Gold Silver Price on 16th February: ಚಿನ್ನದ ಬೆಲೆ ಮತ್ತೆ ಇಳಿಕೆ; ಬೆಳ್ಳಿಯಲ್ಲಿ ಹೆಚ್ಚಳ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

Bullion Market 2024: ಚಿನ್ನದ ಬೆಲೆ ಇಂದು ಗುರುವಾರ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆ ಹೆಚ್ಚಾಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,070 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 74.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 56,900 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,100 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 16th February: ಚಿನ್ನದ ಬೆಲೆ ಮತ್ತೆ ಇಳಿಕೆ; ಬೆಳ್ಳಿಯಲ್ಲಿ ಹೆಚ್ಚಳ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ
Edited By:

Updated on: Feb 16, 2024 | 4:59 AM

ಬೆಂಗಳೂರು, ಫೆಬ್ರುವರಿ 16: ಚಿನ್ನದ ಬೆಲೆ (Gold and silver Rates) ಭಾರತದಲ್ಲಿ ತುಸು ತಗ್ಗಿದೆ. ಯುಎಇಯಲ್ಲಿ ಮಾತ್ರ ಚಿನ್ನದ ಬೆಲೆ ತುಸು ಏರಿಕೆ. ಉಳಿದೆಡೆ ಅಲ್ಪಸ್ವಲ್ಪ ಇಳಿಕೆ ಆಗಿದೆ. ಆದರೆ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮಾತ್ರ ಬೆಳ್ಳಿ ಇಂದು ತುಸು ಕಡಿಮೆ ಆಗಿರುವುದು. ಒಟ್ಟಾರೆ ಭಾರತದಲ್ಲಿ ಬೆಳ್ಳಿ ಕಳೆದ 10 ದಿನದ ಹಿಂದೆ ಇದ್ದ ಬೆಲೆ ಪಡೆದಿದೆ. ಚಿನ್ನದ ಬೆಲೆ 10 ದಿನದ ಹಿಂದೆ ಇದ್ದ ದರಕ್ಕಿಂತ 85 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,070 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 16ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,070 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,070 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 710 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,900 ರೂ
  • ಚೆನ್ನೈ: 57,400 ರೂ
  • ಮುಂಬೈ: 56,900 ರೂ
  • ದೆಹಲಿ: 57,050 ರೂ
  • ಕೋಲ್ಕತಾ: 56,900 ರೂ
  • ಕೇರಳ: 56,900 ರೂ
  • ಅಹ್ಮದಾಬಾದ್: 56,950 ರೂ
  • ಜೈಪುರ್: 57,050 ರೂ
  • ಲಕ್ನೋ: 57,050 ರೂ
  • ಭುವನೇಶ್ವರ್: 56,900 ರೂ

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,050 ರಿಂಗಿಟ್ (52,961 ರುಪಾಯಿ)
  • ದುಬೈ: 2,237.50 ಡಿರಾಮ್ (50,588 ರುಪಾಯಿ)
  • ಅಮೆರಿಕ: 610 ಡಾಲರ್ (50,658 ರುಪಾಯಿ)
  • ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,532 ರುಪಾಯಿ)
  • ಕತಾರ್: 2,300 ಕತಾರಿ ರಿಯಾಲ್ (52,377 ರೂ)
  • ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,930 ರುಪಾಯಿ)
  • ಓಮನ್: 243 ಒಮಾನಿ ರಿಯಾಲ್ (52,416 ರುಪಾಯಿ)
  • ಕುವೇತ್: 192.50 ಕುವೇತಿ ದಿನಾರ್ (51,882 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,100 ರೂ
  • ಚೆನ್ನೈ: 7,600 ರೂ
  • ಮುಂಬೈ: 7,450 ರೂ
  • ದೆಹಲಿ: 7,450 ರೂ
  • ಕೋಲ್ಕತಾ: 7,450 ರೂ
  • ಕೇರಳ: 7,600 ರೂ
  • ಅಹ್ಮದಾಬಾದ್: 7,450 ರೂ
  • ಜೈಪುರ್: 7,450 ರೂ
  • ಲಕ್ನೋ: 7,450 ರೂ
  • ಭುವನೇಶ್ವರ್: 7,600 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us