Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?

Indian Economy – A Review: ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಿಲ್ಲ. ಆರ್ಥಿಕ ಸಮೀಕ್ಷೆ ಬದಲು ಪರ್ಯಾಯ ಪರಾಮರ್ಶೆ ವರದಿ ಪ್ರಸ್ತುಪಡಿಸಲಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿಯ ಚಿತ್ರಣ ಇದರಲ್ಲಿ ತೋರಿಸಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ನೇತೃತ್ವದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ.

Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?
ಆರ್ಥಿಕ ಸಮೀಕ್ಷೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 31, 2024 | 9:54 AM

ನವದೆಹಲಿ, ಜನವರಿ 31: ಸಾಮಾನ್ಯವಾಗಿ ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷಾ ವರದಿಯನ್ನು (Economic Survey 2024) ಬಿಡುಗಡೆ ಮಾಡುವುದು ವಾಡಿಕೆ. ಬಜೆಟ್ ಹಿಂದಿನ ದಿನದಂದು ಇದನ್ನು ಬಹಿರಂಗಪಡಿಸಲಾಗುತ್ತದೆ. ಆದರೆ, ಏಪ್ರಿಲ್, ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಈ ಬಾರಿ ಪೂರ್ಣ ಬಜೆಟ್ ಬದಲು ಮಧ್ಯಂತರ ಬಜೆಟ್ ಮಾತ್ರವೇ ಇರುತ್ತದೆ. ಹಾಗೆಯೇ, ಆರ್ಥಿಕ ಸಮೀಕ್ಷಾ ವರದಿಯನ್ನು ಪ್ರಸ್ತುಪಡಿಸುವಂತಿಲ್ಲ. ಹೀಗಾಗಿ, ಇಂದು ಪ್ರಸ್ತುತಪಡಿಸಬೇಕಿದ್ದ ಆರ್ಥಿಕ ಸಮೀಕ್ಷಾ ವರದಿ ಇರುವುದಿಲ್ಲ. ಅದರ ಬದಲು ಎರಡು ದಿನಗಳ ಹಿಂದೆಯೇ ಬೇರೆಯ ಆರ್ಥಿಕ ಪರಾಮರ್ಶೆ ವರದಿ (Indian Economy – A Review) ಬಿಡುಗಡೆ ಆಗಿದೆ.

ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಎಕನಾಮಿಕ್ ಸರ್ವೆ ರಿಪೋರ್ಟ್ ಅನ್ನು ಬಿಡುಗಡೆ ಮಾಡುತ್ತಾರೆ. ಈಗ ಅವರದೇ ಆರ್ಥಿಕ ವ್ಯವಹಾರಗಳ ಇಲಾಖೆ ಪರ್ಯಾಯ ವರದಿ ತಯಾರಿಸಿದೆ. ದೇಶದ ಆರ್ಥಿಕ ಬೆಳವಣಿಗೆಯ ಶಕ್ತಿ ಮತ್ತು ದಿಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ‘ದಿ ಇಂಡಿಯನ್ ಎಕನಾಮಿ- ಎ ರಿವ್ಯೂ’ ವರದಿಯನ್ನು ಜನವರಿ 29ರಂದು ಬಿಡುಗಡೆ ಮಾಡಲಾಗಿದೆ. ಹಾಲಿ ಇರುವ ಆರ್ಥಿಕ ಪರಿಸ್ಥಿತಿ ಮತ್ತು ಮುಂದಿನ ದಿನಗಳಲ್ಲಿನ ಸಾಧ್ಯತೆಗಳೇನು ಎಂದು ಈ ವರದಿಯಲ್ಲಿ ಪರಾಮರ್ಶಿಸಲಾಗಿದೆ.

ಆರ್ಥಿಕ ಸಮೀಕ್ಷೆಯಾಗಲೀ, ಈಗ ಪ್ರಕಟವಾಗಿರುವ ಪರ್ಯಾಯ ಆರ್ಥಿಕ ವರದಿಯಾಗಲೀ ಬಜೆಟ್​ಗೆ ಸಂಬಂಧಿಸಿದ್ದಲ್ಲ. ಪೂರ್ವಭಾವಿಯಾಗಿ ಮಾತ್ರವೇ ಇದನ್ನು ಪ್ರಸ್ತುಪಡಿಸಲಾಗುತ್ತದೆ. ದೇಶದ ಆರ್ಥಿಕ ಚಿತ್ರಣ ಹೇಗಿದೆ ಎಂದು ಜನಸಾಮಾನ್ಯರ ಕಣ್ಮುಂದೆ ತರಲು ಈ ವರದಿ ಸಹಾಯವಾಗುತ್ತದೆ.

ಇದನ್ನೂ ಓದಿ: Budget 2024 Date: ಕೇಂದ್ರ ಬಜೆಟ್ ದಿನ, ಸಮಯ, ಸೆಷನ್, ದಾಖಲೆ ಮತ್ತಿತರ ವಿವರ

ಭಾರತೀಯ ಆರ್ಥಿಕತೆಯ ಪರಾಮರ್ಶೆ ವರದಿಯ ಮುಖ್ಯಾಂಶಗಳು

  • ಮುಂದಿನ 3 ವರ್ಷದಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.
  • 2030ರೊಳಗೆ ಭಾರತದ ಆರ್ಥಿಕತೆ 7 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.
  • 2023-24ರ ಹಣಕಾಸು ವರ್ಷದಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಸರಾಸರಿ ಶೇ. 3 ಮಾತ್ರವೇ ಇದ್ದರೆ, ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7.2 ಅನ್ನು ದಾಟಬಹುದು.
  • ಸತತ ಮೂರನೇ ವರ್ಷ ಭಾರತದ ಜಿಡಿಪಿ ದರ ಶೇ. 7 ಮೀರಲಿದೆ.
  • ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹೆ್ಚ್ಚಿದೆ. ಹಣಕಾಸು ವಲಯ ಬಲಯುತವಾಗಿದೆ. ಆಹಾರೇತರ ಸಾಲಗಳ ವೃದ್ಧಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ಚುರುಕು ಮುಟ್ಟಿಸಿದೆ.
  • ವಿಶ್ವದ ಅತಿದೊಡ್ಡ ಫಿನ್​ಟೆಕ್ ಆರ್ಥಿಕತೆಗಳ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರಿಟನ್ ನಂತರದ ಸ್ಥಾನ ಭಾರತದ್ದಾಗಿದೆ.
  • ವಿಶ್ವದ ಅತಿದೊಡ್ಡ ಸ್ಟಾಕ್ ಮಾರ್ಕೆಟ್​ಗಳಲ್ಲಿ ಹಾಂಕಾಂಗ್ ಅನ್ನು ಮೀರಿಸಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
  • ಪಿಎಂ ಜನ್ ಧನ್ ಯೋಜನೆಯ ಪರಿಣಾಮವಾಗಿ ದೇಶದಲ್ಲಿ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಸಂಖ್ಯೆ ಹೆಚ್ಚಾಗಿದೆ. 2015-16ರಲ್ಲಿ ಶೇ. 53ರಷ್ಟು ಮಹಿಳೆಯರು ಬ್ಯಾಂಕ್ ಖಾತೆ ಹೊಂದಿದ್ದರೆ, 2019-20ರಲ್ಲಿ ಈ ಸಂಖ್ಯೆ ಶೇ. 7.6ಕ್ಕೆ ಏರಿದೆ.
  • 2017-18ರಲ್ಲಿ ಶೇ. 23.3ರಷ್ಟು ಇದ್ದ ಮಹಿಳಾ ಕಾರ್ಮಿಕ ಪಾಲ್ಗೊಳ್ಳುವಿಕೆ ದರ 2022-23ರಲ್ಲಿ ಶೇ. 37ಕ್ಕೆ ಏರಿದೆ.
  • ಸ್ಕಿಲ್ ಇಂಡಿಯಾ ಮಿಷನ್, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಮೊದಲಾದ ಯೋಜನೆಗಳಿಂದಾಗಿ ಆದಾಯ ಹೆಚ್ಚಳದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿದೆ.
  • ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಬಹಳ ಹೆಚ್ಚಾಗಿದೆ.
  • ದೇಶದಲ್ಲಿ ಎಂಎಸ್​ಎಂಇ ಸಂಸ್ಥೆಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತಿವೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:51 am, Wed, 31 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್