AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ

Truck Owners Oppose Mandatory AC Cabin: ಟ್ರಕ್ ಚಾಲಕರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಸರಕು ಸಾಗಣೆ ವಾಹನಗಳಲ್ಲಿ ಡ್ರೈವರ್ ಕ್ಯಾಬಿನ್​ಗೆ ಎಸಿ ಅಳವಡಿಕೆ 2025ರ ಅಕ್ಟೋಬರ್​ನಿಂದ ಕಡ್ಡಾಯಪಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಷಣ್ಮುಗಪ್ಪ ಟಿವಿ9 ಜೊತೆ ಮಾತನಾಡಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಜೀವಿತಾವಧಿ ತೆರಿಗೆ ವಿಧಿಸುವುದನ್ನ ಹಿಂಪಡೆದಿರೋದಕ್ಕೆ ಲಾರಿ ಮಾಲೀಕರು ಖುಷಿ ಆಗಿದ್ದಾರೆ.

ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ
ಸಾಂದರ್ಭಿಕ ಚಿತ್ರ
Vinayak Hanamant Gurav
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Dec 14, 2023 | 5:46 PM

Share

ಬೆಂಗಳೂರು, ಡಿಸೆಂಬರ್ 14: ಎಲ್ಲಾ ಕರ್ಮಷಿಯಲ್ ಟ್ರಕ್ ವಾಹನಗಳಲ್ಲಿ 2025ರ ಅಕ್ಟೋಬರ್​ನಿಂದ ಎಸಿ ಕ್ಯಾಬಿನ್ (Air Condition System) ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಇಲಾಖೆ ಮೊನ್ನೆ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಸಿ ಅಳವಡಿಕೆಯಿಂದ ಶೇ. 40ರಷ್ಟು ಡೀಸೆಲ್ ಬಳಕೆ ಆಗುತ್ತದೆ. ಎಂಜಿನ್ ಬೇಗ ಕೆಡುತ್ತದೆ. ಎಸಿ ಅಳವಡಿಕೆಯನ್ನು ಕಡ್ಡಾಯ ಮಾಡುವುದು ಬೇಡ. ಪರ್ಯಾಯ ಮಾರ್ಗ ಕೊಡಿ ಎಂದು ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆ (All India Motor Transport congress) ಅಧ್ಯಕ್ಷ ಷಣ್ಮುಗಪ್ಪ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಮೋಟಾರು ವಾಹನ ತೆರಿಗೆ 2023 ರ ವಿಧೇಯಕ ಮಂಡನೆಯಾಗಿತ್ತು. ಈ ಬಗ್ಗೆ ಲಾರಿ ಮಾಲೀಕರ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರ ಜೀವಿತಾವಧಿ ತೆರಿಗೆ ವಿಧಿಸುವುದನ್ನ ಹಿಂಪಡೆದು, ಹಿಂದಿನಂತೆ ತ್ರೈಮಾಸಿಕ ತೆರಿಗೆ ಸಂಗ್ರಹ ಕಲ್ಪಿಸಲು ಅವಕಾಶ ನೀಡಿ 2 ನೇ ವಿಧೇಯಕ ಮೂಲಕ ತಿದ್ದುಪಡಿಗೆ ಮಂಡನೆ ಮಾಡಿತ್ತು. ಇದನ್ನು ಸ್ವಾಗತಿಸಿರುವ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: EV Import: ಎಲೆಕ್ಟ್ರಿಕ್ ಕಾರು ಆಮದಿಗೆ ತೆರಿಗೆ ವಿನಾಯಿತಿ ಇಲ್ಲ: ಸರ್ಕಾರ ಸಂದೇಶ; ಇಲಾನ್ ಮಸ್ಕ್, ಟೆಸ್ಲಾ ಮುಂದಿನ ಹಾದಿ ಏನು?

ಪ್ರಸ್ತುತ, ಯಾವ ವಾಹನಕ್ಕೆ ಎಷ್ಟು ತೆರಿಗೆ?

  • 1.5 ಟನ್‍ನಿಂದ 2 ಟನ್ ತೂಕದ ಹೊಸ ಸರಕು ಸಾಗಣೆ ವಾಹನಗಳಿಗೆ 20 ಸಾವಿರ ರೂ.
  • 2 ರಿಂದ 3 ಟನ್ ವಾಹನಗಳಿಗೆ 30 ಸಾವಿರ ರೂ.
  • 3 ರಿಂದ 5.5 ಟನ್ ವಾಹನಗಳಿಗೆ 40 ಸಾವಿರ ರೂ.
  • 5.5 ರಿಂದ 7.5 ಟನ್ ತೂಕದ ವಾಹನಗಳಿಗೆ 60 ಸಾವಿರ ರೂ.
  • 7.5 ರಿಂದ 9.5 ಟನ್ ವಾಹನಗಳಿಗೆ 80 ಸಾವಿರ ರೂ.
  • 9.5 ಟನ್‍ನಿಂದ 12 ಟನ್ ತೂಕದ ವಾಹನಗಳಿಗೆ 1 ಲಕ್ಷ ರೂ. ಜೀವಿತಾವಧಿ ತೆರಿಗೆ ನಿಗದಿ
  • 5 ಲಕ್ಷ ರೂ. ಮೀರದ ಹೊಸ ಸಾರ್ವಜನಿಕ ವಾಹನಗಳ ನೋಂದಣಿಗೆ ಅದರ ಬೆಲೆಯ ಶೇ. 13ರಷ್ಟು.
  • 10 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ.14.
  • 20 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ. 17
  • 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಅದರ ಬೆಲೆಯ ಶೇ.18
  • ವಿದ್ಯುತ್ ಚಾಲಿತ ವಾಹನಗಳಿಗೆ ಅದರ ಬೆಲೆಯ ಶೇ. 4ರಷ್ಟು ತೆರಿಗೆ ನಿಗದಿ.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಳದ ಹಿಂದೆ ಇದೆಯಾ ಅಮೆರಿಕದ ಬಡ್ಡಿದರ? ಬಡ್ಡಿಗೂ ಚಿನ್ನಕ್ಕೂ ಏನಿದು ಸಂಬಂಧ?

ಹಿಂದಿನ ತೆರಿಗೆ ಎಷ್ಟಿತ್ತು?

  • 1.5-2 ಟನ್ ವಾಹನ –10,000 ರೂ.
  • 2-3 ಟನ್ ವಾಹನ –15,000 ರೂ.
  • 3-5.5 ಟನ್ ವಾಹನ – 20,000 ರೂ.
  • 5.5-7.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 60,000 ರೂ.)
  • 7.5-9.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 80,000 ರೂ.)
  • 9.5-12 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 1 ಲಕ್ಷ ರೂ)

ಒಟ್ಟಿನಲ್ಲಿ ರಾಜ್ಯ ಸರ್ಕಾರ ಜೀವಿತಾವಧಿ ವಾಹನ ತೆರಿಗೆ ವಿಧಿಸುವುದನ್ನ ಹಿಂಪಡೆದಿರೋದಕ್ಕೆ ಖುಷ್ ಆಗಿದ್ದಾರೆ. ಆದರೆ ಅತ್ತ ಕೇಂದ್ರ ಸರ್ಕಾರ 2025 ರಿಂದ ಬರುವ ಎಲ್ಲಾ ಹೊಸ ಗೂಡ್ಸ್ ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿರೋದು ವಿರೋಧಕ್ಕೆ ಕಾರಣವಾಗಿದೆ. ಈಗಾಗಲೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಎಸಿ ವಾಹನ ಕರಡು ಹಿಂಪಡೆಯುವಂತೆ ಮೋಟಾರ್ ಅಸೋಸಿಯೇಷನ್ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕರುಡು ಹಿಂಪಡೆಯುತ್ತಾ ಇಲ್ಲವಾ ಕಾದು ನೋಡಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ