AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಎ ತಂಡಕ್ಕೆ ರೋಹಿತ್ ಶರ್ಮಾ..!

India vs Australia: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ ಎ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಈ ಸರಣಿಯ ಬಳಿಕ ಹಿಟ್​ಮ್ಯಾನ್ ಭಾರತ ಸೀನಿಯರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ಎ ತಂಡಕ್ಕೆ ರೋಹಿತ್ ಶರ್ಮಾ..!
Rohit Sharma
ಝಾಹಿರ್ ಯೂಸುಫ್
|

Updated on: Aug 23, 2025 | 10:56 AM

Share

ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಇಂಡಿಯಾ ಎ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ರೆವ್​ಸ್ಪೋರ್ಟ್ಸ್ ವರದಿ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸದ ತಯಾರಿಯ ಭಾಗವಾಗಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಣ ಏಕದಿನ ಸರಣಿಯಲ್ಲಿ ಹಿಟ್​ಮ್ಯಾನ್ ಕಣಕ್ಕಿಳಿಯಲಿದ್ದಾರೆ.

ಏಕೆಂದರೆ  ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಇನ್ನು ಐಪಿಎಲ್ ನಂತರ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ.

ಇತ್ತ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಏಷ್ಯಾಕಪ್​ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿಕ ಸರಣಿಗೆ ತೆರಳಲಿದೆ. ಅದಕ್ಕೂ ಮುನ್ನ ಸ್ಪರ್ಧಾತ್ಮಕ ಪಂದ್ಯವಾಡಲು ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ. ಅದರಂತೆ ಸೆಪ್ಟೆಂಬರ್-ಅಕ್ಟೋಬರ್​ ನಡುವೆ ನಡೆಯಲಿರುವ ಭಾರತ ಎ ತಂಡದ ಸರಣಿಯಲ್ಲಿ ಕಣಕ್ಕಿಳಿಯಲು ಹಿಟ್​ಮ್ಯಾನ್ ಮುಂದಾಗಿದ್ದಾರೆ.

ಭಾರತ ತಂಡವು ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಗೂ ಮುನ್ನ ಭಾರತ ಎ ತಂಡ ಆಸ್ಟ್ರೇಲಿಯಾದಲ್ಲಿ ಸರಣಿ ಆಡಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ತರಬೇತಿ ಆರಂಭಿಸಿದ ರೋಹಿತ್ ಶರ್ಮಾ:

ರೋಹಿತ್ ಶರ್ಮಾ ಮುಂಬರುವ ಸರಣಿಗಾಗಿ ಫಿಟ್​ನೆಸ್ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ಜಿಮ್​ನಲ್ಲಿ ಹಿಟ್​ಮ್ಯಾನ್ ಬೆವರಿಳಿಸಲಾರಂಭಿಸಿದ್ದು, ಈ ಮೂಲಕ ಫಿಟ್​ನೆಸ್​ನತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದ್ದಾರೆ. ಅಲ್ಲದೆ ಉತ್ತಮ ಫಿಟ್​ನೆಸ್ ಕಾಪಾಡಿಕೊಳ್ಳುವ ಮೂಲಕ 2027ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದಾರೆ ರೋಹಿತ್ ಶರ್ಮಾ.

ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್​​ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 19: ಮೊದಲ ಏಕದಿನ ಪಂದ್ಯ  ಪರ್ತ್ ಕ್ರೀಡಾಂಗಣ, ಪರ್ತ್
  • ಅಕ್ಟೋಬರ್ 23: ಎರಡನೇ ಏಕದಿನ ಪಂದ್ಯ  ಅಡಿಲೇಡ್ ಓವಲ್
  • ಅಕ್ಟೋಬರ್ 25: ಮೂರನೇ ಏಕದಿನ ಪಂದ್ಯ  ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
  • ಅಕ್ಟೋಬರ್ 29: ಮೊದಲ ಟಿ20 ಪಂದ್ಯ  ಮನುಕಾ ಓವಲ್ಕ್ಯಾನ್‌ಬೆರಾ
  • ಅಕ್ಟೋಬರ್ 31: ಎರಡನೇ ಟಿ20 ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ
  • ನವೆಂಬರ್ 2,: ಮೂರನೇ ಟಿ20 ಪಂದ್ಯ ಬೆಲ್ಲೆರಿವ್ ಓವಲ್ಹೋಬಾರ್ಟ್
  • ನವೆಂಬರ್ 6: ನಾಲ್ಕನೇ ಟಿ20 ಪಂದ್ಯ  ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
  • ನವೆಂಬರ್ 8: ಐದನೇ ಟಿ20 ಪಂದ್ಯ ದಿ ಗಬ್ಬಾಬ್ರಿಸ್ಬೇನ್