ಅಂಬರೀಶ್ ಪುಣ್ಯಸ್ಮರಣೆ: ಮರಳಿ ಬಂದಿದ್ದೀರಿ ಎಂದ ಸುಮಲತಾ

Ambareesh: ಅಂಬರೀಶ್ ನಿಧನ ಹೊಂದಿ ಇಂದಿಗೆ (ನವೆಂಬರ್ 24) ಆರು ವರ್ಷಗಳಾಗಿವೆ. ಪತಿಯನ್ನು ನೆನಪಿಸಿಕೊಂಡು ಪೋಸ್ಟ್ ಹಂಚಿಕೊಂಡಿರುವ ಸುಮಲತಾ ಅಂಬರೀಶ್, ‘ಮರಳಿ ಬಂದಿದ್ದೀರಿ’ ಎಂದಿದ್ದಾರೆ. ಅಂಬರೀಶ್​ ಪುತ್ರ ಅಭಿಷೇಕ್​ ಹಾಗೂ ದಂಪತಿಗೆ ಇತ್ತೀಚೆಗಷ್ಟೆ ಗಂಡುಮಗು ಜನಿಸಿದೆ.

ಅಂಬರೀಶ್ ಪುಣ್ಯಸ್ಮರಣೆ: ಮರಳಿ ಬಂದಿದ್ದೀರಿ ಎಂದ ಸುಮಲತಾ
Follow us
ಮಂಜುನಾಥ ಸಿ.
|

Updated on: Nov 24, 2024 | 10:45 AM

ಅಂಬರೀಶ್ ಅವರ ಪುಣ್ಯಸ್ಮರಣೆ ಇಂದು (ನವೆಂಬರ್ 24), 2018 ರ ಇದೇ ದಿನಾಂಕದಂದು ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು. ಅಂಬರೀಶ್ ಅಗಲಿ ಇಂದಿಗೆ ಆರು ವರ್ಷಗಳಾಗಿದ್ದು, ಇಂದಿಗೂ ಸಹ ಅಭಿಮಾನಿಗಳು ಹಾಗೂ ಕುಟುಂಬದವರ ಮನದಲ್ಲಿ ಅಂಬರೀಶ್ ನೆಲೆಸಿದ್ದಾರೆ. ಅಂಬರೀಶ್​ ಅವರ ಆರನೇ ವರ್ಷದ ಪುಣ್ಯ ಸ್ಮರಣೆ ಆದ ಇಂದು, ಪತ್ನಿ ಸುಮಲತಾ ಅವರು ಅಂಬರೀಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುಮಲತಾ, ‘ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ… ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ’ ಎಂದಿದ್ದಾರೆ.

ಮುಂದುವರೆದು, ‘ನೀವು ಪ್ರತಿ ಹೃದಯ ಬಡಿತದಲ್ಲಿ ನೆಲೆಸಿದ್ದೀರಿ, ಎಲ್ಲೆಲ್ಲೂ ಇದ್ದೀರಿ, ಪ್ರತಿ ಹುಟ್ಟಿನಲ್ಲೂ ಇದ್ದೀರಿ. ಈಗ ನೀವು ಮರಳಿ ಬಂದಿದ್ದೀರಿ’ ಎಂದಿದ್ದಾರೆ ಸುಮಲತಾ. ಅಂದಹಾಗೆ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ತಂದೆಯಾಗಿದ್ದು ಅವರಿಗೆ ಮುದ್ದಾದ ಗಂಡು ಮಗು ಜನಿಸಿದೆ. ಅಂಬರೀಶ್ ಅವರೇ ಮತ್ತೆ ಹುಟ್ಟಿಬಂದಿದ್ದಾರೆ ಎಂಬ ನಂಬಿಕೆಯಲ್ಲಿ ಅವರ ಕುಟುಂಬ ಇದೆ. ಇದೇ ಕಾರಣಕ್ಕೆ ಸುಮಲತಾ ಅವರು ‘ಮರಳಿ ಬಂದಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಭಿಷೇಕ್-ಅವಿವಾ ಮಗನಿಗೆ ‘ಅಂಬರೀಷ್’ ಎಂದು ನಾಮಕರಣ? ಕಾರಣ ಇಲ್ಲಿದೆ

ಅಂಬರೀಶ್ ಅವರ ಅಭಿಮಾನಿಗಳು ಅವರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಮಾಡಿದ್ದಾರೆ. ಅಂಬರೀಶ್ ಅವರು 2018 ರ ನವೆಂಬರ್ 24 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅದಕ್ಕೆ ಮುಂಚೆಯೂ ಸಹ ಅಂಬರೀಶ್ ಅವರು ಉಸಿರಾಟದ ಸಮಸ್ಯೆ ಸೇರಿದಂತೆ ಕೆಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಅಂಬರೀಶ್ ಅವರನ್ನು ಕಂಠಿರವ ಸ್ಟುಡಿಯೋನಲ್ಲಿ ಸಮಾಧಿ ಮಾಡಲಾಗಿದೆ.

ಅಂಬರೀಶ್ ಕನ್ನಡ ಚಿತ್ರರಂಗದ ಮೇರು ನಟರಲ್ಲೊಬ್ಬರು. ‘ನಾಗರಹಾವು’ ಸಿನಿಮಾ ಮೂಲಕ ವಿಲನ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಆ ನಂತರ ನಾಯಕನಾಗಿ ಕನ್ನಡ ಸಿನಿಮಾ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ನಟನಾಗಿ, ರಾಜಕಾರಣಿಯಾಗಿಯೂ ಅಂಬರೀಶ್ ಸೇವೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ