AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್; ಭರ್ಜರಿ ಶತಕ ಸಿಡಿಸಿದ ಮಾಜಿ ಸಿಎಸ್​ಕೆ ಆಟಗಾರ

Devon Conway Test Century: ಐಪಿಎಲ್ 2026 ಮಿನಿ ಹರಾಜಿನಲ್ಲಿ ಡೆವೊನ್ ಕಾನ್ವೇ ಮಾರಾಟವಾಗಲಿಲ್ಲ. ಸಿಎಸ್‌ಕೆ ತಂಡ ಬಿಡುಗಡೆಗೊಳಿಸಿದ್ದ ಕಾನ್ವೇ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ. ಆದರೆ, ಹರಾಜು ಮುಗಿದ ಎರಡು ದಿನಗಳ ನಂತರ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇದು ಅವರ ಆರನೇ ಟೆಸ್ಟ್ ಶತಕವಾಗಿದ್ದು, ಹರಾಜಿನಲ್ಲಿ ತಮಗೆ ಸಿಕ್ಕ ಅವಮಾನಕ್ಕೆ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್; ಭರ್ಜರಿ ಶತಕ ಸಿಡಿಸಿದ ಮಾಜಿ ಸಿಎಸ್​ಕೆ ಆಟಗಾರ
Devon Conway
ಪೃಥ್ವಿಶಂಕರ
|

Updated on: Dec 18, 2025 | 12:23 PM

Share

ಡಿಸೆಂಬರ್ 16 ರಂದು ನಡೆದ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ (IPL Auction 2026) ಕೆಲವು ಸ್ಟಾರ್ ವಿದೇಶಿ ಆಟಗಾರರು ಮಾರಾಟವಾಗಲಿಲ್ಲ. ಅವರಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ (Devon Conway) ಕೂಡ ಒಬ್ಬರು. ಕೆಲವು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕನಾಗಿ ಆಡಿದ್ದ ಕಾನ್ವೇ ಅವರನ್ನು ಮನಿ ಹರಾಜಿಗೂ ಮುನ್ನ ಸಿಎಸ್​ಕೆ ತಂಡದಿಂದ ಬಿಡುಗಡೆಗೊಳಿಸಿತ್ತು. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಕಾನ್ವೇ ಅವರನ್ನು ಯಾವುದೇ ಐಪಿಎಲ್ ಫ್ರಾಂಚೈಸಿ ಅವರನ್ನು ಖರೀದಿಸಲಿಲ್ಲ. ಇದೀಗ ಹರಾಜು ಮುಗಿದ ಎರಡು ದಿನಗಳ ಬಳಿಕ ಶತಕ ಬಾರಿಸುವುದರೊಂದಿಗೆ ಕಾನ್ವೇ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೇ ಶತಕ ಬಾರಿಸಿದ್ದಾರೆ.

ಟೆಸ್ಟ್ ಶತಕ ಬಾರಿಸಿದ ಡೆವೊನ್ ಕಾನ್ವೇ

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೇ 149 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 17 ಬೌಂಡರಿಗಳನ್ನು ಸಹ ಬಾರಿಸಿದರು. ಇದು ಕಾನ್ವೇ ಅವರ ಆರನೇ ಟೆಸ್ಟ್ ಶತಕವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಅವರ ಮೊದಲ ಶತಕವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೇ ಇನ್ನಿಂಗ್ಸ್ ಆರಂಭಿಸಿದರು. ಟಾಮ್ ಲೇಥಮ್ ಜೊತೆಗೂಡಿ ಆರಂಭಿಕನಾಗಿ ಶತಕ ಗಳಿಸಿದ್ದಲ್ಲದೆ, ದಾಖಲೆಯ ಪಾಲುದಾರಿಕೆಯನ್ನೂ ನಿರ್ಮಿಸಿದರು. ಡೆವೊನ್ ಕಾನ್ವೇ ಜೊತೆಗೆ ಟಾಮ್ ಲೇಥಮ್ ಕೂಡ ಶತಕ ಬಾರಿಸಿದರು. ಇದು ಲೇಥಮ್ ಅವರ ಟೆಸ್ಟ್ ವೃತ್ತಿಜೀವನದ 15 ನೇ ಶತಕವಾಗಿತ್ತು.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಚಿನ್ನಸ್ವಾಮಿಯಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯ

ಐಪಿಎಲ್‌ನಲ್ಲಿ ಡೆವೊನ್ ಕಾನ್ವೇ ದಾಖಲೆ ಹೇಗಿದೆ?

2022 ರಲ್ಲಿ ಸಿಎಸ್​ಕೆ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕಾನ್ವೇ ಅಂದಿನಿಂದ 2025 ರವರೆಗೆ ಈ ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ 29 ಪಂದ್ಯಗಳನ್ನಾಡಿದ ಕಾನ್ವೇ 1080 ರನ್ ಕಲೆಹಾಕಿದರು. ಆದಾಗ್ಯೂ, ಸಿಎಸ್​ಕೆ 2026 ರ ಐಪಿಎಲ್ ಹರಾಜಿಗೂ ಮೊದಲು ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಇದರಿಂದಾಗಿ ಕಾನ್ವೇ ಹರಾಜಿಗೆ ಪ್ರವೇಶಿಸಬೇಕಾಯಿತು. ಆದಾಗ್ಯೂ, ಈ ಬಾರಿ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ