AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ನಟನೆಯ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ ಸಲ್ಮಾನ್ ಖಾನ್ ತಂದೆ

ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರಿಗೆ ಇಂದು (ನವೆಂಬರ್ 24) ಜನ್ಮದಿನ. ತಂದೆ ಜನ್ಮದಿನಕ್ಕೆ ಸಲ್ಲು ವಿಶ್ ಮಾಡಿದ್ದಾರೆ. ಸಲೀಮ್ ಖಾನ್ ಅವರು ಖ್ಯಾತ ಕಥೆಗಾರರು ಹಾಗೂ ಚಿತ್ರಕಥೆ ಬರಹಗಾರರು. ಅವರು ಹಾಗೂ ಜಾವೇದ್ ಅಖ್ತರ್ ಅವರದ್ದು ಹಿಟ್ ಕಾಂಬಿನೇಷನ್. ಇಬ್ಬರೂ ಸೇರಿ ಅನೇಕ ಸೂಪರ್ ಹಿಟ್ ಕಥೆಗಳನ್ನು ನೀಡಿದ್ದರು

ರಾಜ್​ಕುಮಾರ್ ನಟನೆಯ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ ಸಲ್ಮಾನ್ ಖಾನ್ ತಂದೆ
ರಾಜ್​ಕುಮಾರ್ ನಟನೆಯ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ ಸಲ್ಮಾನ್ ಖಾನ್ ತಂದೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 24, 2024 | 6:30 AM

Share

ರಾಜ್​ಕುಮಾರ್ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಅದಕ್ಕೆ ಕಾರಣ ಆಗಿದ್ದು ಅವರು ಆಯ್ಕೆ ಮಾಡುತ್ತಿದ್ದ ಕಥೆಗಳು. ಹಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ್ದ ಅವರು ಸಿನಿಮಾ ಆಯ್ಕೆಯಲ್ಲಿ ಎಂದಿಗೂ ಎಡವಿಲ್ಲ. ಚಿತ್ರಗಳಲ್ಲಿ ಅವರು ಅದ್ಭುತವಾಗಿ ನಟಿಸುತ್ತಿದ್ದರು. ರಾಜ್​ಕುಮಾರ್ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳು ಆ ರೀತಿಯಲ್ಲಿ ಇರುತ್ತಿದ್ದವು. ಇವರ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಕೂಡ ಕಥೆ ಬರೆದಿದ್ದರು ಎಂಬ ವಿಚಾರ ಗೊತ್ತೇ?

ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರಿಗೆ ಇಂದು (ನವೆಂಬರ್ 24) ಜನ್ಮದಿನ. ತಂದೆ ಜನ್ಮದಿನಕ್ಕೆ ಸಲ್ಲು ವಿಶ್ ಮಾಡಿದ್ದಾರೆ. ಸಲೀಮ್ ಖಾನ್ ಅವರು ಖ್ಯಾತ ಕಥೆಗಾರರು ಹಾಗೂ ಚಿತ್ರಕಥೆ ಬರಹಗಾರರು. ಅವರು ಹಾಗೂ ಜಾವೇದ್ ಅಖ್ತರ್ ಅವರದ್ದು ಹಿಟ್ ಕಾಂಬಿನೇಷನ್. ಇಬ್ಬರೂ ಸೇರಿ ಅನೇಕ ಸೂಪರ್ ಹಿಟ್ ಕಥೆಗಳನ್ನು ನೀಡಿದ್ದರು. ಅದೇ ರೀತಿ ಕನ್ನಡದಲ್ಲೂ ಅವರು ಕಥೆ ಬರೆದಿದ್ದರು. ಅವರು ಕನ್ನಡದಲ್ಲಿ ಕೆಲಸ ಮಾಡಿದ ಎರಡು ಸಿನಿಮಾಗಳು ಇವು.

1975ರಲ್ಲಿ ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಸಲೀಮ್ ಹಾಗೂ ಜಾವೇದ್ ಕಥೆ ಬರೆದಿದ್ದರು. ಆ ಬಳಿಕ ಅವರಿಗೆ ಪರಭಾಷೆಗಳಿಂದಲೂ ಬೇಡಿಕೆ ಸೃಷ್ಟಿ ಆಯಿತು. ‘ಶೋಲೆ’ ಯಶಸ್ಸಿನ ಬಳಿಕ ಅವರು ನೇರವಾಗಿ ಕನ್ನಡಕ್ಕೆ ಕಾಲಿಟ್ಟಿದ್ದರು. ಅವರು ಕನ್ನಡದಲ್ಲಿ ಸಿನಿಮಾ ಮಾಡಿದ್ದರು. 1976ರಲ್ಲಿ ‘ಪ್ರೇಮದ ಕಾಣಿಕೆ’ ಸಿನಿಮಾ ರಿಲೀಸ್ ಆಯಿತು. ಇದು ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ವಿ. ಸೋಮಶೇಖರ್ ನಿರ್ದೇಶನ ಮಾಡಿದರೆ ರಾಜ್​ಕುಮಾರ್​ಗ ಆರತಿ ಜೊತೆಯಾಗಿದ್ದರು.

ಇದನ್ನೂ ಓದಿ: ಜೂಹಿ ಮನೆಗೆ ಹೋಗಿ ಹೆಣ್ಣು ಕೇಳಿದ್ದ ಸಲ್ಮಾನ್ ಖಾನ್; ವಿರೋಧಿಸಿದ್ದು ಯಾರು?

ಆ ಬಳಿಕ ‘ರಾಜ ನನ್ನ ರಾಜ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವೂ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೂ ರಾಜ್​ಕುಮಾರ್ ಹೀರೋ. ಈ ಸಿನಿಮಾಗೆ ಸಲೀಮ್ ಹಾಗೂ ಜಾವೇದ್ ಕಥೆ ಬರೆದಿದ್ದರು. ಆ ಬಳಿಕ ಜಾವೇದ್ ಹಾಗೂ ಸಲೀಮ್ ಕನ್ನಡದತ್ತ ಮುಖ ಮಾಡಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ