AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ

News9 global summit 2024: ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು ಏನಿದ್ದರೂ 'ಹವಾಮಾನ ಬದಲಾವಣೆ'ಯನ್ನು ನಿಭಾಯಿಸುವುದು. ನವೀಕರಿಸಬಹುದಾದ ಶಕ್ತಿಯು ಈ ಕಾರ್ಯದಲ್ಲಿ ಪ್ರಮುಖ ಅವಶ್ಯಕತೆಯಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ, ಭಾರತದ 'ಒನ್ ನೇಷನ್ ಒನ್ ಗ್ರಿಡ್' ನೀತಿಯು ತನ್ನ ಶಕ್ತಿಯನ್ನು ಹೇಗೆ ಹೆಚ್ಚಿಸಿದೆ ಎಂದು ಎಎಂ ಗ್ರೀನ್ ಉಪಾಧ್ಯಕ್ಷ ಬಿ. ಸಿ. ಈ ಸಂಪೂರ್ಣ ವಿಷಯದ ಬಗ್ಗೆ ತ್ರಿಪಾಠಿ ಹೇಳಿದ್ದಾರೆ.

News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ
ಬಿ.ಸಿ. ತ್ರಿಪಾಠಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 22, 2024 | 5:03 PM

Share

News9 Global Summit Germany 2024: ದೇಶದ ಅತಿದೊಡ್ಡ ನ್ಯೂಸ್ ನೆಟ್ವರ್ಕ್ ಎನಿಸಿರುವ ಟಿವಿ9 ನೆಟ್ವರ್ಕ್ ಸಂಸ್ಥೆ ಜರ್ಮನಿಯಲ್ಲಿ ನ್ಯೂಸ್9 ಜಾಗತಿಕ ಶೃಂಗಸಭೆ ಆಯೋಜಿಸಿದೆ. ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಭಾರತ ಮತ್ತು ಜರ್ಮನಿ ಜಂಟಿಯಾಗಿ ಹೇಗೆ ಪ್ರಯತ್ನಿಸಬಹುದು ಎನ್ನುವುದು ಸೇರಿದಂತೆ ವಿವಿಧ ವಿಚಾರಗಳನ್ನು ಈ ಗ್ಲೋಬಲ್ ಸಮಿಟ್​ನಲ್ಲಿ ಚರ್ಚಿಸಲಾಗುತ್ತಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಇಂದು ಎರಡನೇ ದಿನ ಹಲವು ಉದ್ಯಮಿಗಳಿಂದ ಚರ್ಚೆಗಳು ನಡೆದಿವೆ. ಎಎಂ ಗ್ರೀನ್ ಸಂಸ್ಥೆಯ ವೈಸ್ ಛೇರ್ಮನ್ ಬಿ.ಸಿ. ತ್ರಿಪಾಠಿ ಅವರು ಮಾತನಾಡಿ, ಹವಾಮಾನ ಬದಲಾವಣೆ ಸಮಸ್ಯೆಯ ಗಂಭೀರತೆಯನ್ನು ಪ್ರಸ್ತಾಪಿಸಿದರು.

ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪಳೆಯುಳಿಕೆ ಇಂಧನದಿಂದ ಮರುಬಳಕೆ ಇಂಧನಕ್ಕೆ ಬದಲಾಗುವ ತುರ್ತು ಅಗತ್ಯವಿದೆ. ಇದರ ಆಧಾರದ ಮೇಲೆ, ಮುಂದಿನ ಪೀಳಿಗೆಗೆ ಇಂಧನ ಮತ್ತು ಆರ್ಥಿಕ ಬೆಳವಣಿಗೆಯ ಸುಸ್ಥಿರ ಭವಿಷ್ಯವನ್ನು ಸಿದ್ಧಪಡಿಸಬಹುದು ಎಂದು ತ್ರಿಪಾಠಿ ಕರೆ ನೀಡಿದರು..

‘ಒನ್ ನೇಷನ್ ಒನ್ ಗ್ರಿಡ್’ ಭಾರತದ ಬಲವನ್ನು ಹೆಚ್ಚಿಸಿದೆ

ಬಿ. ಸಿ. ತ್ರಿಪಾಠಿ ತಮ್ಮ ಭಾಷಣದಲ್ಲಿ ಭಾರತದ ‘ಒನ್ ನೇಷನ್ ಒನ್ ಗ್ರಿಡ್’ ನೀತಿಯನ್ನೂ ಪ್ರಸ್ತಾಪಿಸಿದರು. ಕೆಲವು ವರ್ಷಗಳ ಹಿಂದೆ ಭಾರತಕ್ಕೆ ರಿನಿವಬಲ್ ಎನರ್ಜಿ ಮೂಲಗಳಿಂದ ಉತ್ಪತ್ತಿಯಾದ ವಿದ್ಯುತ್ ಅನ್ನು ಹೇಗೆ ಸಂಗ್ರಹಿಸುವುದು ಹೇಗೆ ವಿತರಿಸುವುದು ಎನ್ನುವ ಸಮಸ್ಯೆ ಇತ್ತು. ಆಗ ಮೋದಿ ಅವರು ‘ಒನ್ ನೇಷನ್ ಒನ್ ಗ್ರಿಡ್’ ಯೋಜನೆ ತಂದು. ಇದು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಬಲ ತಂದಿದೆ ಎಂದು ಎಎಂ ಗ್ರೀನ್ ಸಂಸ್ಥೆಯ ವೈಸ್ ಛೇರ್ಮನ್ ಹೇಳಿದರು.

ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್​ನಲ್ಲಿ ತಜ್ಞರಿಂದ ಗಂಭೀರ ಚರ್ಚೆ

ಜರ್ಮನಿಯ ಸ್ಟುಟ್​ಗಾರ್ಟ್​ನಲ್ಲಿ ನಿನ್ನೆ ಆರಂಭವಾದ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ನಾಳೆ ಸಮಾರೋಪನಗೊಳ್ಳಲಿದೆ. ಇಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Fri, 22 November 24