Sign In

By signing in or creating an account, you agree with Associated Broadcasting Company's Terms & Conditions and Privacy Policy.

Channapatna By Poll Result; ದೇವೇಗೌಡರ ದೈತ್ಯಶಕ್ತಿ ಕ್ಷೀಣಿಸುತ್ತಿದೆ, ಸೋಲಿಗೆ ಕುಮಾರಸ್ವಾಮಿ ಕಾರಣ: ಯೋಗೇಶ್ವರ್

Channapatna By Poll Result; ದೇವೇಗೌಡರ ದೈತ್ಯಶಕ್ತಿ ಕ್ಷೀಣಿಸುತ್ತಿದೆ, ಸೋಲಿಗೆ ಕುಮಾರಸ್ವಾಮಿ ಕಾರಣ: ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 3:14 PM

Channapatna By Poll Result: ಅಸಲಿಗೆ ಬಿಎಸ್ ಯಡಿಯೂರಪ್ಪನವರ ತಂತ್ರಗಾರಿಕೆಯನ್ನು ಇಲ್ಲಿ ಮೆಚ್ಚಲೇಬೇಕು, ಅವರು ಒಂದೇ ಕಲ್ಲಿಂದ ಎರಡು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಮೊದಲನೆಯದಾಗಿ ಅವರಿಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯನ್ನು ಹದ್ದುಬಸ್ತಿನಲ್ಲಿಡಬೇಕಿತ್ತು ಮತ್ತು ಎರಡನೇದಾಗಿ ತನ್ನನ್ನು ಬಿಜೆಪಿಯಿಂದ ದೂರ ಸರಿಸಬೇಕಿತ್ತು-ಎರಡರಲ್ಲೂ ಅವರು ಯಶ ಸಾಧಿಸಿದ್ದಾರೆ ಎಂದು ಯೋಗೇಶ್ವರ್ ಹೇಳಿದರು

ಬೆಂಗಳೂರು: ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಜನ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರ ಸ್ವಾರ್ಥ ಮತ್ತು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ, ದೇವೇಗೌಡರ ದೈತ್ಯಶಕ್ತಿ ಈಗ ಕ್ಷೀಣಿಸುತ್ತಿದೆ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಅವರಿಗೆ ನಂಬಿಕೆಯಿಲ್ಲ ಮತ್ತು ಜನರಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ವಿಶ್ವಾಸವಿಲ್ಲ ಎಂದು ಹೇಳಿದರು. ನಿಜ ಹೇಳಬೇಕೆಂದರೆ ಚುನಾವಣೆಗಳನ್ನು ಗೆದ್ದುಕೊಡುವ ಶಕ್ತಿಯ ನಾಯಕ ಈಗ ಜೆಡಿಎಸ್​ನಲ್ಲಿ ಯಾರೂ ಇಲ್ಲ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಕುಮಾರಸ್ವಾಮಿಯವರೇ ಕಾರಣ ಎಂದು ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Channapatna By Poll Result: ಮಾಜಿ ಪ್ರಧಾನಿ ದೇವೇಗೌಡರ ನಿವಾಸದ ಬಳಿ ಸುಳಿಯದ ಕಾರ್ಯಕರ್ತರು