ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು
Gujarat based Nav Wireless Technologies claims to have launched Li-fi internet in US: ಗುಜರಾತ್ ಮೂಲದ ನ್ಯಾವ್ ವೈರ್ಲೆಸ್ ಟೆಕ್ನಾಲಜೀಸ್ ಸಂಸ್ಥೆ ಅಮೆರಿಕದಲ್ಲಿ ಮೊದಲ ಕಮರ್ಷಿಯಲ್ ಲೈಫೈ ಇಂಟರ್ನೆಟ್ ಅಳವಡಿಸಿದೆ. ಲೈಫೈ ಇಂಟರ್ನೆಟ್ನ ಪೇಟೆಂಟ್ ಹೊಂದಿರುವ ಕೆಲವೇ ಕಂಪನಿಗಳಲ್ಲಿ ನ್ಯಾವ್ ವೈರ್ಲೆಸ್ ಒಂದು. ವೈಫೈ ಡಾಟಾ ರವಾನೆ ಮಾಡಲು ರೇಡಿಯೋ ಸಿಗ್ನಲ್ ಬಳಸಿದರೆ, ಲೈಫೈ ಬೆಳಕನ್ನು ಉಪಯೋಗಿಸುತ್ತದೆ.

ನವದೆಹಲಿ, ಅಕ್ಟೋಬರ್ 6: ಭಾರತ ಮೂಲದ ನ್ಯಾವ್ ವೈರ್ಲೆಸ್ ಟೆಕ್ನಾಲಜೀಸ್ (Nav Wireless Technologies) ಸಂಸ್ಥೆ ನ್ಯೂಯಾರ್ಕ್ನಲ್ಲಿ ಲೈಫೈ ಇಂಟರ್ನೆಟ್ ಸಿಸ್ಟಂ (Li-fi Internet System) ಅನ್ನು ಅಳವಡಿಸಿದೆ. ಇದು ಅಮೆರಿಕದ ಮೊದಲ ಕಮರ್ಷಿಯಲ್ ಲೈಫೈ ಸಿಸ್ಟಂ ಎನಿಸಿದೆ. ಜೆಸ್ಕೋ ವೆಂಚರ್ ಲ್ಯಾಬ್ಸ್ (JESCO Venture Labs) ಎನ್ನುವ ಬ್ಯುಸಿನೆಸ್ ಕನ್ಸಲ್ಟಿಂಗ್ ಕಂಪನಿಯ ಸಹಯೋಗದಲ್ಲಿ ನ್ಯಾವ್ ವೈರ್ಲೆಸ್ ಟೆಕ್ನಾಲಜೀಸ್ ಸಂಸ್ಥೆ ನ್ಯೂಯಾರ್ಕ್ನ ಸಿಲಿಕಾನ್ ಹಾರ್ಲೆಮ್ ಆಫೀಸ್ನಲ್ಲಿ (Silicon Harlem Office) ಲೈಫೈ ಅಳವಡಿಸಿದೆ.
ಲೈಫೈ ಇಂಟರ್ನೆಟ್ ಹೇಗೆ?
ಲೈಫೈ ಎಂಬುದು ಟಾಟಾ ವರ್ಗಾವಣೆ ಮಾಡುವ ಒಂದು ಮಾಧ್ಯಮ. ವೈಫೈಗೆ ಹೋಲಿಸಬಹುದಾದರೂ ಅದಕ್ಕಿಂತ ಇದು ಭಿನ್ನ. ವೈಫೈ ಎಂಬುದು ರೇಡಿಯೋ ಫ್ರೀಕ್ವೆನ್ಸಿ ಬಳಸಿ ಡಾಟಾ ರವಾನೆ ಮಾಡುತ್ತದೆ. ಲೈಫೈ ಲೈಟ್ ಅಥವಾ ಬೆಳಕನ್ನು ಉಪಯೋಗಿಸಿ ಡಾಟಾ ಟ್ರಾನ್ಸ್ಮಿಟ್ ಮಾಡುತ್ತದೆ.
ಇದನ್ನೂ ಓದಿ: ಆರ್ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್ಸಿಇಪಿ?
ಲೈಫೈ ಟೆಕ್ನಾಲಜಿಯಲ್ಲಿ ಅಧಿಕ ವೇಗದ ಇಂಟರ್ನೆಟ್ ಸಿಗುತ್ತದೆ. ಹೆಚ್ಚು ಸೆಕ್ಯೂರಿಟಿ ಮತ್ತು ಕಡಿಮೆ ಎಲೆಕ್ಟ್ರೋಮ್ಯಾಗ್ನೆಟ್ ತಡೆ ಇರುತ್ತದೆ. ಆದರೆ, ವೈಫೈನಷ್ಟು ಹೆಚ್ಚು ವ್ಯಾಪಕತೆ ಲೈಫೈಗೆ ಇರುವುದಿಲ್ಲ.
ಅಂದರೆ, ಲೈಫೈನ ಶ್ರೇಣಿ ಚಿಕ್ಕದಾಗಿರುತ್ತದೆ. ಎಲ್ಇಡಿ ಬೆಳಕು ಬೀಳುವ ಸ್ಥಳದವರೆಗೆ ಇಂಟರ್ನೆಟ್ ಸಿಗುತ್ತದೆ. ಆಸ್ಪತ್ರೆ ಇತ್ಯಾದಿ ನಿರ್ದಿಷ್ಟ ಪರಿಸರಗಳಿಗೆ ಇದು ಸೂಕ್ತವಾಗಿರುತ್ತದೆ. ಆದರೆ, ಇದರ ಇಂಟರ್ನೆಟ್ ವೇಗ ಬಹಳ ಅಧಿಕ ಇರುತ್ತದೆ ಎಂಬುದು ಇದರ ಪ್ಲಸ್ ಪಾಯಿಂಟ್. ಹಾಗೆಯೇ, ತಡೆರಹಿತ ಇಂಟರ್ನೆಟ್ ಒದಗಿಸುವುದು ಇದರ ಇನ್ನೊಂದು ಮುಖ್ಯ ಪ್ಲಸ್ ಪಾಯಿಂಟ್.
ಇದನ್ನೂ ಓದಿ: ರತನ್ ಟಾಟಾ ನಿಧನದ ನಂತರ ಟಾಟಾ ಗ್ರೂಪ್ನಲ್ಲಿ ಒಡಕು; 30 ಲಕ್ಷ ಕೋಟಿ ಉದ್ಯಮ ಸಾಮ್ರಾಜ್ಯದ ಭವಿಷ್ಯದ ಕಥೆ?
ಲೈಫೈ ಟೆಕ್ನಾಲಜಿಯ ಪೇಟೆಂಟ್ ಹೊಂದಿರುವ ವಿಶ್ವದ ಕೆಲವೇ ಕಂಪನಿಗಳಲ್ಲಿ ನ್ಯಾವ್ ವೈರ್ಲೆಸ್ ಟೆಕ್ನಾಲಜೀಸ್ ಒಂದು. ಅಮೆರಿಕದಲ್ಲಿ ಮೊದಲ ಕಮರ್ಷಿಯಲ್ ಲೈಫೈ ಅಳವಡಿಕೆಯಲ್ಲಿ ತಮ್ಮ ಕಂಪನಿಯ ಪಾತ್ರ ಇರುವುದು ಭಾರತಕ್ಕೂ ಒಂದು ಹೆಮ್ಮೆಯ ಕ್ಷಣ ಎಂದು ಆ ಕಂಪನಿಯ ಸಹ-ಸಂಸ್ಥಾಪಕ ಹಾರ್ದಿಕ್ ಸೋನಿ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




