ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ
News9 global summit 2024 germany: ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ಮತ್ತು ಜರ್ಮನಿಯ ನಡುವಿನ ವ್ಯಾಪಾರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಬೇಕೆಂದು ಕರೆ ನೀಡಿದರು.
ಬೆಂಗಳೂರು, ನವೆಂಬರ್ 22: ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ. ಇಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ಇದೆ. ವಿಶ್ವದರ್ಜೆ ಮೂಲಸೌಕರ್ಯಗಳಿವೆ. ಕೌಶಲ್ಯವಂತ ಕೆಲಸಗಾರರಿದ್ದಾರೆ. ಜರ್ಮನ್ ಕಂಪನಿಗಳು ಇದನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ಮತ್ತು ಜರ್ಮನಿಯ ನಡುವಿನ ವ್ಯಾಪಾರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕ ಮತ್ತು ಜರ್ಮನಿ ಮಧ್ಯೆ ಪ್ರಬಲ ಸಂಬಂಧ ಇದೆ. ವ್ಯಾಪಾರ ಕ್ಷೇತ್ರದಲ್ಲಿ. ಕರ್ನಾಟಕದಲ್ಲಿ ಬೋಷ್, ಸೀಮನ್ಸ್ ಸೇರಿದಂತೆ 200 ಜರ್ಮನಿ ಕಂಪನಿಗಳಿವೆ. ಕರ್ನಾಟಕದವು ಉತ್ತಮ ಹೂಡಿಕೆ ಸ್ಥಳವಾಗಿದೆ. ಜರ್ಮನಿಗೆ ಇದನ್ನು ಬಳಸಿಕೊಳ್ಳುವ ಅವಕಾಶ ಇದೆ. ಕರ್ನಾಟಕದಲ್ಲಿ ಕೌಶಲ್ಯವಂತ ಕೆಲಸಗಾರರ ಸಮೂಹ ಇದೆ. ಇಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯ ಇದೆ. ವಿದೇಶೀ ಹೂಡಿಕೆಗಳಿಗೆ ಉತ್ತೇಜನ ನೀಡುವ ನೀತಿಯನ್ನು ಸರ್ಕಾರ ಹೊಂದಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್ನಲ್ಲಿ ತಜ್ಞರಿಂದ ಗಂಭೀರ ಚರ್ಚೆ
ಬೆಂಗಳೂರು ತಂತ್ರಜ್ಞಾನ ಕೇಂದ್ರವಾಗಿದ್ದು ಇಲ್ಲಿ 400ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳು ನಿರ್ವಹಣೆ ಆಗುತ್ತಿವೆ. ಜರ್ಮನಿ ಕಂಪನಿಗಳು ಇವುಗಳನ್ನು ಉಪಯೋಗಿಸಿಕೊಳ್ಳಬಹುದು. ಇಲ್ಲಿ ಹೂಡಿಕದಾರಸ್ನೇಹಿ ವಾತಾವರಣ, ವಿಶ್ವದರ್ಜೆ ಇನ್ಫ್ರಾಸ್ಟ್ರಕ್ಚರ್, ಕೌಶಲ್ಯವಂತ ಕೆಲಸಗಾರರಿದ್ದಾರೆ. ಇದನ್ನು ಜರ್ಮನ್ ಕಂಪನಿಗಳು ಬಳಸಿಕೊಳ್ಳಬಹುದು ಎಂದರು.
ಸಿದ್ದರಾಮಯ್ಯ ಇದೇ ವೇಳೆ ಬೆಂಗಳೂರಿನಲ್ಲಿ 2025ರ ಫೆಬ್ರುವರಿ 11-14ರಂದು ನಡೆಯಲಿರುವ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದ ವಿಚಾರವನ್ನು ಪ್ರಸ್ತಾಪಿಸಿ, ಆ ಕಾರ್ಯಕ್ರಮಕ್ಕೆ ಜರ್ಮನಿಯೂ ಒಂದು ಪಾರ್ಟ್ನರ್ ದೇಶವಾಗಿದೆ ಎಂದರು.
ಇದನ್ನೂ ಓದಿ: News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ
ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಆಯೋಜಿಸಿದ ಟಿವಿ9 ನೆಟ್ವರ್ಕ್ ಸಂಸ್ಥೆಯನ್ನು ಕರ್ನಾಟಕ ಸಿಎಂ ಅಭಿನಂದಿಸಿದ್ದಾರೆ. ಇಂಥ ಸಮಾವೇಶಗಳು ದೇಶದಲ್ಲಿ ವ್ಯಾಪಾರ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸಹಕಾರಿ ಆಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 22 November 24