Gold Silver Price on 1st February: ಕೆಲವೆಡೆ ಏರಿಳಿತ ಬಿಟ್ಟರೆ ಉಳಿದಂತೆ ಚಿನ್ನದ ಬೆಲೆ ಯಥಾಸ್ಥಿತಿ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024, February 1st: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,270 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 76.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 58,000 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,400 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 1st February: ಕೆಲವೆಡೆ ಏರಿಳಿತ ಬಿಟ್ಟರೆ ಉಳಿದಂತೆ ಚಿನ್ನದ ಬೆಲೆ ಯಥಾಸ್ಥಿತಿ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Feb 01, 2024 | 5:00 AM

ಬೆಂಗಳೂರು, ಫೆಬ್ರುವರಿ 1: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಏರಿಕೆಗೆ ತುಸು ವಿರಾಮ ಸಿಕ್ಕಿದೆ. ಚೆನ್ನೈನಲ್ಲಿ ಸ್ವಲ್ಪ ಕಡಿಮೆ ಆಗಿರುವುದು ಬಿಟ್ಟರೆ ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಅಂತಾರಾಷ್ಟ್ರೀಯವಾಗಿ ಅಮೆರಿಕ ಮೊದಲಾದ ಕೆಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಉಳಿದಂತೆ ಬೇರೆಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಎಲ್ಲೆಡೆ ವ್ಯತ್ಯಯ ಕಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,270 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 1ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,270 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,270 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 58,000 ರೂ
  • ಚೆನ್ನೈ: 58,500 ರೂ
  • ಮುಂಬೈ: 58,000 ರೂ
  • ದೆಹಲಿ: 58,150 ರೂ
  • ಕೋಲ್ಕತಾ: 58,000 ರೂ
  • ಕೇರಳ: 58,000 ರೂ
  • ಅಹ್ಮದಾಬಾದ್: 58,050 ರೂ
  • ಜೈಪುರ್: 58,150 ರೂ
  • ಲಕ್ನೋ: 58,150 ರೂ
  • ಭುವನೇಶ್ವರ್: 58,000 ರೂ

ಇದನ್ನೂ ಓದಿ: ಇಪಿಎಫ್​ಒದಿಂದ ನಿಮ್ಮ ಮೊಬೈಲ್​ಗೂ ಈ ಮೆಸೇಜ್ ಬಂದಿರಬೇಕು; ನಾರಿಶಕ್ತಿ ಪರೀಕ್ಷೆಯಾ ಇದು? ಮೆಸೇಜ್​ನಲ್ಲಿರೋ ಲಿಂಕ್ ಕ್ಲಿಕ್ ಮಾಡಿ ಫಾರ್ಮ್ ತುಂಬಿಸಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,070 ರಿಂಗಿಟ್ (53,970 ರುಪಾಯಿ)
  • ದುಬೈ: 2,287.50 ಡಿರಾಮ್ (51,780 ರುಪಾಯಿ)
  • ಅಮೆರಿಕ: 625 ಡಾಲರ್ (51,902 ರುಪಾಯಿ)
  • ಸಿಂಗಾಪುರ: 848 ಸಿಂಗಾಪುರ್ ಡಾಲರ್ (53,555 ರುಪಾಯಿ)
  • ಕತಾರ್: 2,345 ಕತಾರಿ ರಿಯಾಲ್ (53,478 ರೂ)
  • ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,038 ರುಪಾಯಿ)
  • ಓಮನ್: 248 ಒಮಾನಿ ರಿಯಾಲ್ (53,553 ರುಪಾಯಿ)
  • ಕುವೇತ್: 195.50 ಕುವೇತಿ ದಿನಾರ್ (52,839 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,400 ರೂ
  • ಚೆನ್ನೈ: 7,800 ರೂ
  • ಮುಂಬೈ: 7,650 ರೂ
  • ದೆಹಲಿ: 7,650 ರೂ
  • ಕೋಲ್ಕತಾ: 7,650 ರೂ
  • ಕೇರಳ: 7,800 ರೂ
  • ಅಹ್ಮದಾಬಾದ್: 7,650 ರೂ
  • ಜೈಪುರ್: 7,650 ರೂ
  • ಲಕ್ನೋ: 7,650 ರೂ
  • ಭುವನೇಶ್ವರ್: 7,800 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us