆಯುತ್ತಲೇ ಇದ್ದಾರೆ. ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ (movies) ನೂರಕ್ಕೆ ನೂರು ಸುಂಕವನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ನಿರ್ಮಾಣವಾಗದ ಪೀಠೋಪಕರಣಗಳಿಗೂ (Furniture) ಸಾಕಷ್ಟು ಟ್ಯಾರಿಫ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ ಈ ಹೊಸ ಟ್ಯಾರಿಫ್ ಬಾಂಬ್​ಗಳನ್ನು ಸಿಡಿಸಿದ್ದಾರೆ.

‘ಅಮೆರಿಕದ ಸಿನಿಮಾ ಬ್ಯುಸಿನೆಸ್ ಅನ್ನು ಇತರ ದೇಶಗಳು ಬಹಳ ಸುಲಭವಾಗಿ ಕದಿಯುತ್ತಿವೆ. ಬಹಳ ಅಸಮರ್ಥ ಗವರ್ನರ್ ಇರುವ ಕ್ಯಾಲಿಫೋರ್ನಿಯಾಗೆ ಇದರಿಂದ ಹೊಡೆತ ಬಿದ್ದಿದೆ. ಬಹಳ ದಿನಗಳಿಂದ ಬಗೆಹರಿಯದೇ ಉಳಿದಿದ್ದ ಈ ಸಮಸ್ಯೆಗೆ ಪರಿಹಾರ ಹುಡುಕಿದ್ದೇನೆ. ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾ ಮೇಲೂ ಶೇ. 100ರಷ್ಟು ಟ್ಯಾರಿಫ್ ಹಾಕುತ್ತಿದ್ದೇನೆ’ ಎಂದು ಟ್ರಂಪ್ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಆರ್​ಬಿಐ ಎಂಪಿಸಿ ಸಭೆ; ಅ. 1ಕ್ಕೆ ಪ್ರಮುಖ ನಿರ್ಧಾರಗಳ ಪ್ರಕಟ

ವಿದೇಶಗಳಲ್ಲಿ ಶೂಟಿಂಗ್ ಮಾಡಲಾದ ಹಾಲಿವುಡ್ ಸಿನಿಮಾಗಳಿಗೂ ಈ ಟ್ಯಾರಿಫ್ ಅನ್ವಯ ಆಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಹಾಲಿವುಡ್ ಸದ್ಯ ಸಂಕಷ್ಟದಲ್ಲಿದೆ. ಜನರು ಸಿನಿಮಾ ಮಂದಿರಗಳತ್ತ ಬರುವುದು ಕಡಿಮೆ ಆಗಿದೆ. ಹೀಗಾಗಿ, ಸಿನಿಮಾಗಳ ಬಾಕ್ಸಾಫೀಸ್ ಮಾರಾಟ ಕಡಿಎಮ ಆಗಿದೆ. ಹೆಚ್ಚಿನ ಜನರು ಥಿಯೇಟರ್​ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಒಟಿಟಿ, ಟಿವಿಯಲ್ಲೇ ನೋಡುತ್ತಿರುವ ಟ್ರೆಂಡ್ ಇದೆ. ಹೀಗಾಗಿ, ಕ್ಯಾಲಿಫೋರ್ನಿಯಾದಲ್ಲಿರುವ ಹಾಲಿವುಡ್ ಸಿನಿರಂಗ ಸದ್ಯ ಕಳೆಗುಂದಿದ ಸ್ಥಿತಿಯಲ್ಲಿದೆ.

ಪೀಠೋಪಕರಣಗಳ ಮೇಲೆ ಸುಂಕ

ಅಮೆರಿಕದಲ್ಲಿ ನಿರ್ಮಾಣವಾಗದ ಪೀಠೋಪಕರಣಗಳ ಮೇಲೆ ಸಾಕಷ್ಟು ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ನಾರ್ತ್ ಕರೋಲಿನಾ ರಾಜ್ಯದಲ್ಲಿ ಫರ್ನಿಚರ್ ಉದ್ಯಮ ಹುಲುಸಾಗಿ ಬೆಳೆದಿದೆ. ವಿಶ್ವದ ಫರ್ನಿಚರ್ ರಾಜಧಾನಿ ಎಂದು ಹೆಸರಾಗಿದೆ. ಸೆಂಚುರಿ ಫರ್ನಿಚರ್, ಇಜೆ ವಿಕ್ಟರ್, ಆಶ್ಲೀ ಫರ್ನಿಚರ್, ಬರ್ನ್​ಹಾಟ್ ಇತ್ಯಾದಿ ಪೀಠೋಪಕರಣ ತಯಾರಕ ಸಂಸ್ಥೆಗಳು ಇದೇ ರಾಜ್ಯದಲ್ಲಿ ಇರುವುದು.

ಇದನ್ನೂ ಓದಿ: ಭಾರತಕ್ಕೆ ತನ್ನ ರೇಟಿಂಗ್ ಉಳಿಸಿದ ಮೂಡೀಸ್; ಭಾರತದ ಮೇಲೆ ಅಮೆರಿಕದ ಸುಂಕದ ಪರಿಣಾಮ ಸೀಮಿತ ಎಂದ ಏಜೆನ್ಸಿ

‘ನಾರ್ತ್ ಕರೋಲಿನಾ ರಾಜ್ಯವು ತನ್ನ ಫರ್ನಿಚರ್ ಬ್ಯುಸಿನೆಸ್ ಅನ್ನು ಚೀನಾ ಹಾಗೂ ಇತರ ದೇಶಗಳಿಗೆ ಬಿಟ್ಟುಕೊಟ್ಟಿದೆ. ಈಗ ನಾರ್ತ್ ಕರೋಲಿನಾವನ್ನು ಮತ್ತೆ ಗ್ರೇಟ್ ಆಗಿಸಬೇಕಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ