ಗ್ಯಾಸ್ ಸ್ಟವ್ ಬಳಿ ತಪ್ಪಿಯೂ ಈ ವಸ್ತುಗಳನ್ನು ಇಡಲು ಹೋಗಬೇಡಿ
ಅಡುಗೆ ಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್ ಸ್ಟವ್. ಅಡುಗೆ ಮಾಡಲು ಸುಲಭ ಆಗುತ್ತೆ ಅನ್ನೋ ಕಾರಣಕ್ಕೆ ಮಹಿಳೆಯರು ಒಂದಷ್ಟು ವಸ್ತುಗಳನ್ನು ಗ್ಯಾಸ್ ಸ್ವವ್ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಇದರಿಂದ ಆ ವಸ್ತುಗಳಿಗೆ ಹಾನಿಯಾವುದರ ಜೊತೆಗೆ ಕೆಲವೊಂದು ಬಾರಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕೆಲವು ವಸ್ತುಗಳನ್ನು ತಪ್ಪಿಯೂ ಗ್ಯಾಸ್ ಒಲೆ ಬಳಿ ಇಡಬಾರದು.

ಹಿಂದೆಲ್ಲಾ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡ್ತಿದ್ರು. ಆದ್ರೆ ಈಗ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಗ್ಯಾಸ್ ಇಲ್ಲದೆ ಅಡುಗೆಯೇ ಇಲ್ಲ ಅನ್ನೋ ತರ ಆಗಿಬಿಟ್ಟಿದೆ. ಈಗಂತೂ ಎಲ್ಲರೂ ಅಡುಗೆಗೆ ಗ್ಯಾಸ್ ಸ್ಟವ್‌ಗಳನ್ನೇ (Gas Stove) ಬಳಸುವುದು. ಅನಿಲ ಸೋರಿಕೆಯಾಗುವ ಅಥವಾ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಗ್ಯಾಸ್ ಒಲೆಗಳಲ್ಲಿ ಅಡುಗೆ ಮಾಡುವಾಗ ತುಂಬಾ ಜಾಗೃತೆಯಿಂದ ಇರಬೇಕು ಎಂದು ಹೇಳ್ತಾರೆ. ಈ ಬಗ್ಗೆ ಜಾಗೃತೆ ವಹಿಸುವಂತೆಯೇ ಗ್ಯಾಸ್ ಸ್ವವ್ ಬಳಿ (Items to avoid near gas stove) ಏನು ಇಡಬಾರದು, ಏನು ಇಡಬೇಕು ಎಂಬ ಬಗ್ಗೆಯೂ ತಿಳಿದಿರಬೇಕು. ಹೆಚ್ಚಿನ ಮಹಿಳೆಯರು ಅಡುಗೆ ಮಾಡುವಾಗ ಸುಲಭ ಆಗುತ್ತೆ ಎನ್ನುವ ಕಾರಣಕ್ಕೆ ಅಡುಗೆ ಎಣ್ಣೆಯಿಂದ ಹಿಡಿದು ಮಸಾಲ ಪದಾರ್ಥಗಳ ಡಬ್ಬಿಗಳ ವರೆಗೆ ಎಲ್ಲವನ್ನೂ ಗ್ಯಾಸ್ ಸ್ಟವ್ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಇದರಿಂದ ಆ ವಸ್ತುಗಳಿಗೆ ಹಾನಿಯಾವುದುರ ಜೊತೆಗೆ ಕೆಲವೊಂದು ಬಾರಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ಈ ವಸ್ತುಗಳನ್ನು ಗ್ಯಾಸ್ ಸ್ಟವ್ ಬಳಿ ಇಡ್ಬೇಡಿ:
ಅಡುಗೆ ಎಣ್ಣೆ: ಕೆಲವರು ಅಡುಗೆಗೆ ಬಳಸುವ ಎಣ್ಣೆಯ ಡಬ್ಬವನ್ನು ಗ್ಯಾಸ್ ಸ್ವವ್ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಇದರಿಂದ ಅಡುಗೆ ಮಾಡುವಾಗ ಶಾಖ ತಾಕಿ ಎಣ್ಣೆಯ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ಗ್ಯಾಸ್ ಒಲೆ ಪಕ್ಕ ಇಡಬಾರದು.
ಪ್ಲಾಸ್ಟಿಕ್ ವಸ್ತುಗಳು: ಪ್ಲಾಸ್ಟಿಕ್ ಡಬ್ಬಗಳು ಅಥವಾ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ಗ್ಯಾಸ್ ಒಲೆ ಪಕ್ಕ ಇಡಬಾರದು. ಏಕೆಂದರೆ ಬಿಸಿ ತಗುಲಿ ಪ್ಲಾಸ್ಟಿಕ್ ಕರಗುವ ಹಾಗೂ ಇದರಿಂದ ಬೆಂಕಿ ಹತ್ತಿಕೊಳ್ಳುವ ಅಪಾಯ ಇರುತ್ತದೆ.
ಮಸಾಲೆ ಪದಾರ್ಥಗಳು: ಅಡುಗೆ ಮಾಡಲು ಸುಲಭ ಆಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಮಸಾಲೆ ಪದಾರ್ಥಗಳ ಡಬ್ಬಿಯನ್ನು ಗ್ಯಾಸ್ ಒಲೆಯ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಹೀಗೆ ಮಾಡುವುದರಿಂದ ಮಸಾಲೆಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ.
ಕ್ಲೀನರ್‌ಗಳು: ಸ್ಪ್ರೇ ಇತ್ಯಾದಿ ಕ್ಲೀನರ್ ವಸ್ತುಗಳನ್ನು ಕೂಡಾ ಗ್ಯಾಸ್ ಒಲೆ ಬಳಿ ಇಡಬಾರದು. ಇದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ತುಂಬಾ ಜೋಪಾನವಾಗಿರಬೇಕು.
ಇದನ್ನೂ ಓದಿ: ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸೋದಕ್ಕೆ ಹೋಗ್ಬೇಡಿ
ವಿದ್ಯುತ್ ಪರಿಕರಗಳು: ವಿದ್ಯುತ್ ಉಪಕರಣಗಳನ್ನು ತುಂಬಾ ಬಿಸಿಯಾಗಿರುವ ಸ್ಥಳಗಳಲ್ಲಿ ಇಡಬಾರದು. ಏಕೆಂದರೆ ಅತಿಯಾದ ಶಾಖವು ವಿದ್ಯುತ್ ಉಪಕರಣಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮತ್ತು ಇದು ಶಾರ್ಟ್ ಸರ್ಕ್ಯುಟ್‌ಗೆ ಕಾರಣವಾಗಬಹುದು.
ಬಟ್ಟೆಗಳು: ಕೆಲವರು ಕೈ ಒರೆಸುವ ಬಟ್ಟೆಗಳನ್ನು ಗ್ಯಾಸ್ ಸ್ವವ್ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಇದರಿಂದ ಕೆಲವೊಂದು ಬಾರಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಟ್ಟೆಗಳನ್ನು ಗ್ಯಾಸ್ ಸ್ಟವ್ ಪಕ್ಕ ಇಡಬಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







