ಚಿನ್ನ
ಬೆಂಗಳೂರು, ಏಪ್ರಿಲ್ 12: ಚಿನ್ನದ ಬೆಲೆ (Gold and silver Rates) ಇಂದು ಹೆಚ್ಚಳವಾದರೂ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ ದರ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಾಣುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿತು. ಕಳೆದ 15 ದಿನಗಳಿಂದ ಚಿನ್ನದ ಬೆಲೆ ದಾಖಲೆಯ ವೇಗದಲ್ಲಿ ಹೆಚ್ಚಿದೆ. ಈಗ ಫೆಡರಲ್ ರಿಸರ್ವ್ಸ್ ದರ ಇಳಿಕೆ ಆಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಸಂಭವ ಕಾಣುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,450 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,220 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,220 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 66,200 ರೂ
- ಚೆನ್ನೈ: 67,250 ರೂ
- ಮುಂಬೈ: 66,200 ರೂ
- ದೆಹಲಿ: 66,350 ರೂ
- ಕೋಲ್ಕತಾ: 66,200 ರೂ
- ಕೇರಳ: 66,200 ರೂ
- ಅಹ್ಮದಾಬಾದ್: 66,250 ರೂ
- ಜೈಪುರ್: 66,350 ರೂ
- ಲಕ್ನೋ: 66,350 ರೂ
- ಭುವನೇಶ್ವರ್: 66,200 ರೂ
ಇದನ್ನೂ ಓದಿ: ಡಿಜಿಟಲ್ ಆಗಿ ತಲುಪಿಸುವ ಸೇವೆಗಳ ರಫ್ತು: ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿ ಭಾರತ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,500 ರಿಂಗಿಟ್ (61,482 ರುಪಾಯಿ)
- ದುಬೈ: 2,615 ಡಿರಾಮ್ (59,372 ರುಪಾಯಿ)
- ಅಮೆರಿಕ: 715 ಡಾಲರ್ (59,621 ರುಪಾಯಿ)
- ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,620 ರುಪಾಯಿ)
- ಕತಾರ್: 2,670 ಕತಾರಿ ರಿಯಾಲ್ (61,061 ರೂ)
- ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,354 ರುಪಾಯಿ)
- ಓಮನ್: 283.50 ಒಮಾನಿ ರಿಯಾಲ್ (61,406 ರುಪಾಯಿ)
- ಕುವೇತ್: 224 ಕುವೇತಿ ದಿನಾರ್ (60,655 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,450 ರೂ
- ಚೆನ್ನೈ: 8,850 ರೂ
- ಮುಂಬೈ: 8,500 ರೂ
- ದೆಹಲಿ: 8,500 ರೂ
- ಕೋಲ್ಕತಾ: 8,500 ರೂ
- ಕೇರಳ: 8,850 ರೂ
- ಅಹ್ಮದಾಬಾದ್: 8,500 ರೂ
- ಜೈಪುರ್: 8,500 ರೂ
- ಲಕ್ನೋ: 8,500 ರೂ
- ಭುವನೇಶ್ವರ್: 8,850 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ