AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST: ಸಿಗರೇಟ್ ಮತ್ತಿತರ ಕೆಲ ವಸ್ತುಗಳಿಗೆ ಹೆಚ್ಚಿನ ಜಿಎಸ್​​ಟಿ; ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಸೆಸ್ ತರಲು ಸರ್ಕಾರ ಯೋಜನೆ

GST rates on Cigarettes may rise: ತಂಬಾಕು ಉತ್ಪನ್ನ, ಕಾರ್ಬೊನೇಟೆಡ್ ಪಾನೀಯ, ಹೈ ಎಂಡ್ ಕಾರು ಮತ್ತಿತರ ವಸ್ತುಗಳ ಮೇಲೆ ಜಿಎಸ್​ಟಿ ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಸದ್ಯ ಇರುವ ಕಾಂಪೆನ್ಸೇಶನ್ ಸೆಸ್ ಬದಲು ಗ್ರೀನ್ ಅಂಡ್ ಹೆಲ್ತ್ ಸೆಸ್ ಜಾರಿಗೆ ತರುವ ಸಾಧ್ಯತೆ ಇದೆ. ಜಿಎಸ್​ಟಿಯಲ್ಲಿ ಶೇ. 12 ಟ್ಯಾಕ್ಸ್ ಸ್ಲಾಬ್ ಅನ್ನು ತೆಗೆದುಹಾಕಿ ಜಿಎಸ್​ಟಿಯನ್ನು ಮತ್ತಷ್ಟು ಸರಳೀಕರಣ ಮಾಡುವ ಸಾಧ್ಯತೆ ಇದೆ.

GST: ಸಿಗರೇಟ್ ಮತ್ತಿತರ ಕೆಲ ವಸ್ತುಗಳಿಗೆ ಹೆಚ್ಚಿನ ಜಿಎಸ್​​ಟಿ; ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಸೆಸ್ ತರಲು ಸರ್ಕಾರ ಯೋಜನೆ
ಜಿಎಸ್​​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2025 | 7:05 PM

Share

ನವದೆಹಲಿ, ಜುಲೈ 2: ಸಿಗರೇಟ್ ಹಾಗೂ ಇತರ ಕೆಲ ವಸ್ತುಗಳ ಮೇಲೆ ತೆರಿಗೆಗಳನ್ನು ಮತ್ತಷ್ಟು ಏರಿಸಲು ಸರ್ಕಾರ ಹೊರಟಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಸಿಗರೇಟು, ಕಾರ್ಬೊನೇಟೆಡ್ ಡ್ರಿಂಕ್​​ಗಳು (Carbonated drinks), ದುಬಾರಿ ಹೈ ಎಂಡ್ ಕಾರುಗಳು ಹಾಗೂ ಇತರ ಕೆಲ ಐಷಾರಾಮಿ ವಸ್ತುಗಳ ಮೇಲೆ ಜಿಎಸ್​​ಟಿ ದರಗಳನ್ನು (GST rates) ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಎನ್​​ಡಿಟಿವಿ ಪ್ರಾಫಿಟ್ ವಾಹಿನಿಯಲ್ಲಿ ವರದಿಯಾಗಿದೆ.

ಈ ಸಿಗರೇಟು ಮತ್ತಿತರ ಉತ್ಪನ್ನಗಳ ಮೇಲೆ ಗರಿಷ್ಠ ಶೇ. 28 ಜಿಎಸ್​​ಟಿ ದರ ಇದೆ. ಜೊತೆಗೆ ಕಾಂಪೆನ್ಸೇಶನ್ ಸೆಸ್ (compensation cess) ವಿಧಿಸಲಾಗುತ್ತದೆ. ಈ ಕಾಂಪೆನ್ಸೇಶನ್ ಸೆಸ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೇಂದ್ರ ಸರ್ಕಾರವು ಈ ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಹೆಲ್ತ್ ಅಂಡ್ ಗ್ರೀನ್ ಸೆಸ್ (Health and Green Cess) ಅನ್ನು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಸಿಗರೇಟು ಮತ್ತಿತರ ವಸ್ತುಗಳಿಗೆ ಈ ಹೆಲ್ತ್ ಸೆಸ್ ಹೆಚ್ಚಿನ ಮಟ್ಟದಲ್ಲಿ ವಿಧಿಸಬಹುದು.

ಇದನ್ನೂ ಓದಿ: Cost Inflation Index: ಬೆಲೆ ಉಬ್ಬರ ಸೂಚಿಯಲ್ಲಿ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ

ದೇಶದಲ್ಲಿ ಜಿಎಸ್​​ಟಿ ವ್ಯವಸ್ಥೆ ಜಾರಿಗೆ ಬಂದಾಗ ರಾಜ್ಯಗಳಿಗೆ ಬರುತ್ತಿದ್ದ ತೆರಿಗೆ ಆದಾಯ ಕಡಿಮೆಗೊಳ್ಳುತ್ತಿತ್ತು. ಅದಕ್ಕೆ ಪರಿಹಾರವಾಗಿ ಕಾಂಪೆನ್ಸೇಶನ್ ಸೆಸ್ ಕ್ರಮವನ್ನು 2017ರಲ್ಲಿ ಜಾರಿಗೆ ತರಲಾಯಿತು. ದೇಹಕ್ಕೆ ಮತ್ತು ಪರಿಸರಕ್ಕೆ ಹಾನಿ ತರುವ ವಸ್ತುಗಳ ಮೇಲೆ ಗರಿಷ್ಠ ಜಿಎಸ್​​ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ 2026ರ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ. ಅದರ ಬದಲಾಗಿ ಹೊಸ ಸೆಸ್ ಜಾರಿಗೆ ತರಲು ಸರ್ಕಾರ ಹೊರಟಿದೆ.

ಜಿಎಸ್​​ಟಿ ಸರಳೀಕರಣ; ಹೆಚ್ಚಿನ ವಸ್ತುಗಳಿಗೆ ಟ್ಯಾಕ್ಸ್ ಇಳಿಕೆ?

ಸರ್ಕಾರವು ಜಿಎಸ್​​ಟಿ ಸ್ವರೂಪದಲ್ಲಿ ಒಂದಷ್ಟು ಮಾರ್ಪಾಡು ತರಲು ಯೋಜಿಸಿರುವುದು ತಿಳಿದುಬಂದಿದೆ. ಪ್ರಸಕ್ತ ಜಿಎಸ್​​ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್​​ಗಳಿವೆ. ಶೇ. 5, ಶೇ. 12, ಶೇ. 18 ಹಾಗೂ ಶೇ. 28 ಟ್ಯಾಕ್ಸ್ ದರ ಇದೆ. ಇದರಲ್ಲಿ ಶೇ. 12 ದರದ ಸ್ಲಾಬ್ ಅನ್ನು ತೆಗೆದುಹಾಕಬಹುದು. ಅಂದರೆ, ಶೇ. 5, ಶೇ. 18 ಮತ್ತು ಶೇ. 28ರ ಜಿಎಸ್​ಟಿ ದರ ಮಾತ್ರವೇ ಉಳಿಯುತ್ತದೆ.

ಇದನ್ನೂ ಓದಿ: SBI special: 175 ದೇಶಗಳ ಜಿಡಿಪಿಗಿಂತ ಎಸ್​ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು

ಈಗ ಹೆಚ್ಚಿನ ಸರಕುಗಳಿಗೆ ಇರುವ ತೆರಿಗೆಯು ಶೇ. 5ರ ಸ್ಲಾಬ್​ನಲ್ಲೇ ಇದೆ. ಶೇ. 12ರ ಸ್ಲಾಬ್​ನಲ್ಲಿರುವ ಸರಕುಗಳಲ್ಲಿ ಹೆಚ್ಚಿನವನ್ನು ಶೇ. 5ರ ಸ್ಲಾಬ್​​ಗೆ ವರ್ಗಾಯಿಸಬಹುದು. ಇನ್ನುಳಿದವನ್ನು ಶೇ 18ರ ಸ್ಲಾಬ್​​ಗೆ ಹಾಕಬಹುದು. ಜಿಎಸ್​ಟಿ ಕೌನ್ಸಿಲ್​​ನ ಮುಂಬರುವ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ