Import Duty: ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿದ ಸರ್ಕಾರ; ಉತ್ಪಾದನಾ ವಲಯಕ್ಕೆ ಖುಷಿ ಸುದ್ದಿ

Mobile Manufacturing Industry Gets Boost: ಮೊಬೈಲ್ ಫೋನ್ ತಯಾರಿಕೆಗೆ ಬಳಸಲಾಗುವ ಬಿಡಿಭಾಗಗಳ ಆಮದು ಸುಂಕವನ್ನು ಶೇ. 15ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಆಮದು ಸಂಕು ಕಡಿಮೆ ಮಾಡಿದರೆ ಮೊಬೈಲ್ ರಫ್ತು ಪ್ರಮಾಣ ಎರಡು ವರ್ಷದಲ್ಲಿ ಮೂರು ಪಟ್ಟು ಹೆಚ್ಚಬಹುದು ಎಂದು ಸ್ಮಾರ್ಟ್​ಫೋನ್ ಉದ್ಯಮ ನಿರೀಕ್ಷಿಸಿದೆ. ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್​ಫೋನ್​ಗಳ ಮೊತ್ತ 50 ಬಿಲಿಯನ್ ಡಾಲರ್ ಎಂಬ ನಿರೀಕ್ಷೆ ಇದೆ.

Import Duty: ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿದ ಸರ್ಕಾರ; ಉತ್ಪಾದನಾ ವಲಯಕ್ಕೆ ಖುಷಿ ಸುದ್ದಿ
ಮೊಬೈಲ್ ಮ್ಯಾನುಫ್ಯಾಕ್ಚರಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 31, 2024 | 11:20 AM

ನವದೆಹಲಿ, ಜನವರಿ 31: ಮೊಬೈಲ್ ಫೋನ್ ತಯಾರಿಕೆಗೆ ಬಳಸಲಾಗುವ ಬಿಡಿಭಾಗಗಳ ಆಮದು ಸುಂಕವನ್ನು (Import Duty) ಶೇ. 15ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಸ್ಮಾರ್ಟ್​ಫೋನ್ ತಯಾರಿಕಾ ಉದ್ಯಮ (smartphone manufacturing industry) ಪ್ರಬಲಗೊಳ್ಳಲಿದೆ. ಉತ್ಪಾದನಾ ವೆಚ್ಚ ಕಡಿಮೆಗೊಳ್ಳುವುದರಿಂದ ಚೀನಾ, ವಿಯೆಟ್ನಾಂ ಮೊದಲಾದ ದೇಶಗಳಿಗೆ ಸ್ಪರ್ಧೆಯೊಡ್ಡಲು ಭಾರತೀಯ ತಯಾರಕರಿಗೆ ಸಾಧ್ಯವಾಗಲಿದೆ.

ಮೊಬೈಲ್ ಬಿಡಿಭಾಗಗಳ ಆಮದಿಗೆ ವಿಧಿಸಲಾಗುವ ಸುಂಕವನ್ನು ಕಡಿಮೆಗೊಳಿಸಬೇಕೆಂಬ ಕೂಗು ಸಾಕಷ್ಟು ಕಾಲದಿಂದ ಈ ಉದ್ಯಮದವರಿಂದ ಕೇಳುತ್ತಾ ಬಂದಿತ್ತು. ಇದೀಗ ಸರ್ಕಾರ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?

ಭಾರತದಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಉತ್ಪಾದನೆ

ಭಾರತದಲ್ಲಿ ಈಗೀಗ ಮೊಬೈಲ್ ಫೋನ್ ತಯಾರಿಕೆ ಪ್ರಮಾಣ ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 11 ಬಿಲಿಯನ್ ಡಾಲರ್​ನಷ್ಟಿತ್ತು. ಆಮದು ಸುಂಕ ಕಡಿಮೆಗೊಳಿಸಿದರೆ ಮತ್ತು ಕೆಲ ವಿಭಾಗಗಳಲ್ಲಿ ಸುಂಕವನ್ನೇ ಹಿಂಪಡೆದರೆ ಮುಂದಿನ ಎರಡು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 39 ಬಿಲಿಯನ್ ಡಾಲರ್ ಆಗಬಹುದು ಎಂದು ಇಂಡಿಯನ್ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಸಂಸ್ಥೆ ಹೇಳಿದೆ. ಅಂದರೆ ಎರಡು ವರ್ಷದಲ್ಲಿ ರಫ್ತು ಮೂರು ಪಟ್ಟು ಹೆಚ್ಚಾಗುವ ಸಂಭವನೀಯತೆ ಇದೆ.

ಆ್ಯಪಲ್, ಸ್ಯಾಮ್ಸುಂಗ್ ಮತ್ತಿತರ ಪ್ರಮುಖ ಕಂಪನಿಗಳು ಭಾರತದಲ್ಲಿ ಮೊಬೈಲ್ ತಯಾರಿಕೆ ಮಾಡುತ್ತಿವೆ. ಸ್ಯಾಮ್ಸುಂಗ್ ಬಹಳ ವರ್ಷಗಳಿಂದ ಭಾರತದಲ್ಲಿ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಮಾಡುತ್ತಿದೆ. ಚೀನಾದಲ್ಲಿ ಹೆಚ್ಚು ಅಸ್ತಿತ್ವದಲ್ಲಿದ್ದ ಆ್ಯಪಲ್​ನ ಐಫೋನ್ ಪ್ರೊಡಕ್ಷನ್ ಈಗ ಭಾರತಕ್ಕೆ ಹಂತ ಹಂತವಾಗಿ ವರ್ಗವಾಗುತ್ತಿದೆ.

ಇದನ್ನೂ ಓದಿ: IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?

2023-24ರಲ್ಲಿ ಭಾರತದಲ್ಲಿ 50 ಬಿಲಿಯನ್ ಡಾಲರ್ ಮೌಲ್ಯದಷ್ಟು ಮೊಬೈಲ್ ಫೋನ್ ಉತ್ಪಾದನೆ ಆಗುವ ಸಾಧ್ಯತೆ ಇದೆ. ಮುಂದಿನ ಹಣಕಾಸು ವರ್ಷದಲ್ಲಿ (2024-25) ಇದು 55ರಿಂದ 60 ಬಿಲಿಯನ್ ಡಾಲರ್​ಗೆ ಏರುವ ನಿರೀಕ್ಷೆ ಇದೆ. ಇನ್ನು, 2023-24ರಲ್ಲಿ ಭಾರತದಿಂದ ಮೊಬೈಲ್ ರಫ್ತು ಮೊತ್ತ 15 ಬಿಲಿಯನ್ ಡಾಲರ್, 2024-25ರಲ್ಲಿ 27 ಬಿಲಿಯನ್ ಡಾಲರ್ ತಲುಪಬಹುದು ಎಂಬ ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನ್​ನೊಳಗಿನ ಬಿಡಿಭಾಗಗಳ ಆಮದಿಗೆ ಸುಂಕವನ್ನು ಕಡಿಮೆ ಮಾಡಿರುವುದು ಬಹಳ ಮುಖ್ಯ ಪಾತ್ರ ವಹಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Wed, 31 January 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ