AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2024 Live Stream: ಇಂದು ಮಧ್ಯಂತರ ಬಜೆಟ್, ಲೈವ್ ಸ್ಟ್ರೀಮಿಂಗ್ ಎಲ್ಲೆಲ್ಲಿ? ನೋಡಿ ಡೀಟೇಲ್ಸ್

Budget 2024 Time: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1, ಗುರುವಾರ ಬೆಳಗ್ಗೆ 11ಗಂಟೆಗೆ ಬಜೆಟ್ ಭಾಷಣ ಆರಂಭಿಸಲಿದ್ದಾರೆ. ಸಂಸದ್ ಟಿವಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ನೇರ ಪ್ರಸಾರ ಇದೆ. ಯೂಟ್ಯೂಬ್ ವಾಹಿನಿಗಳಲ್ಲೂ ಲೈವ್ ಸ್ಟ್ರೀಮಿಂಗ್ ಇರುತ್ತದೆ. ಟಿವಿ9 ಕನ್ನಡ ಟಿವಿ ವಾಹಿನಿ ಮತ್ತು ಯೂಟ್ಯೂಬ್​ನಲ್ಲೂ ನೇರಪ್ರಸಾರ ಮತ್ತು ಲೈವ್ ಚರ್ಚೆಗಳನ್ನು ನೋಡಬಹುದು.

Budget 2024 Live Stream: ಇಂದು ಮಧ್ಯಂತರ ಬಜೆಟ್, ಲೈವ್ ಸ್ಟ್ರೀಮಿಂಗ್ ಎಲ್ಲೆಲ್ಲಿ? ನೋಡಿ ಡೀಟೇಲ್ಸ್
ಕೇಂದ್ರ ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Feb 01, 2024 | 8:16 AM

Share

2024-24ರ ಸಾಲಿನ ವರ್ಷಕ್ಕೆ ಬಜೆಟ್ ಮಂಡನೆ ಇಂದು ನಡೆಯಲಿದೆ. ಚುನಾವಣೆಗೆ ಮುಂಚಿನದ್ದಾದ್ದರಿಂದ ಇದು ಮಧ್ಯಂತರ ಬಜೆಟ್ (Interim Budget 2024) ಆಗಿದೆ. ಫೆಬ್ರುವರಿ 1, ಗುರವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಸರ್ಕಾರಕ್ಕೆ ಮುಂದಿನ ಒಂದು ವರ್ಷದ ಆದಾಯ ಮತ್ತು ಖರ್ಚಿನ ಅಂದಾಜುಗಳಿರುವ ಲೆಕ್ಕಪತ್ರವೇ ಬಜೆಟ್ ಆಗಿದೆ. ವಿವಿಧ ಕ್ಷೇತ್ರಗಳಿಗೆ, ಉದ್ಯಮಗಳಿಗೆ ಸರ್ಕಾರದಿಂದ ಆಗುವ ಬಂಡವಾಳ ವೆಚ್ಚ ಎಷ್ಟು ಇತ್ಯಾದಿ ವಿವರಗಳು ಬಜೆಟ್​ನಲ್ಲಿ ಇರುತ್ತವೆ. ತೆರಿಗೆ ಪಾವತಿಸುವ ಮಧ್ಯಮ ವರ್ಗದವರಿಗೆ ಹೊರೆ ಹೆಚ್ಚಿಸುವುದೋ, ಇಳಿಸುವುದೋ ಎಂಬುದೂ ಇದರಲ್ಲಿ ಇರುತ್ತದೆ. ಹೀಗಾಗಿ, ಉದ್ಯಮಿಗಳು, ಜನಸಾಮಾನ್ಯರು ಎಲ್ಲರಿಗೂ ಬಜೆಟ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಇರುತ್ತವೆ. ಬಜೆಟ್ ಮಂಡನೆಯನ್ನು ಲೈವ್ (Budget live streaming) ಆಗಿ ಎಲ್ಲಿ ವೀಕ್ಷಿಸಬಹುದು ಇತ್ಯಾದಿ ವಿವರ ಈ ಕೆಳಕಂಡಂತಿದೆ:

ಬಜೆಟ್ ವಿವರ

  • ಬಜೆಟ್ ಮಂಡನೆಯಾಗುವ ದಿನ: 2024ರ ಫೆಬ್ರುವರಿ 1
  • ಬಜೆಟ್ ಭಾಷಣ: ಫೆ. 1 ಬೆಳಗ್ಗೆ 11ಗಂಟೆಗೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಭಾಷಣ ಆರಂಭ
  • ನೇರ ಪ್ರಸಾರ: ಸಂಸದ್ ಟಿವಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಮತ್ತು ಅವುಗಳ ಯೂಟ್ಯೂಬ್ ಅಕೌಂಟ್​ಗಳಲ್ಲಿ ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಇರುತ್ತದೆ.
  • ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಅಥವಾ ಪಿಐಬಿಯ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರುತ್ತದೆ.
  • ಟಿವಿ9 ಸೇರಿದಂತೆ ವಿವಿಧ ಟಿವಿ ವಾಹಿನಿಗಳು ಮತ್ತು ಯೂಟ್ಯೂಬ್ ಅಕೌಂಟ್​​ಗಳಲ್ಲೂ ಲೈವ್ ಪ್ರಸಾರ ಇರುತ್ತದೆ. ಜೊತೆ ಜೊತೆಗೆ ವಿಶ್ಲೇಷಣೆಗಳೂ ಇರುತ್ತವೆ.

ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಮುಗಿದ ಬಳಿಕ ಹಣಕಾಸು ಸಚಿವಾಲಯದ ಬಜೆಟ್ ವೆಬ್​ಸೈಟ್​​ನಲ್ಲಿ (www.indiabudget.gov.in) ವಿವಿಧ ಬಜೆಟ್ ದಾಖಲೆಗಳು ಸಿಗುತ್ತವೆ.

ಯೂನಿಯನ್ ಬಜೆಟ್ ಎಂಬ ಮೊಬೈಲ್ ಆ್ಯಪ್​ನಲ್ಲೂ ಬಜೆಟ್ ದಾಖಲೆಗಳು ಲಭ್ಯ ಇರುತ್ತವೆ. ಬಜೆಟ್​ನ ಮುಖ್ಯಾಂಶಗಳಿಂದ ಹಿಡಿದು ಬಜೆಟ್ ಭಾಷಣದವರೆಗೆ ದಾಖಲೆಗಳು ಲಭ್ಯ ಇರುತ್ತವೆ.

ಇದನ್ನೂ ಓದಿ: Budget Session: ಬಜೆಟ್ ಸೆಷನ್​ಗೆ; ಮುಂಗಡಪತ್ರ ಮಂಡನೆಗೆ ಕೆಲವೇ ಗಂಟೆ ಬಾಕಿ; ಲೋಕಸಭೆ ಚುನಾವಣೆ ಬಳಿಕ ಪೂರ್ಣ ಬಜೆಟ್ ಎಂದ ಪ್ರಧಾನಿ

ಟಿವಿ9 ಕನ್ನಡದಲ್ಲಿ ಲೈವ್ ವಿಶ್ಲೇಷಣೆ ನೋಡಿ

ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಲ್ಲಿ ಫೆ. 1ರಂದು ಬೆಳಗ್ಗೆಯಿಂದಲೇ ಬಜೆಟ್ ಬಗ್ಗೆ ನೇರ ಪ್ರಸಾರ ಶುರುವಾಗುತ್ತದೆ. ಬಜೆಟ್ ಪೂರ್ವಭಾವಿ ಚರ್ಚೆಯಿಂದ ಹಿಡಿದು ಬಜೆಟ್ ಮಂಡನೆಯ ನೇರ ಪ್ರಸಾರ ಹಾಗೂ ಬಜೆಟ್ ನಂತರದ ವಿಶ್ಲೇಷಣೆ ಎಲ್ಲವೂ ಸಮಗ್ರವಾಗಿರುತ್ತದೆ. ತಜ್ಞರಿಂದ ಬಜೆಟ್ ಬಗ್ಗೆ ಚರ್ಚೆಗಳು ನಡೆಯಲಿವೆ.

ಟಿವಿ9 ಡಿಜಿಟಲ್​ನಲ್ಲೂ ಬಜೆಟ್​ನ ಇಂಚಿಂಚೂ ಮಾಹಿತಿಯನ್ನು ನೋಡಬಹುದು, ಓದಬಹುದು. ಟಿವಿ9 ಕನ್ನಡ ಯೂಟ್ಯೂಬ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Wed, 31 January 24

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!