Gold Rate Today Bangalore: ಚಿನ್ನದ ಬೆಲೆ ಗುರುವಾರವೂ ಹೆಚ್ಚಳ; ಇಲ್ಲಿದೆ ದರಪಟ್ಟಿ

Bullion Market 2025 July 3rd: ಇಂದು ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಕಂಡಿವೆ. ಮೂರು ದಿನದಲ್ಲಿ ಚಿನ್ನದ ಬೆಲೆ 200 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 9,065 ರೂ ಇದ್ದದ್ದು 9,105 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 9,933 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಇತ್ಯಾದಿ ಕಡೆ 110 ರೂ ಇದ್ದದ್ದು 111 ರೂಗೆ ಏರಿದೆ. ಚೆನ್ನೈನಲ್ಲಿ 120 ರೂನಿಂದ 121 ರೂಗೆ ಏರಿದೆ.

Gold Rate Today Bangalore: ಚಿನ್ನದ ಬೆಲೆ ಗುರುವಾರವೂ ಹೆಚ್ಚಳ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Jul 03, 2025 | 10:21 AM

ಬೆಂಗಳೂರು, ಜುಲೈ 3: ಚಿನ್ನದ ಬೆಲೆ ಮತ್ತೆ ಏರಿದೆ. ಮಂಗಳವಾರದಿಂದ ಹಳದಿ ಲೋಹದ ಬೆಲೆ (gold rate today) ಸತತವಾಗಿ ಏರುತ್ತಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​​ಗೆ 55 ರೂ ಹೆಚ್ಚಳಗೊಂಡಿದೆ. ವಿದೇಶಗಳಲ್ಲೂ ಹಲವೆಡೆ ಚಿನ್ನದ ಬೆಲೆ ಏರಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಇವತ್ತು ಹೆಚ್ಚಿದೆ. ಗ್ರಾಮ್​​ಗೆ ಇದರ ಬೆಲೆ 1 ರೂ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 91,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 91,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 3ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,330 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,330 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 91,050 ರೂ
  • ಚೆನ್ನೈ: 91,050 ರೂ
  • ಮುಂಬೈ: 91,050 ರೂ
  • ದೆಹಲಿ: 91,200 ರೂ
  • ಕೋಲ್ಕತಾ: 91,050 ರೂ
  • ಕೇರಳ: 91,050 ರೂ
  • ಅಹ್ಮದಾಬಾದ್: 91,100 ರೂ
  • ಜೈಪುರ್: 91,200 ರೂ
  • ಲಕ್ನೋ: 91,200 ರೂ
  • ಭುವನೇಶ್ವರ್: 91,050 ರೂ

ಇದನ್ನೂ ಓದಿ: GST: ಸಿಗರೇಟ್ ಮತ್ತಿತರ ಕೆಲ ವಸ್ತುಗಳಿಗೆ ಹೆಚ್ಚಿನ ಜಿಎಸ್​​ಟಿ; ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಸೆಸ್ ತರಲು ಸರ್ಕಾರ ಯೋಜನೆ

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,450 ರಿಂಗಿಟ್ (90,220 ರುಪಾಯಿ)
  • ದುಬೈ: 3,725 ಡಿರಾಮ್ (86,860 ರುಪಾಯಿ)
  • ಅಮೆರಿಕ: 1,045 ಡಾಲರ್ (89,500 ರುಪಾಯಿ)
  • ಸಿಂಗಾಪುರ: 1,338 ಸಿಂಗಾಪುರ್ ಡಾಲರ್ (89,980 ರುಪಾಯಿ)
  • ಕತಾರ್: 3,750 ಕತಾರಿ ರಿಯಾಲ್ (88,100 ರೂ)
  • ಸೌದಿ ಅರೇಬಿಯಾ: 3,810 ಸೌದಿ ರಿಯಾಲ್ (87,010 ರುಪಾಯಿ)
  • ಓಮನ್: 396 ಒಮಾನಿ ರಿಯಾಲ್ (88,090 ರುಪಾಯಿ)
  • ಕುವೇತ್: 303.40 ಕುವೇತಿ ದಿನಾರ್ (85,140 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,100 ರೂ
  • ಚೆನ್ನೈ: 12,100 ರೂ
  • ಮುಂಬೈ: 11,100 ರೂ
  • ದೆಹಲಿ: 11,100 ರೂ
  • ಕೋಲ್ಕತಾ: 11,100 ರೂ
  • ಕೇರಳ: 12,100 ರೂ
  • ಅಹ್ಮದಾಬಾದ್: 11,100 ರೂ
  • ಜೈಪುರ್: 11,100 ರೂ
  • ಲಕ್ನೋ: 11,100 ರೂ
  • ಭುವನೇಶ್ವರ್: 12,100 ರೂ
  • ಪುಣೆ: 11,100

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us