Gold Rate Today Bangalore: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಮತ್ತೆ ಹೊಸ ದಾಖಲೆ

Bullion Market 2025 October 7th: ಚಿನ್ನ, ಬೆಳ್ಳಿ ಬೆಲೆಗಳು ಇಂದು ಮಂಗಳವಾರವೂ ಏರಿಕೆ ಪಡೆದಿವೆ. ಚಿನ್ನದ ಬೆಲೆ 115 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 11,070 ರೂ ಇದ್ದದ್ದು 11,185 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,202 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 157 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 167 ರೂ ಆಗಿದೆ.

Gold Rate Today Bangalore: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಮತ್ತೆ ಹೊಸ ದಾಖಲೆ
ಚಿನ್ನ

Updated on: Oct 07, 2025 | 10:28 AM

ಬೆಂಗಳೂರು, ಅಕ್ಟೋಬರ್ 7: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿಯುತ್ತಲೇ ಇದೆ. ನಿನ್ನೆ ನೂರು ರೂಗೂ ಹೆಚ್ಚು ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Rate) ಇಂದು ಮಂಗಳವಾರ 115 ರೂ (ಆಭರಣ ಚಿನ್ನ) ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,200 ರೂ ಹತ್ತಿರ ಇದೆ. ಅಪರಂಜಿ ಚಿನ್ನದ ಬೆಲೆ 12,200 ರೂ ದಾಟಿ ಹೋಗಿದೆ. ಬೆಳ್ಳಿ ಬೆಲೆಯೂ ಸತತ ಏರಿಕೆ ಪಡೆಯುತ್ತಿದೆ. ನಿನ್ನೆಯಂತೆ ಇಂದೂ ಕೂಡ ಒಂದು ರೂ ಹೆಚ್ಚಳಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,11,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,22,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,11,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,700 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,202 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,185 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,152 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 157 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,202 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,185 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 157 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,185 ರೂ
  • ಚೆನ್ನೈ: 11,185 ರೂ
  • ಮುಂಬೈ: 11,185 ರೂ
  • ದೆಹಲಿ: 11,200 ರೂ
  • ಕೋಲ್ಕತಾ: 11,185 ರೂ
  • ಕೇರಳ: 11,185 ರೂ
  • ಅಹ್ಮದಾಬಾದ್: 11,190 ರೂ
  • ಜೈಪುರ್: 11,200 ರೂ
  • ಲಕ್ನೋ: 11,200 ರೂ
  • ಭುವನೇಶ್ವರ್: 11,185 ರೂ

ಇದನ್ನೂ ಓದಿ: ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 520 ರಿಂಗಿಟ್ (10,953 ರುಪಾಯಿ)
  • ದುಬೈ: 440 ಡಿರಾಮ್ (10,633 ರುಪಾಯಿ)
  • ಅಮೆರಿಕ: 123 ಡಾಲರ್ (10,917 ರುಪಾಯಿ)
  • ಸಿಂಗಾಪುರ: 157.20 ಸಿಂಗಾಪುರ್ ಡಾಲರ್ (10,809 ರುಪಾಯಿ)
  • ಕತಾರ್: 441 ಕತಾರಿ ರಿಯಾಲ್ (10,739 ರೂ)
  • ಸೌದಿ ಅರೇಬಿಯಾ: 449 ಸೌದಿ ರಿಯಾಲ್ (10,625 ರುಪಾಯಿ)
  • ಓಮನ್: 46.50 ಒಮಾನಿ ರಿಯಾಲ್ (10,720 ರುಪಾಯಿ)
  • ಕುವೇತ್: 35.96 ಕುವೇತಿ ದಿನಾರ್ (10,425 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 157 ರೂ
  • ಚೆನ್ನೈ: 167 ರೂ
  • ಮುಂಬೈ: 157 ರೂ
  • ದೆಹಲಿ: 157 ರೂ
  • ಕೋಲ್ಕತಾ: 157 ರೂ
  • ಕೇರಳ: 167 ರೂ
  • ಅಹ್ಮದಾಬಾದ್: 157 ರೂ
  • ಜೈಪುರ್: 157 ರೂ
  • ಲಕ್ನೋ: 157 ರೂ
  • ಭುವನೇಶ್ವರ್: 167 ರೂ
  • ಪುಣೆ: 157

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us