ಗ್ರ್ಯಾಮಿ ನಾಮಿನೇಷನ್ನಲ್ಲಿ ‘ಮಗಳು ಜಾನಕಿ’ ಟೈಟಲ್ ಸಾಂಗ್ ಗಾಯಕಿ ವಾರಿಜಾಶ್ರೀ ವೇಣುಗೋಪಲ್ ಹೆಸರು
ಬೆಂಗಳೂರಿನ ವಾರಿಜಾಶ್ರೀ ವೇಣುಗೋಪಾಲ್ ಅವರು 'ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್' ವಿಭಾಗದಲ್ಲಿ ಗ್ರಾಮಿ 2025 ನಾಮನಿರ್ದೇಶನ ಪಡೆದಿದ್ದಾರೆ. ಅವರ 'ಎ ರಾಕ್ ಸಮ್‌ವೇರ್' ಹಾಡು ನಾಮನಿರ್ದೇಶನಗೊಂಡಿದೆ. ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಗ್ರ್ಯಾಮಿ ನಾಮನಿರ್ದೇಶನವು ಅವರ ಸಂಗೀತ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
‘ಮಗಳು ಜಾನಕಿ’ ಧಾರಾವಾಹಿಯನ್ನು ಟಿಎನ್ ಸೀತಾರಾಮ ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯ ಟೈಟಲ್ ಸಾಂಗ್ ಸಾಕಷ್ಟು ಗಮನ ಸೆಳೆದಿತ್ತು. ಇದನ್ನು ಹಾಡಿದ್ದು ವಾರಿಜಾಶ್ರೀ ವೇಣುಗೋಪಾಲ್ ಅವರು. ಕನ್ನಡದಲ್ಲಿ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ. ಅವರು ‘ಹಾಡು ಕರ್ನಾಟಕ’ ಶೋಗೆ ಜಡ್ಜ್ ಕೂಡ ಆಗಿದ್ದರು. ಬೆಂಗಳೂರಿನ ಮೂದವರಾದ ಅವರು, ಈ ಬಾರಿಯ ಗ್ರ್ಯಾಮಿ ಅವಾರ್ಡ್ಗೆ ನಾಮಿನೇಟ್ ಆಗಿದ್ದಾರೆ. ಇದು ಅವರ ಸಂತಸ ಹೆಚ್ಚಿಸಿದೆ.
‘ಗ್ರ್ಯಾಮಿ 2025’ ನಾಮಿನೇಷನ್ ಇತ್ತೀಚೆಗೆ ಅನೌನ್ಸ್ ಆಗಿದೆ. ಇದು 67ನೇ ಸಾಲಿನ ಅವಾರ್ಡ್ಸ್ ಕಾರ್ಯಕ್ರಮ ಆಗಿದೆ. ಈ ಸಾಲಿನಲ್ಲಿ ರಿಕ್ಕಿ ಕೇಜ್, ಅಶೋಕ್ ಶಂಕರ್ ಸೇರಿ ಐದು ಮಂದಿ ಭಾರತೀಯರು ಇದ್ದಾರೆ. ಈ ಸಾಲಿನಲ್ಲಿ ಬೆಂಗಳೂರಿನ ವಾರಿಜಾಶ್ರೀ ವೇಣುಗೋಪಾಲ್ ಕೂಡ ಇದ್ದಾರೆ ಅನ್ನೋದು ವಿಶೇಷ. ಅವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದ್ದಾರೆ.
ವಾಣಿಶ್ರೀ ಅವರು ಸಂಗೀತ ಹಿನ್ನೆಲೆ ಹೊಂದಿರುವವರು. ಅವರ ತಂದೆ ಎಚ್ಎಸ್ ವೇಣುಗೋಪಾಲ್ ಹಾಗೂ ತಾಯಿ ಟಿವಿ ರಮಾ ಸಂಗೀತ ಲೋಕದಲ್ಲಿ ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ವಾಣಿಶ್ರೀ ಅವರಿಗೆ ಸಂಗೀತದ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಆಸಕ್ತಿ ಬಂತು. ಅವರು ಮೊದಲ ಬಾರಿಗೆ ಗ್ರ್ಯಾಮಿಗೆ ನಾಮಿನೇಟ್ ಆದ ಖುಷಿಯಲ್ಲಿ ಇದ್ದಾರೆ.
View this post on Instagram
‘ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್’ ವಿಭಾಗದಲ್ಲಿ ಅವರ ‘ಎ ರಾಕ್ ಸಮ್‌ವೇರ್’ ಹಾಡು ನಾಮಿನೇಟ್ ಆಗಿದೆ. ಇದು ಅವರ ಖುಷಿ ಹೆಚ್ಚಿಸಿದೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ಬರುತ್ತಿವೆ. ‘ಹರಿವ ಝರಿ..’, ರೀತಿಯ ಹಾಡುಗಳನ್ನು ಅವರು ಹಾಡಿದ್ದಾರೆ. ಈ ಹಾಡುಗಳು ಸಾಕಷ್ಟು ಸುಮಧುರವಾಗಿ ಮೂಡಿ ಬಂದಿತ್ತು. ಇದನ್ನೂ ಓದಿ: ಎಷ್ಟು ಮಧುರವಾಗಿದೆ ನೋಡಿ ನಿಶಾ ರವಿಕೃಷ್ಣನ್ ಧ್ವನಿ
ಬೆಂಗಳೂರು ಮೂಲದ Chakrafonics ಹೆಸರಿನ ಬ್ಯಾಂಡ್ನ ಭಾಗವಾಗಿ ವಾಣಿಶ್ರೀ ಇದ್ದಾರೆ. ಪ್ರವೀಣ್ ರಾವ್, ಅಜಯ್ ವಾರಿಯರ್, ಪ್ರಮಥ್ ಕಿರಣ್ ಈ ಬ್ಯಾಂಡ್ನಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Sat, 23 November 24