DA Hike: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ

7th Pay Commission Updates: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಮತ್ತು ಡಿಆರ್ ಶೇ. 4ರಷ್ಟು ಹೆಚ್ಚಾಗಬಹುದು. ಮಾರ್ಚ್​ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಹಣದುಬ್ಬರ ಅಥವಾ ಬೆಲೆ ಏರಿಕೆಯ ಭಾರವನ್ನು ಕಡಿಮೆ ಮಾಡಲು ತುಟ್ಟಿಭತ್ಯೆಯನ್ನು ಸರ್ಕಾರ ನೀಡುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ನೀಡಲಾಗುತ್ತದೆ. ಸಂಬಳ ಎಷ್ಟಿದ್ದರೂ ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತದೆ.

DA Hike: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ
ಡಿಎ ಹೆಚ್ಚಳ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 15, 2024 | 5:29 PM

ನವದೆಹಲಿ, ಫೆಬ್ರುವರಿ 15: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ (Central govt employees) ಈ ಬಾರಿಯೂ 4 ಪ್ರತಿಶತದಷ್ಟು ಡಿಎ ಹೆಚ್ಚಳ ಸಾಧ್ಯತೆ ಇದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆ (DA- Dearness Allowance) ಮತ್ತು ತುಟ್ಟಿಪರಿಹಾರದ (DR- Dearness Relief) ಘೋಷಣೆ ಆಗಬಹುದು. ನಿರೀಕ್ಷೆಯಂತೆ ಶೇ. 4ರಷ್ಟು ಡಿಎ ಹೆಚ್ಚಳವಾದರೆ, ಒಟ್ಟು ತುಟ್ಟಿಭತ್ಯೆ ಶೇ. 50 ಆದಂತಾಗುತ್ತದೆ. ದೇಶದ ಹಣದುಬ್ಬರ ದರದ ಆಧಾರದ ಮೇಲೆ ತುಟ್ಟಿಭತ್ಯೆ ಎಷ್ಟು ಹೆಚ್ಚಾಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ ದರವನ್ನು (CPI- IW) ಡಿಎ ಹೆಚ್ಚಳಕ್ಕೆ ಪರಿಗಣಿಸಲಾಗುತ್ತದೆ.

ಸರ್ಕಾರ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಪರಿಷ್ಕರಿಸುತ್ತದೆ. ಹಾಲಿ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ. ನಿವೃತ್ತ ನೌಕರರ ಪಿಂಚಣಿಗೆ ಡಿಯರ್ನೆಸ್ ರಿಲೀಫ್ ಅಥವಾ ತುಟ್ಟಿಪರಿಹಾರ ನೀಡಲಾಗುತ್ತದೆ. ಜನವರಿಯಿಂದ ಜೂನ್​ವರೆಗೆ ಮತ್ತು ಜುಲೈನಿಂದ ಡಿಸೆಂಬರ್​ವರೆಗೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಹೆಚ್ಚಿಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದಲು ನಾಲ್ಕು ಪ್ರತಿಶತದಷ್ಟು ಹೆಚ್ಚಳ ಆಗುತ್ತಾ ಬಂದಿದೆ. ಈಗ ಮಾರ್ಚ್​ನಲ್ಲಿ ಡಿಎ ಹೆಚ್ಚಳ ಘೋಷಿಸಿದರೂ ಅದು ಜನವರಿಯಿಂದ ಪೂರ್ವಾನ್ವಯ ಆಗುತ್ತದೆ.

ಇದನ್ನೂ ಓದಿ: ಎಸ್​ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ

2023ರ ಅಕ್ಟೋಬರ್ ತಿಂಗಳಲ್ಲಿ ಡಿಎ ಮತ್ತು ಡಿಆರ್ ಅನ್ನು 4 ಪ್ರತಿಶತದಷ್ಟು ಹೆಚ್ಚಿಸಲಾಗಿತ್ತು. ಸದ್ಯ ಶೇ. 46ರಷ್ಟು ಡಿಎ ಇದೆ. ಈಗ ಸಿಪಿಐ ಐಡಬ್ಲ್ಯೂ ಅಥವಾ ಕೈಗಾರಿಕಾ ಕಾರ್ಮಿಕರ ಹಣದುಬ್ಬರದ 12 ತಿಂಗಳ ಸರಾಸರಿ ದರ 392.83 ಇದೆ. ಹೀಗಾಗಿ ಈ ಬಾರಿಯೂ ಶೇ. 4ರಷ್ಟು ಡಿಎ ಹೆಚ್ಚಾಗಬಹುದು.

ಸಂಬಳ ಎಷ್ಟು ಜಾಸ್ತಿಯಾಗುತ್ತದೆ?

ಡಿಎ ಎಂಬುದನ್ನು ಮೂಲವೇತನಕ್ಕೆ ಹೆಚ್ಚುವರಿಯಾಗಿ ನೀಡುವ ಭತ್ಯೆ. ಸದ್ಯ ಶೇ. 46ರಷ್ಟು ಡಿಎ ಎಂದರೆ ಮೂಲ ವೇತನಕ್ಕೆ ಶೇ. 46ರಷ್ಟು ಹೆಚ್ಚುವರಿಯಾಗಿ ಕೊಡಲಾಗುವ ಹಣ. ಉದಾಹರಣೆಗೆ, ಉದ್ಯೋಗಿಯ ಸಂಬಳ 70,000 ರೂ ಇದ್ದು ಅವರ ಮೂಲ ವೇತನ 30,000 ರೂ ಇದೆ ಎಂದಿಟ್ಟುಕೊಳ್ಳಿ. ಇವರಿಗೆ ಈಗ ಶೇ. 46ರಷ್ಟು ಡಿಎ ಬರುತ್ತಿದೆ ಎಂದರೆ 13,800 ರೂನಷ್ಟು ತುಟ್ಟಿಭತ್ಯೆ ಸಿಗುತ್ತಿದೆ ಎಂದಾಗುತ್ತದೆ. ಈಗ ತುಟ್ಟಿಭತ್ಯೆ ಶೇ. 50ಕ್ಕೆ ಹೆಚ್ಚಾಯಿತು ಎಂದರೆ, ಆಗ 30,000 ರೂ ಮೂಲ ವೇತನ ಪಡೆಯುವವರಿಗೆ ತುಟ್ಟಿಭತ್ಯೆ 15,000 ರೂ ಆಗುತ್ತದೆ. ಅಂದರೆ ಸಂಬಳದಲ್ಲಿ 1,200 ರೂನಷ್ಟು ಏರಿಕೆ ಆಗುತ್ತದೆ.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ

ಗಮನಿಸಿ, ಇದು ವೇತನ ಪರಿಷ್ಕರಣೆ ಅಲ್ಲ, ಹಣದುಬ್ಬರದ ಪರಿಣಾಮ ಬೀರಬಾರದೆಂದು ಸರ್ಕಾರ ನೀಡಲಾಗುವ ವಿಶೇಷ ಭತ್ಯೆ ಮಾತ್ರ. ಸಂಬಳ ಹೆಚ್ಚಳದ ಪ್ರಕ್ರಿಯೆ ಬೇರೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ