Gold Silver Price on 23rd December: ಚಿನ್ನದ ಬೆಲೆ ಯಥಾಸ್ಥಿತಿ, ಬೆಳ್ಳಿ ಬೆಲೆ ಅಲ್ಪ ಇಳಿಕೆ

Bullion Market 2024 December 23rd: ಚಿನ್ನದ ಬೆಲೆ ಈ ವಾರ ಯಥಾಸ್ಥಿತಿಯೊಂದಿಗೆ ಆರಂಭವಾಗಿದೆ. ಸೋಮವಾರ ಚಿನ್ನದ ಬೆಲೆ 7,100 ರೂ ಇದೆ. ವಿದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ವ್ಯತ್ಯಯಗೊಂಡಿಲ್ಲ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 91.50 ರೂನಿಂದ 91.40 ರೂಗೆ ಇಳಿದಿದೆ. ಚೆನ್ನೈನಲ್ಲಿ 99 ರೂ ಇದ್ದದ್ದು 98.90 ರೂಗೆ ಇಳಿದಿದೆ.

Gold Silver Price on 23rd December: ಚಿನ್ನದ ಬೆಲೆ ಯಥಾಸ್ಥಿತಿ, ಬೆಳ್ಳಿ ಬೆಲೆ ಅಲ್ಪ ಇಳಿಕೆ
ಚಿನ್ನ

Updated on: Dec 23, 2024 | 10:53 AM

ಬೆಂಗಳೂರು, ಡಿಸೆಂಬರ್ 23: ಕಳೆದ ವಾರ ಏರಿಳಿಕೆಗಳನ್ನು ಕಂಡಿದ್ದ ಚಿನ್ನದ ಬೆಲೆ ಇಂದು ಸೋಮವಾರ ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್ ಚಿನ್ನದ ಬೆಲೆ 7,100 ರೂನಲ್ಲಿ ಮುಂದುವರಿದಿದೆ. ಅಪರಂಜಿ ಚಿನ್ನದ ಬೆಲೆ 7,745 ರೂನಲ್ಲಿ ಇದೆ. ವಿದೇಶಗಳಲ್ಲೂ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಇವತ್ತು ಅಲ್ಪ ವ್ಯತ್ಯಯ ಕಂಡಿದೆ. ಒಂದು ಗ್ರಾಮ್​ಗೆ 10 ಪೈಸೆಯಷ್ಟು ಬೆಲೆ ಇಳಿದಿದೆ. ಬೆಂಗಳೂರಿನಲ್ಲಿ 91.50 ರೂ ಇದ್ದ ಬೆಳ್ಳಿ ಬೆಲೆ 91.40 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,140 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,140 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 23ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,090 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,000 ರೂ
  • ಚೆನ್ನೈ: 71,000 ರೂ
  • ಮುಂಬೈ: 71,000 ರೂ
  • ದೆಹಲಿ: 71,150 ರೂ
  • ಕೋಲ್ಕತಾ: 71,000 ರೂ
  • ಕೇರಳ: 71,000 ರೂ
  • ಅಹ್ಮದಾಬಾದ್: 71,050 ರೂ
  • ಜೈಪುರ್: 71,150 ರೂ
  • ಲಕ್ನೋ: 71,150 ರೂ
  • ಭುವನೇಶ್ವರ್: 71,000 ರೂ

ಇದನ್ನೂ ಓದಿ: ಜಿಎಸ್​ಟಿ ದರಗಳಲ್ಲಿ ಬದಲಾವಣೆ; ಯಾವುವು ಅಗ್ಗ, ಯಾವುವು ದುಬಾರಿ, ಇಲ್ಲಿದೆ ಪಟ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (68,790 ರುಪಾಯಿ)
  • ದುಬೈ: 2,945 ಡಿರಾಮ್ (68,200 ರುಪಾಯಿ)
  • ಅಮೆರಿಕ: 780 ಡಾಲರ್ (66,350 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,200 ರುಪಾಯಿ)
  • ಕತಾರ್: 2,975 ಕತಾರಿ ರಿಯಾಲ್ (69,420 ರೂ)
  • ಸೌದಿ ಅರೇಬಿಯಾ: 3,000 ಸೌದಿ ರಿಯಾಲ್ (67,940 ರುಪಾಯಿ)
  • ಓಮನ್: 313 ಒಮಾನಿ ರಿಯಾಲ್ (69,150 ರುಪಾಯಿ)
  • ಕುವೇತ್: 240.80 ಕುವೇತಿ ದಿನಾರ್ (66,450 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,140 ರೂ
  • ಚೆನ್ನೈ: 9,890 ರೂ
  • ಮುಂಬೈ: 9,140 ರೂ
  • ದೆಹಲಿ: 9,140 ರೂ
  • ಕೋಲ್ಕತಾ: 9,140 ರೂ
  • ಕೇರಳ: 9,890 ರೂ
  • ಅಹ್ಮದಾಬಾದ್: 9,140 ರೂ
  • ಜೈಪುರ್: 9,140 ರೂ
  • ಲಕ್ನೋ: 9,140 ರೂ
  • ಭುವನೇಶ್ವರ್: 9,890 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us