AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Export Imports: ಜನವರಿಯಲ್ಲಿ ಹೆಚ್ಚಾದ ರಫ್ತು, ಕಡಿಮೆಗೊಂಡ ಆಮದು; ಒಟ್ಟಾರೆ ಟ್ರೇಡ್ ಡೆಫಿಸಿಟ್ ಇಳಿಕೆ

India's Trade Deficit Comes Down in 2024 January: 2024ರ ಜನವರಿಯಲ್ಲಿ ಸರಕು ರಫ್ತು 36.92 ಬಿಲಿಯನ್ ಡಾಲರ್ ಇದ್ದರೆ ಆಮದು 54.41 ಬಿಲಿಯನ್ ಡಾಲರ್ ಇದೆ. ಆ ತಿಂಗಳು ಸರ್ವಿಸ್ ರಫ್ತು 32.80 ಬಿಲಿಯನ್ ಡಾಲರ್ ಇದ್ದರೆ ಅಮದು 16.05 ಬಿಲಿಯನ್ ಡಾಲರ್ ಇದೆ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ಆಮದು ಮತ್ತು ರಫ್ತು ನಡುವಿನ ಅಂತರ ಕಡಿಮೆ ಆಗಿರುವುದು ದತ್ತಾಂಶದಿಂದ ತಿಳಿದುಬಂದಿದೆ.

Export Imports: ಜನವರಿಯಲ್ಲಿ ಹೆಚ್ಚಾದ ರಫ್ತು, ಕಡಿಮೆಗೊಂಡ ಆಮದು; ಒಟ್ಟಾರೆ ಟ್ರೇಡ್ ಡೆಫಿಸಿಟ್ ಇಳಿಕೆ
ಆಮದು, ರಫ್ತು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 15, 2024 | 6:39 PM

Share

ನವದೆಹಲಿ, ಫೆಬ್ರುವರಿ 15: ಭಾರತದಲ್ಲಿ 2024ರ ಜನವರಿ ತಿಂಗಳಲ್ಲಿ ಸರಕು ರಫ್ತು (Merchandise exports) 36.92 ಬಿಲಿಯನ್ ಡಾಲರ್ ಮೌಲ್ಯದಷ್ಟಿದೆ. ಇನ್ನು, ಆಮದು ಮೊತ್ತ (merchandise import) 54.41 ಬಿಲಿಯನ್ ಡಾಲರ್ ಇದೆ. ಇದರೊಂದಿಗೆ ಟ್ರೇಡ್ ಡೆಫಿಸಿಟ್ ಅಥವಾ ಆಮದು ಮತ್ತು ರಫ್ತು ನಡುವಿನ ಅಂತರ (Trade deficit) 17.49 ಬಿಲಿಯನ್ ಡಾಲರ್​ನಷ್ಟಿದೆ. ಹಿಂದಿನ ತಿಂಗಳಲ್ಲಿ ಅಂದರೆ 2023ರ ಡಿಸೆಂಬರ್ ತಿಂಗಳಲ್ಲಿ ರಫ್ತಾದ ಸರಕುಗಳ ಮೌಲ್ಯ 38.34 ಬಿಲಿಯನ್ ಡಾಲರ್ ಇತ್ತು. ಆಮದು ಪ್ರಮಾಣ 58.25 ಬಿಲಿಯನ್ ಡಾಲರ್​ನಷ್ಟಿತ್ತು. ಟ್ರೇಡ್ ಡೆಫಿಸಿಟ್ 20 ಬಿಲಿಯನ್ ಡಾಲರ್ ಸಮೀಪದಷ್ಟಿತ್ತು. ಡಿಸೆಂಬರ್​ಗೆ ಹೋಲಿಸಿದರೆ ಜನವರಿಯಲ್ಲಿ ವ್ಯಾಪಾರ ಕೊರತೆ ತುಸು ಕಡಿಮೆ ಆಗಿದೆ.

ಮೇಲಿನದು ಸರಕುಗಳ ಅಂತಾರಾಷ್ಟ್ರೀಯ ವಹಿವಾಟಿನ ದತ್ತಾಂಶವಾದರೆ, ಸರ್ವಿಸ್ ಕ್ಷೇತ್ರದ ವ್ಯವಹಾರದ ಮಾಹಿತಿ ಬಿಡುಗಡೆ ಆಗಿದೆ. 2024ರ ಜನವರಿಯಲ್ಲಿ ಸರ್ವಿಸ್ ರಫ್ತು (service exports) 32.80 ಬಿಲಿಯನ್ ಡಾಲರ್ ಇದ್ದರೆ, ಸರ್ವಿಸ್ ಆಮದು 16.05 ಬಿಲಿಯನ್ ಡಾಲರ್ ಇದೆ. ಇಲ್ಲಿ ಆಮದಿಗಿಂತ ರಫ್ತು ಹೆಚ್ಚಿದ್ದು ಇದನ್ನು ಟ್ರೇಡ್ ಸರ್​ಪ್ಲಸ್ ಎನ್ನುತ್ತಾರೆ.

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ

ಡಿಸೆಂಬರ್ ತಿಂಗಳಲ್ಲಿ ಸರ್ವಿಸ್ ರಫ್ತು 27.88 ಬಿಲಿಯನ್ ಡಾಲರ್ ಇದ್ದರೆ ಆಮದು 13.25 ಬಿಲಿಯನ್ ಡಾಲರ್​ನಷ್ಟಿದೆ. ಆ ತಿಂಗಳು ಟ್ರೇಡ್ ಸರ್​ಪ್ಲಸ್ ಅಥವಾ ವ್ಯಾಪಾರ ಹೆಚ್ಚಳ ಪ್ರಮಾಣ 14.63 ಬಿಲಿಯನ್ ಡಾಲರ್ ಇತ್ತು. ಜನವರಿಯಲ್ಲಿ ವ್ಯಾಪಾರ ಹೆಚ್ಚಳ 16.75 ಬಿಲಿಯನ್ ಡಾಲರ್ ಇದೆ.

ಒಟ್ಟಾರೆ, ಡಿಸೆಂಬರ್ ತಿಂಗಳಿಗೆ ಜನವರಿಯಲ್ಲಿ ಭಾರತದಿಂದ ನಡೆದ ಅಂತಾರಾಷ್ಟ್ರೀಯ ವ್ಯಾಪಾರ ಸಕಾರಾತ್ಮಕವಾಗಿದೆ. ಆಮದು ಕಡಿಮೆ ಆಗಿ ರಫ್ತು ಹೆಚ್ಚಾಗಿದೆ. ಟ್ರೇಡ್ ಡೆಫಿಸಿಟ್ ಗಣನೀಯವಾಗಿ ಕಡಿಮೆ ಆಗಿದೆ.

ಸರಕು ಮತ್ತು ಸೇವೆ ಎರಡೂ ಸೇರಿ ಜನವರಿ ತಿಂಗಳಲ್ಲಿ ಆಗಿರುವ ರಫ್ತು 69.72 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಶೇ. 9.28ರಷ್ಟು ರಫ್ತು ಹೆಚ್ಚಳವಾಗಿದೆ. ಇನ್ನು, 2024ರ ಜನವರಿಯಲ್ಲಿ ಒಟ್ಟಾರೆ ಆಗಿರುವ ಆಮದು 70.46 ಬಿಲಿಯನ್ ಡಾಲರ್​ನಷ್ಟಿದೆ.

ಇದನ್ನೂ ಓದಿ: ಎಕ್ಸಿಸ್ ಬ್ಯಾಂಕ್​ನಲ್ಲಿ 5,100 ಕೋಟಿ ರೂ ಅವ್ಯವಹಾರ: ದೆಹಲಿ ಹೈಕೋರ್ಟ್​ನಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಕರಣ ದಾಖಲು

ಇನ್ನು ಡಿಸೆಂಬರ್ ತಿಂಗಳಲ್ಲಿ ಒಟ್ಟಾರೆ ರಫ್ತು 66.33 ಬಿಲಿಯನ್ ಡಾಲರ್ ಇದೆ. ಹಾಗೆಯೆ, ಆಮದು ಪ್ರಮಾಣವು 71.50 ಬಿಲಿಯನ್ ಡಾಲರ್​ನಷ್ಟು ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ