Gold Silver Price on 15 December: ಚಿನ್ನ, ಬೆಳ್ಳಿ ಬೆಲೆ ಸೂಪರ್ ಜಿಗಿತ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2023, December 15th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,890 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 77.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 57,650 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,275 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 15 December: ಚಿನ್ನ, ಬೆಳ್ಳಿ ಬೆಲೆ ಸೂಪರ್ ಜಿಗಿತ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Dec 15, 2023 | 5:00 AM

ಬೆಂಗಳೂರು, ಡಿಸೆಂಬರ್ 15: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಸಖತ್ ಜಿಗಿತ ಕಂಡಿದೆ. ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿಯಲ್ಲಿರುವುದು ಮತ್ತು ಮುಂದೆ ಬಡ್ಡಿದರ ಏರಿಕೆ ಸಾಧ್ಯತೆ ಇಲ್ಲದೇ ಇರುವುದು ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ತೀವ್ರ ಗತಿಯಲ್ಲಿ ಮೇಲೇರಿದೆ. ಗ್ರಾಮ್ ಚಿನ್ನ ಬರೋಬ್ಬರಿ 100 ರೂನಷ್ಟು ಹೆಚ್ಚಾಗಿದೆ. ಬೆಳ್ಳಿ ಎರಡೂವರೆ ರೂನಷ್ಟು ಜಿಗಿತ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,275 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 15ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 775 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 57,650 ರೂ
  • ಚೆನ್ನೈ: 58,200 ರೂ
  • ಮುಂಬೈ: 57,650 ರೂ
  • ದೆಹಲಿ: 57,800 ರೂ
  • ಕೋಲ್ಕತಾ: 57,650 ರೂ
  • ಕೇರಳ: 57,650 ರೂ
  • ಅಹ್ಮದಾಬಾದ್: 57,700 ರೂ
  • ಜೈಪುರ್: 57,800 ರೂ
  • ಲಕ್ನೋ: 57,800 ರೂ
  • ಭುವನೇಶ್ವರ್: 57,650 ರೂ

ಇದನ್ನೂ ಓದಿ: ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (53,134 ರುಪಾಯಿ)
  • ದುಬೈ: 2,285 ಡಿರಾಮ್ (51,833 ರುಪಾಯಿ)
  • ಅಮೆರಿಕ: 610 ಡಾಲರ್ (50,810 ರುಪಾಯಿ)
  • ಸಿಂಗಾಪುರ: 842 ಸಿಂಗಾಪುರ್ ಡಾಲರ್ (52,777 ರುಪಾಯಿ)
  • ಕತಾರ್: 2,345 ಕತಾರಿ ರಿಯಾಲ್ (53,574 ರೂ)
  • ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,186 ರುಪಾಯಿ)
  • ಓಮನ್: 248 ಒಮಾನಿ ರಿಯಾಲ್ (53,668 ರುಪಾಯಿ)
  • ಕುವೇತ್: 195.50 ಕುವೇತಿ ದಿನಾರ್ (52,972 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,275 ರೂ
  • ಚೆನ್ನೈ: 7,950 ರೂ
  • ಮುಂಬೈ: 7,750 ರೂ
  • ದೆಹಲಿ: 7,750 ರೂ
  • ಕೋಲ್ಕತಾ: 7,750 ರೂ
  • ಕೇರಳ: 7,950 ರೂ
  • ಅಹ್ಮದಾಬಾದ್: 7,750 ರೂ
  • ಜೈಪುರ್: 7,750 ರೂ
  • ಲಕ್ನೋ: 7,750 ರೂ
  • ಭುವನೇಶ್ವರ್: 7,950 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us