Gold Silver Price on 11 August: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಡಾಲರ್ ಎಫೆಕ್ಟ್ನಿಂದ ಚಿನ್ನ ಪ್ರಿಯರಿಗೆ ಸುಗ್ಗಿಕಾಲ
Bullion Market 2023, August 11th: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,670 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 73 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಆಗಸ್ಟ್ 11: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold Rates) ಇಳಿಕೆ ಮುಂದುವರಿಯುತ್ತಿದೆ. ಅಮೆರಿಕನ್ ಡಾಲರ್ ಪ್ರಬಲಗೊಳ್ಳುತ್ತಿರುವುದು ಹಾಗೂ ಅಲ್ಲಿ ಬಡ್ಡಿದರ ಏರಿಕೆಯಾಗುವ ನಿರೀಕ್ಷೆ ಇರುವುದು ಚಿನ್ನದ ಮೇಲಿನ ಹೂಡಿಕೆ ಕಡಿಮೆಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಸ್ವರ್ಣ ಲೋಹದ ಬೆಲೆ ಎಲ್ಲೆಡೆ ಇಳಿಯುತ್ತಿದೆ. ಇವತ್ತೂ ಕೂಡ ಚಿನ್ನದ ಬೆಲೆ ಮತ್ತಷ್ಟು ಇಳಿಯುವ ಸೂಚನೆ ಇದೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಇಳಿಕೆ ತಾತ್ಕಾಲಿಕ ಮಾತ್ರ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಆದರೆ ತಾತ್ಕಾಲಿಕ ಎಂದರೆ ಎಷ್ಟು ಅವಧಿಯವರೆಗೆ ಈ ಇಳಿಕೆ ಇರುತ್ತದೆ ಎಂಬುದು ಗೊತ್ತಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,225 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 11ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 72.25 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,700 ರೂ
- ಚೆನ್ನೈ: 55,050 ರೂ
- ಮುಂಬೈ: 54,700 ರೂ
- ದೆಹಲಿ: 54,850 ರೂ
- ಕೋಲ್ಕತಾ: 54,700 ರೂ
- ಕೇರಳ: 54,700 ರೂ
- ಅಹ್ಮದಾಬಾದ್: 54,750 ರೂ
- ಜೈಪುರ್: 54,850 ರೂ
- ಲಕ್ನೋ: 54,850 ರೂ
- ಭುವನೇಶ್ವರ್: 54,700 ರೂ
ಇದನ್ನೂ ಓದಿ: Arecanut Price 10 August: ಅಡಿಕೆ ಧಾರಣೆ; ಪ್ರಮುಖ ಮಾರುಕಟ್ಟೆಯಲ್ಲಿ ಇಂದು ಕೋಕೋ, ಅಡಿಕೆ ದರ ಹೀಗಿದೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,810 ರಿಂಗಿಟ್ (50,808 ರುಪಾಯಿ)
- ದುಬೈ: 2150 ಡಿರಾಮ್ (48,387 ರುಪಾಯಿ)
- ಅಮೆರಿಕ: 590 ಡಾಲರ್ (48,775 ರುಪಾಯಿ)
- ಸಿಂಗಾಪುರ: 803 ಸಿಂಗಾಪುರ್ ಡಾಲರ್ (49,349 ರುಪಾಯಿ)
- ಕತಾರ್: 2,215 ಕತಾರಿ ರಿಯಾಲ್ (50,235 ರೂ)
- ಓಮನ್: 234.50 ಒಮಾನಿ ರಿಯಾಲ್ (50,353 ರುಪಾಯಿ)
- ಕುವೇತ್: 185 ಕುವೇತಿ ದಿನಾರ್ (49,772 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,225 ರೂ
- ಚೆನ್ನೈ: 7,620 ರೂ
- ಮುಂಬೈ: 7,300 ರೂ
- ದೆಹಲಿ: 7,300 ರೂ
- ಕೋಲ್ಕತಾ: 7300 ರೂ
- ಕೇರಳ: 7,620 ರೂ
- ಅಹ್ಮದಾಬಾದ್: 7,300 ರೂ
- ಜೈಪುರ್: 7,300 ರೂ
- ಲಕ್ನೋ: 7,300 ರೂ
- ಭುವನೇಶ್ವರ್: 7,620 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ