IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?

World Economic Outlook report: 2024 ಮತ್ತು 2025ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಹೇಗೆ ಇರಬಹುದು ಎಂದು ಐಎಂಎಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ತಿಳಿಸಿದೆ. ಈ ಎರಡು ವರ್ಷ ಭಾರತದ ಆರ್ಥಿಕತೆ ಶೇ. 6.5ರ ದರದಲ್ಲಿ ಬೆಳೆಯಬಹುದು ಎಂದು ಹೇಳಿದೆ. 2024ರಲ್ಲಿ ಅಮೆರಿಕ ಮತ್ತು ಚೀನಾದ ಆರ್ಥಿಕ ಬೆಳವಣಿಗೆ ಕ್ರಮವಾಗಿ ಶೇ. 2.3 ಮತ್ತು ಶೇ. 4.6ರಷ್ಟು ಇರಬಹುದು.

IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?
ಐಎಂಎಫ್
Follow us
|

Updated on: Jan 31, 2024 | 10:37 AM

ನವದೆಹಲಿ, ಜನವರಿ 31: ಈ ವರ್ಷ ಹಾಗೂ ಮುಂದಿನ ವರ್ಷ (2025) ಭಾರತದ ಆರ್ಥಿಕ ಬೆಳವಣಿಗೆ ಶೇ. 6.5ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF- International Monetary fund) ಅಭಿಪ್ರಾಯಪಟ್ಟಿದೆ. ಅತ್ತ, 2024ರಲ್ಲಿ ಜಾಗತಿಕ ಬೆಳವಣಿಗೆ ಶೇ. 3.1ರಷ್ಟು ಇದ್ದರೆ, 2025ರಲ್ಲಿ ಶೇ. 3.2ರಷ್ಟು ಇರಬಹುದು ಎಂದು ಹೇಳಿದೆ. ಐಎಂಎಫ್ ಜನವರಿ 30ರಂದು ಬಿಡುಗಡೆ ಮಾಡಿದ ವರ್ಲ್ಡ್ ಎಕನಾಮಿಕ್ ಔಟ್​ಲುಕ್​ನ (World Economic Outlook) ಪರಿಷ್ಕೃತ ವರದಿಯಲ್ಲಿ ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆಯ ಬಗ್ಗೆ ಹೊಸ ಅಂದಾಜು ಮಾಡಿದೆ.

ಈ ಹಿಂದಿನ ವರದಿಯಲ್ಲಿ ಐಎಂಎಫ್ 2024 ಮತ್ತು 2025ರಲ್ಲಿ ಭಾರತ ಶೇ. 6.3ರಷ್ಟು ಜಿಡಿಪಿ ವೃದ್ಧಿ ಕಾಣಬಹುದು ಎಂದು ಅಂದಾಜು ಮಾಡಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ತನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ. ಭಾರತ ಮಾತ್ರವಲ್ಲ, ವಿಶ್ವದ ಎಲ್ಲಾ ದೇಶಗಳ ಬೆಳವಣಿಗೆ ಬಗ್ಗೆಯೂ ಐಎಂಎಫ್ ನಿರೀಕ್ಷೆ ಹೆಚ್ಚಿದೆ.

ಚೀನಾ ಮತ್ತು ಅಮೆರಿಕದ ಬೆಳವಣಿಗೆ ಎಷ್ಟು?

ಐಎಂಎಫ್ ವರದಿ ಪ್ರಕಾರ ಚೀನಾ 2024ರಲ್ಲಿ ಶೇ. 4.6ರಷ್ಟು ಬೆಳೆಯಬಹುದು ಎಂದಿದೆ. 2025ರಲ್ಲಿ ಜಿಡಿಪಿ ವೃದ್ಧಿ ಶೇ. 4.1 ಇರಬಹುದು ಎನ್ನಲಾಗಿದೆ.

ಇದನ್ನೂ ಓದಿ: Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?

ಇನ್ನು, ಅಮೆರಿಕದ ವಿಷಯಕ್ಕೆ ಬಂದರೆ ಐಎಂಎಫ್ ನಿರೀಕ್ಷೆ ಕಡಿಮೆ ಆಗಿದೆ. ಅಂದರೆ, 2023ರಲ್ಲಿ ಶೇ. 2.5ರಷ್ಟು ಇದ್ದ ಆರ್ಥಿಕ ವೃದ್ಧಿ 2024ರಲ್ಲಿ ಶೇ. 2.1ಕ್ಕೆ ಇಳಿಯಬಹುದು. 2025ರಲ್ಲಿ ಅದು ಶೇ. 1.7ರಷ್ಟು ಇರಬಹುದು ಎಂದು ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ ಅಂದಾಜು ಮಾಡಿದೆ.

ಶುಭ ದಿನ ಬರುತೈತಿ, ಮೋಡ ಚದುರುತೈತಿ…

ಹಣದುಬ್ಬರ ನಿರಂತರವಾಗಿ ಇಳಿಮುಖವಾಗುತ್ತಿದ್ದು, ಬೆಳವಣಿಗೆ ಹೆಚ್ಚುತ್ತಾ ಹೋಗುತ್ತಿದೆ. ಮೋಡಗಳು ಚದುರತೊಡಗಿವೆ. ಜಾಗತಿಕ ಆರ್ಥಿಕತೆ ಸರಾಗವಾಗಿ ಸಾಗತೊಡಗಿದೆ ಎಂದು ಐಎಂಎಫ್​ನ ಚೀಫ್ ಎಕನಾಮಿಸ್ಟ್ ಒಲಿವಿಯರ್ ಗೌರಿಂಚಸ್ ಹೇಳಿದ್ದಾರೆ. ಆದರೆ, ಬೆಳವಣಿಗೆ ವೇಗ ಮಾತ್ರ ಇನ್ನೂ ಮಂದವಾಗಿದ್ದು, ಹೊಯ್ದಾಟಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

ಅಮೆರಿಕದಲ್ಲಿ ಹಣಕಾಸು ನೀತಿ ಇನ್ನೂ ಬಿಗಿಯಾಗಿರುವುದರಿಂದ ಅಲ್ಲಿ ಆರ್ಥಿಕ ಪ್ರಗತಿ ನಿಧಾನವಾಗಿಯೇ ಇರುತ್ತದೆ. ಚೀನಾದಲ್ಲಿ ಅನುಭೋಗ ಪ್ರಮಾಣ ಕಡಿಮೆ ಆಗಿರುವುದರಿಂದಲೂ ಬೆಳವಣಿಗೆ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ ಎಂದೂ ಐಎಂಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ