AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಬಗ್ಗೆ ತಮಿಳು ನಟನ ಅಭಿಮಾನ ತುಂಬಿದ ಮಾತುಗಳು

Yash: ಕನ್ನಡದ ನಟ ಯಶ್ ಈಗ ಪ್ಯಾನ್ ಇಂಡಿಯಾ ನಟ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಸಿನಿಮಾ ತಾರೆಯರು ಸಹ ಯಶ್​ರ ಅಭಿಮಾನಿಗಳು, ನೆರೆಯ ತಮಿಳು ಚಿತ್ರರಂಗದ ಸ್ಟಾರ್ ನಟರೊಬ್ಬರು ಯಶ್​ರ ಗುಣಗಾನ ಮಾಡಿದ್ದಾರೆ.

ಯಶ್ ಬಗ್ಗೆ ತಮಿಳು ನಟನ ಅಭಿಮಾನ ತುಂಬಿದ ಮಾತುಗಳು
ಮಂಜುನಾಥ ಸಿ.
|

Updated on: Nov 24, 2024 | 7:07 AM

Share

ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಮೂಲಕ ತಮ್ಮ ಹಾಗೂ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಲೆವೆಲ್​ಗೆ ಅವರು ಕೊಂಡೊಯ್ದಿದ್ದಾರೆ. ‘ಕೆಜಿಎಫ್’ ಸಿನಿಮಾ ಬಳಿಕ ಯಶ್​ಗೆ ಸಾಮಾನ್ಯ ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ಸಿನಿಮಾ ತಾರೆಯರು ಸಹ ಫ್ಯಾನ್ ಆಗಿಬಿಟ್ಟಿಟ್ಟಾರೆ. ದೇಶದ ಒಂದಲ್ಲ ಒಂದು ವೇದಿಕೆಯಲ್ಲಿ ಯಶ್ ಬಗ್ಗೆ, ‘ಕೆಜಿಎಫ್’ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ನೆರೆಯ ಚಿತ್ರರಂಗದ ಸ್ಟಾರ್ ನಟರೊಬ್ಬರು ಕನ್ನಡದ ನಟ ಯಶ್ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆದ ‘ಅಮರನ್’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಸಂವಾದ ಕಾರ್ಯಕ್ರಮವೊಂದರಲ್ಲಿ ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ‘ಯಶ್ ಕನ್ನಡ ಚಿತ್ರರಂಗದಲ್ಲಿ ಮಾಡಿರುವ ಕಾರ್ಯ ಅತ್ಯದ್ಭುತವಾದುದು. ‘ಕೆಜಿಎಫ್ 1’ ಬಿಡುಗಡೆ ಆದಾಗ ಅದು ಕನ್ನಡ ಚಿತ್ರರಂಗದ ದಾಖಲೆ ಆಗಿತ್ತು. ಆದರೆ ‘ಕೆಜಿಎಫ್ 2’ ಬಂದಾಗ ಅದು ಭಾರತ ಚಿತ್ರರಂಗದ ದಾಖಲೆ ಆಯ್ತು. ಯಶ್ ಮಾಡಿದ ಕಾರ್ಯ ಅತ್ಯದ್ಭುತವಾದುದು, ಜೀರೋ ಇಂದ ತಮ್ಮನ್ನು ಬೇರೆ ಲೆವೆಲ್​ಗೆ ಕೊಂಡೊಯ್ದರು, ಜೊತೆಗೆ ಕನ್ನಡ ಚಿತ್ರರಂಗವನ್ನು ಸಹ ಇನ್ನೊಂದು ಲೆವೆಲ್​ಗೆ ಕೊಂಡೊಯ್ದರು. ನಾನು ಯಶ್​ರ ದೃಢತೆಯನ್ನು ಸದಾ ಇಷ್ಟಪಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಟಾಕ್ಸಿಕ್ ಸಿನಿಮಾ: ಯಶ್​ ಜೊತೆಗೂಡಿದ ಮತ್ತೊಬ್ಬ ಬಾಲಿವುಡ್ ಬೆಡಗಿ

‘ಕೆಜಿಎಫ್’ ಸಿನಿಮಾಕ್ಕೆ ಮುನ್ನ ಯಶ್​ ಕನ್ನಡದ ಸ್ಟಾರ್ ಆಗಿದ್ದರು. ಕನ್ನಡ ಸಿನಿಮಾ ಆಗಿದ್ದ ‘ಕೆಜಿಎಫ್’ ಅನ್ನು ಅವರು ಭಾರತದ ಸಿನಿಮಾ ಅನ್ನಾಗಿ ಮಾಡಿದ ರೀತಿ ಅದರಿಂದ ಬಂದ ಯಶಸ್ಸು, ‘ಕೆಜಿಎಫ್’ ಸಿನಿಮಾದ ಬಳಿಕ ಇತರೆ ಚಿತ್ರರಂಗದವರು ಕನ್ನಡ ಚಿತ್ರರಂಗವನ್ನು ನೋಡುವ ಬದಲಾಗಿ ಹೋಯ್ತು. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಸಹ ಯಶ್ ಬಗ್ಗೆ ಮಾತನಾಡುತ್ತಾ, ‘ನಾವು ಮಲಯಾಳಿಗಳು ಕನ್ನಡ ಚಿತ್ರರಂಗ ನಮಗಿಂತಲೂ ಚಿಕ್ಕ ಚಿತ್ರರಂಗ ಇರಬಹುದು ಎಂದುಕೊಂಡಿದ್ದೆವು, ಆದರೆ ಒಬ್ಬ ಯಶ್ ಬಂದರು, ‘ಕೆಜಿಎಫ್’ ಮೂಲಕ 1000 ಕೋಟಿ ಗಳಿಸಿದರು. ನಮಗೆ ಶಾಕ್ ಆಗಿಬಿಟ್ಟಿತ್ತು’ ಎಂದಿದ್ದರು.

View this post on Instagram

A post shared by YASH™ (@yashism_worldwide)

ಯಶ್ ಈಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ‘ಕೆಜಿಎಫ್’ಗಿಂತಲೂ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದು, ಸ್ವತಃ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅವರುಗಳು ನಟಿಸುತ್ತಿದ್ದಾರೆ. ಜೊತೆಗೆ ಕೆಲವು ವಿದೇಶಿ ನಟ-ನಟಿಯರು ಹಾಗೂ ತಂತ್ರಜ್ಞರು ಸಹ ಇದ್ದಾರೆ. ‘ಟಾಕ್ಸಿಕ್’ ಕನ್ನಡದ ಈವರೆಗಿನ ಅತ್ಯಂತ ಹೆಚ್ಚು ಬಂಡವಾಳದ ಮತ್ತು ಹೆಚ್ಚು ಅಡ್ವಾನ್ಸ್ಡ್ ಸಿನಿಮಾ ಆಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ