ಇಪಿಎಫ್​ಒದಿಂದ ನಿಮ್ಮ ಮೊಬೈಲ್​ಗೂ ಈ ಮೆಸೇಜ್ ಬಂದಿರಬೇಕು; ನಾರಿಶಕ್ತಿ ಪರೀಕ್ಷೆಯಾ ಇದು? ಮೆಸೇಜ್​ನಲ್ಲಿರೋ ಲಿಂಕ್ ಕ್ಲಿಕ್ ಮಾಡಿ ಫಾರ್ಮ್ ತುಂಬಿಸಿ

EPFO Survey Message: ಇಪಿಎಫ್​ಒದಿಂದ ಎಲ್ಲಾ ಇಪಿಎಫ್ ಸದಸ್ಯರ ಮೊಬೈಲ್​ಗೆ ಸಂದೇಶ ಕಳುಹಿಸಲಾಗಿದೆ. ಇದರಲ್ಲಿ ಒಂದು ಸರ್ವೆ ಲಿಂಕ್ ಇದೆ. ದೇಶದ ವಿವಿಧ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಇರುವ ನೀತಿ ಬಗ್ಗೆ ಈ ಸಮೀಕ್ಷೆ ನಡೆದಿದೆ. ಲೈಂಗಿಕ ಕಿರುಕುಳ ಪ್ರಕರಣ ವಿಚಾರಿಸುವ ವ್ಯವಸ್ಥೆಯಿಂದ ಹಿಡಿದು ಸಮಾನ ಕೆಲಸ ಸಮಾನ ವೇತನದವರೆಗೂ ಸರ್ವೆ ನಡೆದಿದೆ.

ಇಪಿಎಫ್​ಒದಿಂದ ನಿಮ್ಮ ಮೊಬೈಲ್​ಗೂ ಈ ಮೆಸೇಜ್ ಬಂದಿರಬೇಕು; ನಾರಿಶಕ್ತಿ ಪರೀಕ್ಷೆಯಾ ಇದು? ಮೆಸೇಜ್​ನಲ್ಲಿರೋ ಲಿಂಕ್ ಕ್ಲಿಕ್ ಮಾಡಿ ಫಾರ್ಮ್ ತುಂಬಿಸಿ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 31, 2024 | 5:20 PM

ಬೆಂಗಳೂರು, ಜನವರಿ 31: ಇತ್ತೀಚಿನ ಕೆಲ ದಿನಗಳಿಂದ ದೇಶದ ವಿವಿಧ ಮಂದಿಗೆ ಇಪಿಎಫ್​ಒ (EPFO) ವತಿಯಿಂದ ಮೆಸೇಜ್​ವೊಂದು ಸಿಕ್ಕಿದೆ. ಇಪಿಎಫ್ ಖಾತೆ ಇರುವ ಪ್ರತಿಯೊಬ್ಬ ಉದ್ಯೋಗಿಗೂ ಈ ಸಂದೇಶವನ್ನು ಕಳುಹಿಸಲಾಗಿದೆ, ಅಥವಾ ಕಳುಹಿಸಲಾಗುತ್ತಿದೆ. ಈ ಮೆಸೇಜ್​ನಲ್ಲಿ ಸಮೀಕ್ಷೆಯೊಂದರ ಲಿಂಕ್ ನೀಡಲಾಗಿದೆ. ಈ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇವತ್ತು ಬಜೆಟ್ ಅಧಿವೇಶನ ಆರಂಭದಲ್ಲಿ ನರೇಂದ್ರ ಮೋದಿ ಅವರು ನಾರಿಶಕ್ತಿಯ (Nari Shakti) ಬಗ್ಗೆ ಮಾತನಾಡಿದರು. ದೇಶದ ಪ್ರಗತಿಗೆ ನಾರಿಶಕ್ತಿ ಬಹಳ ಮುಖ್ಯ ಎಂಬುದನ್ನು ಆರ್ಥಿಕ ತಜ್ಞರೂ ಹೇಳುತ್ತಾ ಬಂದಿದ್ದಾರೆ. ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗುತ್ತದೆ. ಆದರೆ, ಕೆಲಸದ ವಿಚಾರಕ್ಕೆ ಬಂದರೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಅಸಮಾನತೆಯ ಅಂತರ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಸರ್ಕಾರ ಇದೆಲ್ಲವನ್ನೂ ಗಮನಿಸುತ್ತಿದ್ದು, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕೆಲಸದ ವಾತಾವರಣ ಹೇಗಿದೆ ಎಂದು ತಿಳಿದುಕೊಳ್ಳಬಯಸುತ್ತಿರುವಂತಿದೆ. ಅಂತೆಯೇ, ಸಮೀಕ್ಷೆ ನಡೆಸಲಾಗುತ್ತಿದ್ದು, ಇದರ ಸಂಬಂಧ ಇಪಿಎಫ್ ಸದಸ್ಯರಿಗೆ ಅಥವಾ ಎಲ್ಲಾ ಉದ್ಯೋಗಿಗಳ ಮೊಬೈಲ್​ಗೆ ಸಂದೇಶ ಕಳುಹಿಸಲಾಗಿದೆ.

ಏನಿದೆ ಈ ಫಾರ್ಮ್​ನಲ್ಲಿ?

ಈ ಫಾರ್ಮ್​ನಲ್ಲಿ ಎರಡು ಭಾಗ ಇದೆ. ಮೊದಲೆಯದರಲ್ಲಿ ನೀವು ಕೆಲಸ ಮಾಡುವ ಸಂಸ್ಥೆಯ ಗುರುತು ಹಾಗೂ ಎರಡನೆಯದರಲ್ಲಿ ಆ ಸಂಸ್ಥೆಯಲ್ಲಿನ ಕೆಲಸದ ವಾತಾವರಣದ ಬಗ್ಗೆ ನಿಮ್ಮ ಅಭಿಪ್ರಾಯ, ಇವನ್ನು ಕೇಳಲಾಗಿದೆ.

ಮೊದಲಿಗೆ, ನೀವು ಕೆಲಸ ಮಾಡುವ ಸಂಸ್ಥೆಯ ಹೆಸರು, ಅದು ಯಾವ ವಲಯಕ್ಕೆ ಸೇರಿದ್ದು, ಹಾಗು ಅದರ ವಿಳಾಸ, ಪಿನ್​ಕೋಡ್ ಇತ್ಯಾದಿ ವಿವರ ಕೇಳಲಾಗಿದೆ.

ಹಾಗೆಯೇ, ನೀವು ಕೆಲಸ ಮಾಡುವ ಸಂಸ್ಥೆಯಲ್ಲಿ ಮಹಿಳೆಯರಿಗೆ ಇರುವ ನೀತಿಗಳ ಬಗ್ಗೆ ಕೇಳಲಾಗಿದೆ:

  • ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿಯಂತ್ರಣಕ್ಕೆ ಇಂಟರ್ನಲ್ ಕಂಪ್ಲೇಂಟ್ಸ್ ಕಮಿಟಿ ಇದೆಯಾ?
  • ಮಕ್ಕಳ ಪಾಲನೆಗೆ ಸೌಲಭ್ಯ ಇದೆಯಾ?
  • ಸಮಾನ ಕೆಲಸ ಸಮಾನ ವೇತನ ಇದೆಯಾ?
  • ಮಹಿಳೆಯರಿಗೆ ಅನುಕೂಲಕರ ಕಾರ್ಯಾವಧಿ ಅಥವಾ ರಿಮೋಟ್ ವರ್ಕಿಂಗ್ ಅವಕಾಶ ಇದೆಯಾ?
  • ತಡವಾದಾಗ ಸಾರಿಗೆ ಸೌಲಭ್ಯ ಇದೆಯಾ?

ಈ ಮೇಲಿನ ಪ್ರಶ್ನೆಗಳಿಗೆ ನೀವು ಹೌದು ಅಥವಾ ಇಲ್ಲ ಎಂದು ಸರಳವಾಗಿ ಉತ್ತರಿಸಬಹುದು.

ಇದನ್ನು ಓದಿ: IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್​ಗಳಿಗೆ ನಿರ್ದೇಶನ ನೀಡಿದ ಐಬಿಎಂ

Open The EPFO Message, Tell About Your Company's Policy For Women and Salary Issues In Simple Survey

ಇಪಿಎಫ್​ಒ ಸಮೀಕ್ಷೆ

ನಿಮ್ಮ ಗುರುತು ಬಹಿರಂಗವಾಗುವುದಿಲ್ಲ… ಗೌಪ್ಯತೆ ಬಗ್ಗೆ ಚಿಂತೆ ಬೇಡ

ಈ ಸರ್ವೆಯಲ್ಲಿ ನಿಮ್ಮ ಹೆಸರು ಮತ್ತು ಇಪಿಎಫ್ ಖಾತೆಯ ವಿವರ ಇತ್ಯಾದಿಯನ್ನು ಕೇಳಲಾಗುವುದಿಲ್ಲ. ಹೀಗಾಗಿ, ಕಂಪನಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೂ ನಿಮ್ಮ ಹೆಸರು ಬಹಿರಂಗಗೊಳ್ಳುವುದಿಲ್ಲ. ಹೀಗಾಗಿ ಧೈರ್ಯವಾಗಿ ಸತ್ಯವನ್ನು ಹೇಳಬಹುದು.

ವಾಸ್ತವ ಪರಿಸ್ಥಿತಿ ತಿಳಿಯಲು ಯತ್ನ

ಈ ಸರಳ ಸಮೀಕ್ಷೆಯು ದೇಶದ ಉದ್ಯೋಗ ಕ್ಷೇತ್ರದಲ್ಲಿರುವ ತಾರತಮ್ಯತೆಯ ವಾಸ್ತವ ಚಿತ್ರವನ್ನು ಅರಿಯಲು ಬಹಳ ಸಹಕಾರಿಯಾಗುತ್ತದೆ. ಮಹಿಳಾ ಉದ್ಯೋಗಿಗಳ ಬಗ್ಗೆ ಎಷ್ಟು ಕಂಪನಿಗಳು ಕಾಳಜಿ ತೋರುತ್ತಿಲ್ಲ ಎಂಬುದು ಸರ್ಕಾರಕ್ಕೆ ಮನವರಿಕೆ ಆಗುತ್ತದೆ. ಆ ನಂತರ ಯಾವ ರೀತಿ ಅಭಿಯಾನ ನಡೆಸಬಹುದು ಎಂದು ನಿರ್ಧರಿಸಲು ಈ ಸಮೀಕ್ಷೆ ಅನುವು ಮಾಡಿಕೊಡುತ್ತದೆ.

ನೀವೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಯಬಯಸಿದ್ದು ಇಪಿಎಫ್​ಒದಿಂದ ಮೆಸೇಜ್ ಬಂದಿಲ್ಲದಿದ್ದರೆ, ಆ ಫಾರ್ಮ್​ನ ಲಿಂಕ್ ಇಲ್ಲಿದೆ: forms.myscheme.gov.in/form/65b4ee9b71108aca25e620fd

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Wed, 31 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್