Gold Rate Today Bangalore: ಚಿನ್ನದ ಬೆಲೆ 10 ದಿನದಲ್ಲಿ 10 ರೂ ಮಾತ್ರವೇ ಏರಿಕೆ

Bullion Market 2025 July 6th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಕಳೆದ 10 ದಿನದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಂಡಿಲ್ಲ. ಚಿನ್ನದ ಬೆಲೆ ವಾರಾಂತ್ಯದಲ್ಲಿ ಏರಿಕೆ ಆದರೂ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​​ಗೆ 9,050 ರೂನಿಂದ 9,060 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಹತ್ತು ದಿನದ ಹಿಂದೆ 108 ರೂ ಇದ್ದದ್ದು ಈಗ 110 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ 10 ದಿನದಲ್ಲಿ 10 ರೂ ಮಾತ್ರವೇ ಏರಿಕೆ
ಚಿನ್ನ

Updated on: Jul 06, 2025 | 10:14 AM

ಬೆಂಗಳೂರು, ಜುಲೈ 6: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಅಲ್ಪ ಹೆಚ್ಚಳ ಕಂಡಿದೆ. ಗ್ರಾಮ್​​ಗೆ 10 ರೂನಷ್ಟು ಬೆಲೆ ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 9,873 ರೂನಿಂದ 9,883 ರೂಗೆ ಏರಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಸಾಕಷ್ಟು ಏರಿಳಿತಗಳು ಆಗಿದೆಯಾದರೂ ಅಂತಿಮವಾಗಿ ಅಷ್ಟೇನೂ ಬೆಲೆ ವ್ಯತ್ಯಾಸವಾಗಿಲ್ಲ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ (gold rate today) ಗ್ರಾಮ್​​ಗೆ 10 ರೂ ಮಾತ್ರವೇ ಏರಿಕೆ ಆಗಿರುವುದು. ಬೆಳ್ಳಿ ಬೆಲೆ ಇದ್ದುದರಲ್ಲಿ ತುಸು ಮೇಲಿದೆ. ಹತ್ತು ದಿನದಲ್ಲಿ ಅದು ಗ್ರಾಮ್​​ಗೆ 2 ರೂ ಹೆಚ್ಚಳ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,830 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 6ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,830 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,130 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,830 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,600 ರೂ
  • ಚೆನ್ನೈ: 90,600 ರೂ
  • ಮುಂಬೈ: 90,600 ರೂ
  • ದೆಹಲಿ: 90,750 ರೂ
  • ಕೋಲ್ಕತಾ: 90,600 ರೂ
  • ಕೇರಳ: 90,600 ರೂ
  • ಅಹ್ಮದಾಬಾದ್: 90,650 ರೂ
  • ಜೈಪುರ್: 90,750 ರೂ
  • ಲಕ್ನೋ: 90,750 ರೂ
  • ಭುವನೇಶ್ವರ್: 90,600 ರೂ

ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,450 ರಿಂಗಿಟ್ (90,130 ರುಪಾಯಿ)
  • ದುಬೈ: 3,717.50 ಡಿರಾಮ್ (86,530 ರುಪಾಯಿ)
  • ಅಮೆರಿಕ: 1,035 ಡಾಲರ್ (88,490 ರುಪಾಯಿ)
  • ಸಿಂಗಾಪುರ: 1,334 ಸಿಂಗಾಪುರ್ ಡಾಲರ್ (89,490 ರುಪಾಯಿ)
  • ಕತಾರ್: 3,740 ಕತಾರಿ ರಿಯಾಲ್ (87,740 ರೂ)
  • ಸೌದಿ ಅರೇಬಿಯಾ: 3,810 ಸೌದಿ ರಿಯಾಲ್ (86,860 ರುಪಾಯಿ)
  • ಓಮನ್: 394.50 ಒಮಾನಿ ರಿಯಾಲ್ (87,610 ರುಪಾಯಿ)
  • ಕುವೇತ್: 302.40 ಕುವೇತಿ ದಿನಾರ್ (84,680 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,000 ರೂ
  • ಚೆನ್ನೈ: 12,000 ರೂ
  • ಮುಂಬೈ: 11,000 ರೂ
  • ದೆಹಲಿ: 11,000 ರೂ
  • ಕೋಲ್ಕತಾ: 11,000 ರೂ
  • ಕೇರಳ: 12,000 ರೂ
  • ಅಹ್ಮದಾಬಾದ್: 11,000 ರೂ
  • ಜೈಪುರ್: 11,000 ರೂ
  • ಲಕ್ನೋ: 11,000 ರೂ
  • ಭುವನೇಶ್ವರ್: 12,000 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us