AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್​ಸಿಇಪಿ?

China ready to import more from India if it joins RCEP: ಭಾರತದಿಂದ ತಾನು ಹೆಚ್ಚು ಆಮದು ಮಾಡಿಕೊಳ್ಳಲು ಸಿದ್ಧ ಇರುವುದಾಗಿ ಚೀನಾ ಹೇಳಿದೆ. ಆದರೆ, ಒಂದು ಷರತ್ತು ಕೂಡ ಹಾಕಿದೆ. ಭಾರತ ಪ್ರಾದೇಶಿಕ ಸಮಗ್ರ ವ್ಯಾಪಾರ ಒಪ್ಪಂದಕ್ಕೆ (ಆರ್​ಸಿಇಪಿ) ಸಹಿ ಹಾಕಬೇಕು ಎನ್ನುವುದು ಷರತ್ತು. ಚೀನಾ ನೇತೃತ್ವದ ಆರ್​​ಸಿಇಪಿ ವಿಶ್ವದ ಅತಿದೊಡ್ಡ ವ್ಯಾಪಾರ ಕೂಟ. ಭಾರತ ಕೊನೆಯ ಕ್ಷಣದಲ್ಲಿ ಇದರಿಂದ ಹಿಂದಕ್ಕೆ ಸರಿದಿತ್ತು.

ಆರ್​ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್​ಸಿಇಪಿ?
ಚೀನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2025 | 12:54 PM

Share

ನವದೆಹಲಿ, ಅಕ್ಟೋಬರ್ 6: ಭಾರತ ಮತ್ತು ಚೀನಾ ನಡುವೆ ಆಮದು ಮತ್ತು ರಫ್ತು ಅಂತರ ಬಹಳ ಗಣನೀಯವಾಗಿ ಇದೆ. ಚೀನಾದೊಂದಿಗೆ (China) ಮುಕ್ತವಾಗಿ ವ್ಯಾಪಾರ ಮಾಡಲು ಭಾರತಕ್ಕೆ ಭಯ ಇರುವುದು ಇದೇ ಕಾರಣಕ್ಕೆ. ಇದೇ ವೇಳೆ, ಚೀನಾ ತಾನು ಭಾರತದಿಂದ ಹೆಚ್ಚು ಸರಕುಗಳನ್ನು ಖರೀದಿಸಲು ಸಿದ್ಧ ಇರುವುದಾಗಿ ಹೇಳಿದೆ. ಆದರೆ, ಅದಕ್ಕೆ ಒಂದು ಷರತ್ತನ್ನೂ ಸೇರಿಸಿದೆ. ಚೀನಾದ ಮಹತ್ವಾಕಾಂಕ್ಷಿ ವ್ಯಾಪಾರ ಕೂಟವಾದ ಆರ್​ಸಿಇಪಿಯನ್ನು (RCEP- Regional Comprehensive Economic Partnership) ಭಾರತ ಸೇರಬೇಕು ಎನ್ನುವುದು ಅದರ ಷರತ್ತು.

ಚೀನಾದ ಸೆಂಟರ್ ಫಾರ್ ಇಂಟರ್​ನ್ಯಾಷನಲ್ ಫೈನಾನ್ಸ್ ಸ್ಟಡೀಸ್​ನ ನಿರ್ದೇಶಕ ಹಾಗೂ ಆರ್ಥಿಕ ತಜ್ಞ ಲಿಖಿಂಗ್ ಝಾಂಗ್ (Liqing Zhang) ಅವರು ಈ ಮಾತು ಹೇಳಿದ್ದಾರೆ. ಕೌಟಿಲ್ಯ ಎಕನಾಮಿಕ್ಸ್ ಕಾಂಕ್ಲೇವ್ ಕಾರ್ಯಕ್ರಮದ ವೇಳೆ ಎಕನಾಮಿಕ್ ಟೈಮ್ಸ್ ಜತೆ ಮಾತನಾಡುತ್ತಿದ್ದ ಝಾಂಗ್, ಭಾರತವು ಆರ್​ಸಿಇಪಿಗೆ ಸೇರಿದರೆ ಅದರ ಸರಕುಗಳು ಮುಕ್ತಾವಕಾಶ ಪಡೆಯುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ

ಭಾರತವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್​ಸಿಇಪಿ) ಸೇರ್ಪಡೆಯಾದರೆ ಅದರ ಸರಕುಗಳ ಮೇಲಿನ ಸುಂಕಗಳು ಒಂದು ದಶಕದಲ್ಲೇ ಸೊನ್ನೆಗೆ ಬರುತ್ತವೆ. ಇದರಿಂದ ಅದರ ಸರಕುಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ ಎಂದು ಚೀನಾದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಆರ್​ಸಿಇಪಿ ಕೂಟ?

ಆರ್​ಸಿಇಪಿ ಎಂಬುದು ವಿವಿಧ ದೇಶಗಳು ಸೇರಿ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ. ಮೂಲತಃ ಇದು ಏಷ್ಯಾ ಪೆಸಿಫಿಕ್ ದೇಶಗಳನ್ನು ಒಳಗೊಂಡಿದೆ. ಅಸಿಯನ್ ರಾಷ್ಟ್ರಗಳಾದ ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್, ಥಾಯ್ಲೆಂಡ್ ಮೊದಲಾದವು ಸೇರಿವೆ. ಏಷ್ಯನ್ ದೈತ್ಯ ಶಕ್ತಿಯಾದ ಚೀನಾ ಇದೆ. ಪೆಸಿಫಿಕ್ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದವಿವೆ.

2011ರಲ್ಲಿ ಆರ್​ಸಿಇಪಿ ಯೋಜನೆ ಪ್ರಸ್ತಾಪ ಆಗಿದ್ದು. 2012ರಲ್ಲಿ ಅಸಿಲಿಯನ್ ಶೃಂಗಸಭೆಯಲ್ಲಿ ಇದು ಶುರುವಾಯಿತು. 2020ರಲ್ಲಿ ವಿವಿಧ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಆರ್​ಸಿಇಪಿ ಅಧಿಕೃತವಾಗಿ ಕಾರ್ಯಾರಂಭಗೊಂಡಿತು.

ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು

ಆರಂಭದಲ್ಲಿ ಭಾರತವೂ ಈ ಕೂಟಕ್ಕೆ ಸೇರಲು ಯತ್ನಿಸಿತ್ತು. ಆದರೆ, ಚೀನಾ ಈ ಕೂಟದಲ್ಲಿ ಪ್ರಾಬಲ್ಯ ಹೊಂದಿರುವುದು, ಹಾಗೂ ಆ ದೇಶವು ಭಾರತದ ಮೇಲೆ ಗಡಿ ಸಂಘರ್ಷ ಮಾಡುತ್ತಿದ್ದುದು, ಆರ್​ಸಿಇಪಿಯಿಂದ ಭಾರತ ಸಂಪೂರ್ಣ ವಿಮುಖಗೊಂಡಿತು.

ಆರ್​ಸಿಇಪಿ ಒಪ್ಪಂದಕ್ಕೆ 15 ದೇಶಗಳು ಸಹಿ ಹಾಕಿವೆ. ವಿಶ್ವದ ಶೇ. 30ರಷ್ಟು ಜಿಡಿಪಿಯನ್ನು ಈ ದೇಶಗಳು ಹೊಂದಿವೆ. ವಿಶ್ವದ ಶೇ. 30ರಷ್ಟು ಜನಸಂಖ್ಯೆಯೂ ಈ ದೇಶಗಳಲ್ಲಿವೆ. ಈ ಒಪ್ಪಂದದ ಪ್ರಕಾರ ಸದಸ್ಯ ದೇಶಗಳ ನಡುವಿನ ವ್ಯಾಪಾರದಲ್ಲಿ ಶೇ. 90ರಷ್ಟು ಸುಂಕಗಳನ್ನು ನಿವಾರಿಸಲಾಗುತ್ತದೆ. ಸಂಪೂರ್ಣ ಸುಂಕ ರಹಿತ ವ್ಯಾಪಾರ ನಡೆಸುವಂತಾಗಬೇಕು ಎಂಬುದು ಗುರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ