Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ; ದಾಖಲೆ ಬೆಲೆ

Bullion Market 2025 October 9th: ಚಿನ್ನ ಮತ್ತು ಬೆಳ್ಳಿ ಬೆಲೆಗಳ ನಿರಂತರ ಏರಿಕೆ ಗುರುವಾರವೂ ಮುಂದುವರಿದಿದೆ. ಇಂದು ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಏರಿದರೆ, ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,360 ರೂನಿಂದ 11,380 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,415 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 161 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 171 ರೂ ಆಗಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ; ದಾಖಲೆ ಬೆಲೆ
ಚಿನ್ನ

Updated on: Oct 09, 2025 | 10:26 AM

ಬೆಂಗಳೂರು, ಅಕ್ಟೋಬರ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಧ್ಯೆ ಇನ್ನಿಲ್ಲದ ಪೈಪೋಟಿ ಬಿದ್ದಂತಿದೆ. ಎರಡೂ ಕೂಡ ನಾ ಮುಂದೋ ತಾ ಮುಂದೋ ಎಂದು ಎಗ್ಗಿಲ್ಲದೆ ಹೆಚ್ಚುತ್ತಾ ಹೋಗಿವೆ. ಬೆಳ್ಳಿ ಬೆಲೆ (silver rates) ಒಂದು ತಿಂಗಳ ಅಂತದಲ್ಲಿ ಬರೋಬ್ಬರಿ 30 ರೂ ಏರಿಕೆ ಕಂಡಿದೆ. ಬಹುತೇಕ ಶೇ. 20-25ರಷ್ಟು ಬೆಲೆ ಏರಿಕೆ ಒಂದೇ ತಿಂಗಳಲ್ಲಿ ಆಗಿದೆ. ಚಿನ್ನವೂ ಕೂಡ ಸಿಕ್ಕಾಪಟ್ಟೆ ಏರಿದೆ. ಕಳೆದ ಒಂದು ಮತ್ತು ಒಂದೂವರೆ ವರ್ಷದಿಂದ ಚಿನ್ನ, ಬೆಳ್ಳಿ ಬೆಲೆಗಳು ಅಕ್ಷರಶಃ ನಾಗಾಲೋಟ ಮಾಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,13,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,24,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,13,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,415 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,380 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,311 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 161 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,415 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,380 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 161 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,380 ರೂ
  • ಚೆನ್ನೈ: 11,380 ರೂ
  • ಮುಂಬೈ: 11,380 ರೂ
  • ದೆಹಲಿ: 11,395 ರೂ
  • ಕೋಲ್ಕತಾ: 11,380 ರೂ
  • ಕೇರಳ: 11,380 ರೂ
  • ಅಹ್ಮದಾಬಾದ್: 11,385 ರೂ
  • ಜೈಪುರ್: 11,395 ರೂ
  • ಲಕ್ನೋ: 11,395 ರೂ
  • ಭುವನೇಶ್ವರ್: 11,380 ರೂ

ಇದನ್ನೂ ಓದಿ: PM SVANidhi Scheme: ಸ್ವಂತ ಉದ್ಯೋಗಿಗಳಿಗೆ ನೆರವಾಗುವ ಪಿಎಂ ಸ್ವನಿಧಿ ಸ್ಕೀಮ್ ಬಗ್ಗೆ ಮಾಹಿತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 530 ರಿಂಗಿಟ್ (11,163 ರುಪಾಯಿ)
  • ದುಬೈ: 450.50 ಡಿರಾಮ್ (10,889 ರುಪಾಯಿ)
  • ಅಮೆರಿಕ: 126 ಡಾಲರ್ (11,186 ರುಪಾಯಿ)
  • ಸಿಂಗಾಪುರ: 161.60 ಸಿಂಗಾಪುರ್ ಡಾಲರ್ (11,088 ರುಪಾಯಿ)
  • ಕತಾರ್: 450.50 ಕತಾರಿ ರಿಯಾಲ್ (10,972 ರೂ)
  • ಸೌದಿ ಅರೇಬಿಯಾ: 459 ಸೌದಿ ರಿಯಾಲ್ (10,864 ರುಪಾಯಿ)
  • ಓಮನ್: 47.50 ಒಮಾನಿ ರಿಯಾಲ್ (10,954 ರುಪಾಯಿ)
  • ಕುವೇತ್: 36.86 ಕುವೇತಿ ದಿನಾರ್ (10,711 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 161 ರೂ
  • ಚೆನ್ನೈ: 171 ರೂ
  • ಮುಂಬೈ: 161 ರೂ
  • ದೆಹಲಿ: 161 ರೂ
  • ಕೋಲ್ಕತಾ: 161 ರೂ
  • ಕೇರಳ: 171 ರೂ
  • ಅಹ್ಮದಾಬಾದ್: 161 ರೂ
  • ಜೈಪುರ್: 161 ರೂ
  • ಲಕ್ನೋ: 161 ರೂ
  • ಭುವನೇಶ್ವರ್: 171 ರೂ
  • ಪುಣೆ: 161

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:18 am, Thu, 9 October 25

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us