ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ
ಎಲ್ಲ ಅಧಿಕಾರಿಗಳು ದುರಹಂಕಾರಿಗಳು, ಭ್ರಷ್ಟರು ಅಂತ ಹೇಳಲು ತನಗೆ ಹುಚ್ಚುನಾಯಿಯೇನೂ ಕಚ್ಚಿಲ್ಲ, ಆದರೆ ಕೆಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಮನಸ್ಸಿಗೆ ನೋವಾಗುತ್ತದೆ, ಸರ್ಕಾರಕ್ಕೆ ಯಾವ ಇಲಾಖೆಯ ಮೇಲೂ ನಿಯಂತ್ರಣ ಇಲ್ಲ ಎಂದು ಹೇಳುವ ರಾಜು ಕಾಗೆ, ತಮ್ಮ ಶಾಲೆಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದರೂ ಅನುಮತಿಗಾಗಿ 2-3 ವರ್ಷಗಳಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ.
ಬೆಂಗಳೂರು, ಜೂನ್ 24: ನಿನ್ನೆ ತಮ್ಮ ಕ್ಷೇತ್ರದಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಕಟವಾಗಿ ಟೀಕಿಸಿದ್ದ ಕಾಂಗ್ರೆಸ್ ಶಾಸಕ ರಾಜು ಕಾಗೆ ಇವತ್ತು ಬೆಂಗಳೂರಲ್ಲಿ ಅದನ್ನು ಮುಂದುವರಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಧಿಕಾರಿಗಳು ಬೇಕು, ಪಕ್ಷದ ಶಾಸಕರು ಬೇಕಿಲ್ಲ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯ (Rajendra Katharia) ಎನ್ನುವವನು ನನಗೆ ಅವಮಾನ ಮಾಡಿದ ಮತ್ತು ಸದನದಲ್ಲೂ ಆ ವಿಷಯದ ಪ್ರಸ್ತಾಪ ಆಯಿತು, 60 ಜನ ಶಾಸಕರು ಅವನನ್ನು ಬೇರೆ ಕಡೆ ಟ್ರಾನ್ಸ್ಫರ್ ಮಾಡಬೇಕು ಸರ್ಕಾರಕ್ಕೆ ಮನವಿ ಮಾಡಿದರು, ಮುಖ್ಯಮಂತ್ರಿ ಬೆಳಗಾವಿಗೆ ಬಂದಾಗ ನಾನೂ ಎರಡು ಮೂರು ಸಲ ಕಠಾರಿಯ ಬಗ್ಗೆ ಹೇಳಿದೆ, ಆದರೆ ಆಗಿದ್ದೇನು? ಅವನು ಈಗಲೂ ತನ್ನ ಸ್ಥಾನದಲ್ಲಿ ಮುಂದುವರಿದಿದ್ದಾನೆ ಎಂದು ರಾಜು ಕಾಗೆ ಹೇಳಿದರು.
ಇದನ್ನೂ ಓದಿ: ಪಾಟೀಲ್, ರಾಜು ಕಾಗೆ ಬೆನ್ನಲ್ಲೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ