Budget Session: ಬಜೆಟ್ ಸೆಷನ್​ಗೆ; ಮುಂಗಡಪತ್ರ ಮಂಡನೆಗೆ ಕೆಲವೇ ಗಂಟೆ ಬಾಕಿ; ಲೋಕಸಭೆ ಚುನಾವಣೆ ಬಳಿಕ ಪೂರ್ಣ ಬಜೆಟ್ ಎಂದ ಪ್ರಧಾನಿ

President Draupadi Murmu's Speech: ಮಧ್ಯಂತರ ಬಜೆಟ್ ಮಂಡನೆಗೆ ಒಂದು ದಿನ ಮುನ್ನ ಇಂದು ಸಂಸತ್​ನಲ್ಲಿ ಅಧಿವೇಶನ ಆರಂಭಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದೊಂದಿಗೆ ಸೆಷನ್ ಚಾಲನೆಗೊಂಡಿದೆ. ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ. ನಾಳೆ ಫೆ. 1ರಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸುತ್ತಾರೆ. ಅಧಿವೇಶನ ಫೆ. 9ರವರೆಗೂ ಇರುತ್ತದೆ.

Budget Session: ಬಜೆಟ್ ಸೆಷನ್​ಗೆ; ಮುಂಗಡಪತ್ರ ಮಂಡನೆಗೆ ಕೆಲವೇ ಗಂಟೆ ಬಾಕಿ; ಲೋಕಸಭೆ ಚುನಾವಣೆ ಬಳಿಕ ಪೂರ್ಣ ಬಜೆಟ್ ಎಂದ ಪ್ರಧಾನಿ
ಸಂಸತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2024 | 12:51 PM

ನವದೆಹಲಿ, ಜನವರಿ 31: ಲೋಕಸಭೆ ಚುನಾವಣೆಗೆ ಎರಡು ತಿಂಗಳು ಮುಂಚೆ ಮಧ್ಯಂತರ ಬಜೆಟ್ (Interim Budget) ಮಂಡನೆ ಆಗಲಿದ್ದು, ಅಧಿವೇಶನಕ್ಕೆ ಚಾಲನೆ ಸಿಕ್ಕಿದೆ. ಜನವರಿ 31, ಬುಧವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ (Draupadi Murmu speech) ಮೂಲಕ ಅಧಿವೇಶನ ಆರಂಭಗೊಂಡಿದೆ. ಮುರ್ಮು ಅವರು ಸಂಸತ್​ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ದೇಶದ ಆರ್ಥಿಕ ಅಭ್ಯುದಯದ ಸಕಾರಾತ್ಮಕ ಅಂಶಗಳನ್ನು ಅವರು ಹಂಚಿಕೊಂಡರು. ಅಧಿವೇಶನದ ಆರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ಬಜೆಟ್ ಸೆಷನ್​ನ ಮುಖ್ಯ ಅಜೆಂಡಾವನ್ನು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದರು.

ಇಂದು ಬಜೆಟ್ ಅಧಿವೇಶನ ಆರಂಭಗೊಳ್ಳುವ ಮುನ್ನ ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ರಾಜದಂಡವನ್ನೂ ಸಂಸತ್ತಿಗೆ ತಂದು ಪ್ರತಿಷ್ಠಾಪಿಸಲಾಯಿತು.

ಫೆ. 1ರಂದು ಬಜೆಟ್ ಮಂಡನೆ

ಬಜೆಟ್ ಅಧಿವೇಶನ ಇಂದು (ಜ. 31) ಆರಂಭವಾಗಿದ್ದು ಫೆಬ್ರುವರಿ 9ರವರೆಗೆ ಇರುತ್ತದೆ. ಮಧ್ಯದಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ಎಂಟು ದಿನಗಳ ಕಾಲ ಅಧಿವೇಶನ ಕಲಾಪ ಇರುತ್ತದೆ.

ಇದನ್ನೂ ಓದಿ: Budget Session 2024: ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿ ಮುರ್ಮು ಮೊದಲ ಭಾಷಣ, ಆರ್ಥಿಕತೆ, ರಾಮಮಂದಿರ, ಚಂದ್ರಯಾನ ಕುರಿತ ವಿಷಯ ಪ್ರಸ್ತಾಪ

ಫೆಬ್ರುವರಿ 1ರಂದು, ಅಂದರೆ ನಾಳೆ ಗುರುವಾರ ಬೆಳಗ್ಗೆ 11ಗಂಟೆಗೆ ನಿರ್ಮಲಾ ಸೀತಾರಾಮನ್ ಈ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಭಾಷಣದ ಅವಧಿ ಒಂದೂವರೆಯಿಂದ ಎರಡೂವರೆ ಗಂಟೆ ಕಾಲ ಇರುವ ಸಾಧ್ಯತೆ ಇದೆ.

ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ ಮಾತ್ರವೇ ಇರುತ್ತದೆ. ಇದರಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲ. ಹೊಸ ಸರ್ಕಾರದ ರಚನೆ ಆಗುವವರೆಗೂ ಖರ್ಚುವೆಚ್ಚಗಳ ಲೇಖಾನುದಾನವನ್ನು ಬಜೆಟ್ ಒಳಗೊಂಡಿರಬಹುದು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಮಾಧಾನಕರ ಮಾತುಗಳನ್ನು ಆಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 1ರ ಬಜೆಟ್ ಮಂಡನೆಯನ್ನು ನಾರಿಶಕ್ತಿ ಆಚರಣೆ ಎಂದು ಪ್ರಶಂಸಿಸಿದರು.

ಇದನ್ನೂ ಓದಿ: Budget session 2024: ಇಂದು ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ: ಪಿಎಂ ಮೋದಿ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವತಿಕ ಚುನಾವಣೆ ನಡೆಯುತ್ತಿದ್ದು, ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಇದು ಜುಲೈನಲ್ಲಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಸರ್ಕಾರ 2014ರಿಂದಲೂ ಅಧಿಕಾರದಲ್ಲಿದೆ. ಸತತ ಮೂರನೇ ಬಾರಿಯೂ ಆಯ್ಕೆಯಾಗುವ ವಿಶ್ವಾಸದಲ್ಲಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ