IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್​ಗಳಿಗೆ ನಿರ್ದೇಶನ ನೀಡಿದ ಐಬಿಎಂ

Work From Office, Or No Job: ವಾರದಲ್ಲಿ ಮೂರು ದಿನಗಳಾದರೂ ಸಮೀಪದ ಕಚೇರಿ ಅಥವಾ ಕ್ಲೈಂಟ್ ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕೆಂದು ಐಬಿಎಂ ಮ್ಯಾನೇಜರುಗಳಿಗೆ ಸೂಚನೆ ಹೋಗಿದೆ. ವರ್ಕ್ ಫ್ರಂ ಹೋಮ್​ನಲ್ಲಿರುವ ಮ್ಯಾನೇಜರುಗಳು ಕಚೇರಿಯ 80 ಕಿಮೀ ದೂರದೊಳಗಿನ ಪ್ರದೇಶಕ್ಕೆ ಸ್ಥಳಾಂತರ ಆಗಬೇಕೆಂದು ನಿರ್ದೇಶನ ನೀಡಲಾಗಿದೆ. ವರ್ಕ್ ಫ್ರಂ ಹೋಮ್ ಮಾಡುವ ಉದ್ಯೋಗಿಗಳಿಗೆ ಹೆಚ್ಚು ಬಡ್ತಿಯ ಅವಕಾಶ ಇರುವುದಿಲ್ಲ ಎಂದು ಐಬಿಎಂ ಸಿಇಒ ಅರವಿಂದ್ ಕೃಷ್ಣ ಇತ್ತೀಚೆಗೆ ಹೇಳಿದ್ದರು.

IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್​ಗಳಿಗೆ ನಿರ್ದೇಶನ ನೀಡಿದ ಐಬಿಎಂ
ವರ್ಕ್ ಫ್ರಂ ಹೋಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2024 | 7:20 PM

ವಾಷಿಂಗ್ಟನ್, ಜನವರಿ 30: ಕೋವಿಡ್ ಸಂದರ್ಭದಲ್ಲಿ ಶುರುವಾಗಿದ್ದ ವರ್ಕ್ ಫ್ರಂ ಹೋಮ್ (Work from Home) ಟ್ರೆಂಡ್ ಈಗಲೂ ಉಳಿದಿದೆ. ಬಹಳಷ್ಟು ಜನರು ಈಗಲೂ ಕಚೇರಿಗೆ ಹೋಗಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಸಂಸ್ಥೆಗಳು ಸಾಮ, ದಾನ, ಭೇದದ ತಂತ್ರಗಳನ್ನು ಅನುರಿಸುತ್ತಿವೆ. ಅವಕ್ಕೂ ಕೆಲವರು ಜಗ್ಗುತ್ತಿಲ್ಲ. ಹೆಚ್ಚಿನ ಟೆಕ್ ಸಂಸ್ಥೆಗಳು ಹೈಬ್ರಿಡ್ ತಂತ್ರ ಅನುಸರಿಸುತ್ತಿವೆ. ವಾರದಲ್ಲಿ ಕೆಲ ದಿನ ಕಚೇರಿ, ಕೆಲ ದಿನ ಮನೆಯಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟಿದೆ. ಇದೀಗ ಐಬಿಎಂ ಸಂಸ್ಥೆ ತನ್ನ ಎಲ್ಲಾ ಮ್ಯಾನೇಜರುಗಳನ್ನು ಕಚೇರಿಗೆ ತರಲು ಪ್ರಯತ್ನಿಸುತ್ತಿದ್ದು, ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸಂದೇಶವೊಂದನ್ನು ನೀಡಿದೆ. ಮನೆಯಿಂದ ಕೆಲಸ ಮಾಡುತ್ತಿರುವ ಮ್ಯಾನೇಜರುಗಳು ಕಚೇರಿಗೆ ಬಂದು ಕೆಲಸ ಮಾಡಬೇಕು, ಇಲ್ಲ ಕಂಪನಿ ಬಿಟ್ಟು ಹೋಗಬೇಕು ಎಂದು ತಾಕೀತು ಮಾಡಿದೆ.

ಬ್ಲೂಮ್​ಬರ್ಗ್​ನಲ್ಲಿ ಪ್ರಕಟವಾಗಿರುವ ಈ ವರದಿ ಪ್ರಕಾರ ಜನವರಿ 16ರಂದು ಐಬಿಎಂ ಮೆಮೋರಾಂಡಂ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿರುವ ಸಂಸ್ಥೆಯ ವಿವಿಧ ಮ್ಯಾನೇಜರುಗಳು ವಾರದಲ್ಲಿ ಮೂರು ದಿನಗಳಾದರೂ ಸಮೀಪದ ಕಚೇರಿ ಅಥವಾ ಕ್ಲೈಂಟ್ ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಇದನ್ನೂ ಓದಿ: eKYC: ಪಿಎಂ ಕಿಸಾನ್: ಜ. 31ರೊಳಗೆ ಇಕೆವೈಸಿ ಮಾಡದಿದ್ದರೆ ಸಿಗುವುದಿಲ್ಲ 16ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

‘ಮುಖತಃ ಸಂವಹನಗಳಿಂದ ಹೆಚ್ಚು ಕ್ರಿಯಾಶೀಲರಾಗಬಹುದು, ಉತ್ಪನ್ನಶೀಲತೆ ಹೆಚ್ಚುತ್ತದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲಬಹುದು. ಈ ನಿಟ್ಟಿನಲ್ಲಿ ಕೆಲಸದ ವಾತಾವರಣ ನಿರ್ಮಿಸಲು ಐಬಿಎಂ ಗಮನ ಹರಿಸುತ್ತಿದೆ. ಇದೇ ಉದ್ದೇಶದಲ್ಲಿ ಅಮೆರಿಕದಲ್ಲಿರುವ ಎಕ್ಸಿಕ್ಯೂಟಿವ್​ಗಳು ಮತ್ತು ಮ್ಯಾನೇಜರುಗಳು ವಾರದಲ್ಲಿ ಮೂರು ದಿನವಾದರೂ ಕಚೇರಿಯಲ್ಲಿ ಇರುವ ಅಗತ್ಯ ಇದೆ,’ ಎಂದು ಐಬಿಎಂನ ವಕ್ತಾರರು ಹೇಳಿದ್ದಾರೆ.

ಈ ಸೂಚನೆ ಪ್ರಕಾರ, ಮನೆಯಿಂದ ಕೆಲಸ ಮಾಡುತ್ತಿರುವ ಐಬಿಎಂ ಮ್ಯಾನೇಜರುಗಳು ಕಚೇರಿಯ 80 ಕಿಮೀ ಒಳಗಿನ ದೂರದ ಸ್ಥಳಕ್ಕೆ ಮನೆ ಬದಲಾಯಿಸಿಕೊಳ್ಳಬೇಕು. ಇದರಿಂದ ಓಡಾಟಕ್ಕೆ ಅನುಕೂಲವಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಮತ್ತು ಮಿಲಿಟರಿ ಸೇವೆಯಲ್ಲಿರುವವರಿಗೆ ಈ ಆದೇಶದಿಂದ ವಿನಾಯಿತಿ ಕೊಡಲಾಗಿದೆ.

ಐಬಿಎಂ ಸಂಸ್ಥೆಗೆ ಭಾರತೀಯ ಮೂಲದ ಅರವಿಂದ್ ಕೃಷ್ಣ ಸಿಇಒ ಆಗಿದ್ದಾರೆ. ಕಳೆದ ವರ್ಷ ಅವರು ಬ್ಲೂಮ್​ಬರ್ಗ್​ಗೆ ನೀಡಿದ ಸಂದರ್ಶನವೊಂದರಲ್ಲಿ ವರ್ಕ್ ಫ್ರಂ ಹೋಮ್ ವಿಚಾರದಲ್ಲಿ ಕಠಿಣ ಮಾತುಗಳನ್ನು ಆಡಿದ್ದರು. ಕಚೇರಿಗೆ ಬಂದು ಕೆಲಸ ಮಾಡದ ಉದ್ಯೋಗಿಗಳಿಗೆ ಬಡ್ತಿ ಸಿಗುವ ಅವಕಾಶ ಕಡಿಮೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Sin Tax: ಸಿನ್ ಟ್ಯಾಕ್ಸ್ ಇನ್ನಷ್ಟು ಹೆಚ್ಚಿಸುವಂತೆ ಮನವಿ; ಏನಿದು ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ?

ಐಬಿಎಂ ಮಾತ್ರವಲ್ಲ, ಬಹುತೇಕ ಎಲ್ಲಾ ಕಂಪನಿಗಳೂ ರಿಮೋಟ್ ವರ್ಕಿಂಗ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಿವೆ. ಟಿಸಿಎಸ್​ನಂತಹ ಕೆಲ ಐಟಿ ಕಂಪನಿಗಳಂತೂ ಎಲ್ಲಾ ಉದ್ಯೋಗಿಗಳೂ ಪೂರ್ಣವಾಗಿ ಕಚೇರಿ ಹಾಜರಾತಿ ತೋರಬೇಕೆಂದು ಸೂಚನೆ ನೀಡಿವೆ. ಕೋವಿಡ್ ಮುಂಚೆ ಇದ್ದ ಕೆಲಸದ ವಾತಾರಣ ತರುವ ಪ್ರಯತ್ನಗಳಾಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ