20 ವರ್ಷದ ಹಿಂದೆ ಭಾರತೀಯ ಕಂಪನಿಗಳ ಬಗ್ಗೆ ಜರ್ಮನಿಯಲ್ಲಿ ನಂಬಿಕೆ ಇರಲಿಲ್ಲ, ಇವತ್ತು ಸ್ಥಿತಿ ಬದಲಾಗಿದೆ: ಬಾಬಾ ಕಲ್ಯಾಣಿ

Industrialist Baba Kalyani speaks at News9 Global Summit: ಜರ್ಮನಿಯಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಭಾರತ್ ಫೋರ್ಜ್ ಮುಖ್ಯಸ್ಥ ಬಾಬಾ ಕಲ್ಯಾಣಿ ಮಾತನಾಡಿದರು. ಭಾರತಕ್ಕೆ ಅಗಾಧ ಬೆಳವಣಿಗೆ ಹೊಂದುವ ಕಾಲ ಇದಾಗಿದೆ ಎಂದರು. ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕಾದರೆ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಹಲವು ಪಟ್ಟು ಬೆಳೆಯಬೇಕು ಎನ್ನುತ್ತಾರೆ ಕಲ್ಯಾಣಿ.

20 ವರ್ಷದ ಹಿಂದೆ ಭಾರತೀಯ ಕಂಪನಿಗಳ ಬಗ್ಗೆ ಜರ್ಮನಿಯಲ್ಲಿ ನಂಬಿಕೆ ಇರಲಿಲ್ಲ, ಇವತ್ತು ಸ್ಥಿತಿ ಬದಲಾಗಿದೆ: ಬಾಬಾ ಕಲ್ಯಾಣಿ
ಬಾಬಾ ಕಲ್ಯಾಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2024 | 7:15 PM

ನವದೆಹಲಿ, ನವೆಂಬರ್ 22: ಭಾರತದಲ್ಲಿ ಈಗ ಅಗಾಧ ರೀತಿಯಲ್ಲಿ ಪರಿವರ್ತನೆ ಆಗುತ್ತಿದೆ ಎಂದು ಭಾರತ್ ಫೋರ್ಜ್ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಬಾಬಾ ಕಲ್ಯಾಣಿ ಹೇಳಿದ್ದಾರೆ. ಜರ್ಮನಿಯಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಬೆಳವಣಿಗೆಯ ಸಾಧ್ಯತೆ ದಟ್ಟವಾಗಿರುವುದನ್ನು ವಿವರಿಸಿದರು. ‘ವಿವಿಧ ದೇಶಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಅಗಾಧ ಬೆಳವಣಿಗೆ ಹೊಂದಿವೆ. ಜರ್ಮನಿ ಮೊದಲ ಮಹಾಯುದ್ಧದ ನಂತರ ಬೆಳೆಯಿತು. ಜಪಾನ್ ಎರಡನೇ ಮಹಾಯುದ್ಧದ ಬಳಿಕ ಬೆಳೆಯಿತು. ಚೀನಾ ಎಂಬತ್ತರ ದಶಕದಲ್ಲಿ ಈ ಬೆಳವಣಿಗೆ ಕಂಡಿತು. ಈಗ ಭಾರತದ ಸಮಯ ಬಂದಿದೆ’ ಎಂದು ಬಾಬಾ ಕಲ್ಯಾಣಿ ಅಭಿಪ್ರಾಯಪಟ್ಟರು.

ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬೆಳೆಯುವುದು ಮುಖ್ಯ….

ಭಾರತದಲ್ಲಿ ಇವತ್ತು 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಇದೆ. 2047ರಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಪ್ರಧಾನಿ ಮೋದಿ ಇಟ್ಟುಕೊಂಡಿದ್ದಾರೆ. 25 ವರ್ಷದಲ್ಲಿ ಎಂಟು ಪಟ್ಟು ಬೆಳೆಯುವ ಗುರಿ ಇದೆ. ಇದು ಗಮನಾರ್ಹ ಸಂಗತಿ. ಆದರೆ, ಭಾರತವು ಮುಂದಿನ 25 ವರ್ಷದಲ್ಲಿ ಎಂಟು ಪಟ್ಟು ಬೆಳೆಯಬೇಕಾದರೆ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವು 15 ಪಟ್ಟು ಬೆಳೆಯಬೇಕಾಗುತ್ತದೆ. ನಾವು ಕೇವಲ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಿಗೆ ಮಾತ್ರವೇ ಸೀಮಿತವಾಗಲು ಸಾಧ್ಯವಿಲ್ಲ. ಮೋದಿ ನೇತೃತ್ವದ ಭಾರತವು ಇನ್ನೋವೇಶನ್​ನಲ್ಲಿ ದಾಪುಗಾಲಿಡುತ್ತಿದೆ. ಡಿಸೈನ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಆಗಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್​ನಲ್ಲಿ ತಜ್ಞರಿಂದ ಗಂಭೀರ ಚರ್ಚೆ

‘ಐದು ದಶಕದಿಂದ ನಾನು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿದ್ದೇನೆ. ಜರ್ಮನಿ, ಫ್ರಾನ್ಸ್, ಸ್ವೀಡನ್ ಮೊದಲಾದ ದೇಶಗಳಲ್ಲಿ ವ್ಯವಹಾರ ಮಾಡಿದ್ದೇನೆ. ಅಕ್ಟೋಬರ್ 22, ನನ್ನ ಕಂಪನಿ ಭಾರತ್ ಫೋರ್ಜ್ ಜರ್ಮನಿಗೆ ಕಾಲಿಟ್ಟು 20 ವರ್ಷ ಆಯಿತು. ಜರ್ಮನಿಯ ಕಂಪನಿಯೊಂದನ್ನು ಖರೀದಿಸಿದೆವು. ನಂತರದ ದಿನಗಳಲ್ಲಿ ಮತ್ತೊಂದು ಕಂಪನಿ ಖರೀದಿಸಿದೆವು. 20 ವರ್ಷದ ಹಿಂದೆ ಭಾರತೀಯ ಕಂಪನಿಗೆ ಇದು ಸುಲಭವಾಗಿರಲಿಲ್ಲ. ಅಂದು ಜರ್ಮನ್ ಕಂಪನಿಗಳು ಭಾರತೀಯ ಕಂಪನಿಯಿಂದ ಆಟೊಮೊಬೈಲ್ ಬಿಡಿಭಾಗಗಳ ಸರಬರಾಜಾಗುತ್ತದೆ ಎಂದರೆ ನಂಬಲಾಗುತ್ತಿರಲಿಲ್ಲ. ಇವತ್ತು ಕಾಲ ಬದಲಾಗಿದೆ.

‘2004ರಲ್ಲಿ ಜರ್ಮನಿ 3ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ನಾವು ಏನೂ ಇರಲಿಲ್ಲ. ನಾವು ಜರ್ಮನಿ ಕಂಪನಿ ಖರೀದಿಸಿದಾಗ ಜನರಿಗೆ ಸಕಾರಾತ್ಮಕ ಅಭಿಪ್ರಾಯ ಇರಲಿಲ್ಲ. ಒಬ್ಬ ಭಾರತೀಯ ಬಂದು ಇಲ್ಲಿರುವ ತಂತ್ರಜ್ಞಾನ ಪಡೆದುಕೊಂಡು ಕಂಪನಿಯನ್ನು ಮುಚ್ಚಿ ಹೋಗುತ್ತಾನೆ ಎಂದೇ ಎಲ್ಲರೂ ಭಾವಿಸಿದ್ದರು. ಭಾರತ್ ಫೋರ್ಜ್ ಸಂಸ್ಥೆ ಇವತ್ತು ಉತ್ತಮವಾಗಿ ಬೆಳೆದಿದೆ. ಮರ್ಸಿಡಿಸ್ ಬೆಂಜ್ ಮೊದಲಾದ ಪ್ರೀಮಿಯಮ್ ಆಟೊಮೊಬೈಲ್ ಕಂಪನಿಗಳಿಗೆ ಸರಬರಾಜು ಮಾಡುತ್ತಿದ್ದೇವೆ’ ಎಂದು ಬಾಬಾ ಕಲ್ಯಾಣಿ ಹೇಳಿಕೊಂಡರು.

ಇದನ್ನೂ ಓದಿ: News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ

ರೋಬೋಟಿಕ್ಸ್ ಕ್ಷೇತ್ರದ ಬೆಳವಣಿಗೆ ಕಂಡು ಬಾಬಾ ಅಚ್ಚರಿ…

ರೊಬೋಟಿಕ್ಸ್ ಕ್ಷೇತ್ರದಲ್ಲಿ ಭಾರತ ಅದ್ವಿತೀಯವಾಗಿ ಬೆಳೆಯುತ್ತಿದೆ. ಭಾರತೀಯ ಕಂಪನಿಗಳು ಅಗಾಧವಾದ ಮಟ್ಟದಲ್ಲಿ ರೊಬೋಟಿಕ್ಸ್ ತಂತ್ರಜ್ಞಾನದಲ್ಲಿ ಬೆಳವಣಿಗೆ ಸಾಧಿಸುತ್ತಿವೆ. ಚೀನಾ ಬಿಟ್ಟರೆ ಭಾರತದಲ್ಲೇ ಈ ಮಟ್ಟದ ಬೆಳವಣಿಗೆ ಆಗುತ್ತಿರುವುದು. ಇದು ನನಗೆ ಅಚ್ಚರಿ ತಂದಿತು ಎಂದು ಭಾರತ್ ಫೋರ್ಜ್ ಸಂಸ್ಥೆಯ ಮುಖ್ಯಸ್ಥರು ಹೇಳಿದರು.

ಇದೇ ವೇಳೆ ಅವರು ಭಾರತಕ್ಕೆ ಮಾನವ ಸಂಪನ್ಮೂಲದ ಬಲ ಇರುವ ಸಂಗತಿಯನ್ನೂ ಎತ್ತಿ ತೋರಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ