Sign In

By signing in or creating an account, you agree with Associated Broadcasting Company's Terms & Conditions and Privacy Policy.

Retail Inflation: ಹೋಲ್​​ಸೇಲ್ ದರ ಬಳಿಕ ರೀಟೇಲ್ ಹಣದುಬ್ಬರವೂ ಮಾರ್ಚ್ ತಿಂಗಳಲ್ಲಿ ಶೇ. 3.34ಕ್ಕೆ ಇಳಿಕೆ

2025 March, Retail inflation rate 3.34%: ಹೋಲ್​​​ಸೇಲ್ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ. 2.05ಕ್ಕೆ ಇಳಿದಿದೆ. ರೀಟೇಲ್ ಹಣದುಬ್ಬರವೂ ಶೇ. 3.34ಕ್ಕೆ ತಗ್ಗಿದೆ. ಸರ್ಕಾರ ಈ ಎರಡೂ ಹಣದುಬ್ಬರದ ದತ್ತಾಂಶವನ್ನು ಇಂದು ಮಂಗಳವಾರ ಬಿಡುಗಡೆ ಮಾಡಿದೆ. ಸತತ ಎರಡನೇ ತಿಂಗಳು ಹಣದುಬ್ಬರವು ಶೇ. 4ಕ್ಕಿಂತ ಒಳಗೆ ಇದೆ. ಈ ವರ್ಷ ಆರ್​​ಬಿಐನ ಅಂದಾಜು ಪ್ರಕಾರ ಹಣದುಬ್ಬರವು ಹಿಡಿತದಲ್ಲಿರಲಿದೆ.

Retail Inflation: ಹೋಲ್​​ಸೇಲ್ ದರ ಬಳಿಕ ರೀಟೇಲ್ ಹಣದುಬ್ಬರವೂ ಮಾರ್ಚ್ ತಿಂಗಳಲ್ಲಿ ಶೇ. 3.34ಕ್ಕೆ ಇಳಿಕೆ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 15, 2025 | 6:07 PM

ನವದೆಹಲಿ, ಏಪ್ರಿಲ್ 15: ಹೋಲ್​​ಸೇಲ್ ಹಣದುಬ್ಬರ (WPI inflation) ಮಾರ್ಚ್ ತಿಂಗಳಲ್ಲಿ ಶೇ. 2.05ಕ್ಕೆ ತಗ್ಗಿದ ಬೆನ್ನಲ್ಲೇ ರೀಟೇಲ್ ಹಣದುಬ್ಬರವೂ (Retail Inflation) ಕಡಿಮೆ ಆಗಿರುವ ಮಾಹಿತಿ ತಿಳಿದುಬಂದಿದೆ. ಸರ್ಕಾರ ಇಂದು ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಮಾರ್ಚ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿದಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ದರ ತುಸು ತಗ್ಗಿದೆ. ಫೆಬ್ರುವರಿ ತಿಂಗಳಲ್ಲೂ ಹಣದುಬ್ಬರ ಶೇ 3.61ರಷ್ಟಿತ್ತು. ಸತತ ಎರಡು ತಿಂಗಳು ಹಣದುಬ್ಬರ ದರವು ಆರ್​​ಬಿಐನ ಗುರಿಯಾದ ಶೇ. 4ರ ದರದ ಒಳಗೆ ಇದ್ದಂತಾಗಿದೆ.

ಕಳೆದ ವಾರ ನಡೆದ ವಿವಿಧ ಸಮೀಕ್ಷೆಗಳಲ್ಲಿ ಆರ್ಥಿಕ ತಜ್ಞರು ಈ ಮಾರ್ಚ್​​ನಲ್ಲಿ ಹಣದುಬ್ಬರವು ಶೇ. 3.60ರಷ್ಟಿರಬಹುದು ಎನ್ನುವ ಅನಿಸಿಕೆ ನೀಡಿದ್ದರು. ನಿರೀಕ್ಷೆ ಮೀರಿ ಹಣದುಬ್ಬರ ತಗ್ಗಿದೆ.

ಆಹಾರ ಹಣದುಬ್ಬರ ತಗ್ಗಿದ ಎಫೆಕ್ಟ್

ಗ್ರಾಹಕ ಬೆಲೆ ಸೂಚಿಯ ಗುಂಪಿನಲ್ಲಿ ಆಹಾರ ಹಣದುಬ್ಬರದ ದರ ಗಣನೀಯವಾಗಿ ಕಡಿಮೆ ಆಗಿದೆ. ಫೆಬ್ರುವರಿಯಲ್ಲಿ ಶೇ. 3.75ರಷ್ಟಿದ್ದ ಆಹಾರ ಹಣದುಬ್ಬರ ಮಾರ್ಚ್​​ನಲ್ಲಿ ಶೇ. 2.69ಕ್ಕೆ ಇಳಿದಿದೆ. ಒಟ್ಟಾರೆ ಹಣದುಬ್ಬರ ಇಳಿಕೆಯಲ್ಲಿ ಅರ್ಧದಷ್ಟು ಪಾಲು ಆಹಾರಕ್ಕೆ ಸಲ್ಲಬೇಕು.

ಇದನ್ನೂ ಓದಿ
Image
ಹೋಲ್​​​ಸೇಲ್ ಹಣದುಬ್ಬರ ಶೇ 2.05ಕ್ಕೆ ಇಳಿಕೆ
Image
ಬೆಳಕಿಗೆ ಬಾರದ ಶ್ರೀಮಂತರ ಶೇ. 96 ಸಂಪತ್ತು: ಶಾಕಿಂಗ್ ವರದಿ
Image
ಆಯುಷ್ಮಾನ್ ಭಾರತ್ ಸ್ಕೀಮ್: ಈ ಚಿಕಿತ್ಸೆಗಳಿಗೆ ಸಿಗಲ್ಲ ವಿಮೆ
Image
ಪಿಎಂ ಮುದ್ರಾ ಯೋಜನೆ: ಮಹಿಳೆಯರಿಗೆ ವರದಾನ

ಇದನ್ನೂ ಓದಿ: ಮಾರ್ಚ್​​ನಲ್ಲಿ ಶೇ. 2.05ಕ್ಕೆ ಇಳಿದ ಸಗಟು ಹಣದುಬ್ಬರ ದರ; ಬೆಲೆ ಏರಿಕೆ ಬಿಸಿ ಫೆಬ್ರುವರಿಗಿಂತ ಕಡಿಮೆ

ತರಕಾರಿ ಬೆಲೆ ಫೆಬ್ರುವರಿಯಲ್ಲಿ ಶೇ. 1.07ರಷ್ಟು ಇಳಿಕೆ ಆಗಿತ್ತು. ಆದರೆ, ಮಾರ್ಚ್​​ನಲ್ಲಿ ಅದು ಶೇ. 7.04ರಷ್ಟು ಬೆಲೆ ಇಳಿಕೆ ಕಂಡಿದೆ. ಬೇಳೆ ಕಾಳುಗಳ ಬೆಲೆ ಏರಿಕೆಯ ಪ್ರಮಾಣವೂ ಕಡಿಮೆ ಆಗಿದೆ.

ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.79 ಇದ್ದದ್ದು ಮಾರ್ಚ್​​ನಲ್ಲಿ ಶೇ. 3.25ಕ್ಕೆ ಇಳಿದಿದೆ. ನಗರ ಭಾಗದ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ. 3.32ರಷ್ಟು ಇದ್ದದ್ದು ಮಾರ್ಚ್​​ನಲ್ಲಿ ಶೇ. 2.48ಕ್ಕೆ ಇಳಿದಿದೆ.

ಆರ್​​ಬಿಐ ತಾಳಿಕೆ ಮಿತಿ ದಾಟಿದ್ದು ಒಂದು ತಿಂಗಳು ಮಾತ್ರ

ಕಳೆದ ಹಣಕಾಸು ವರ್ಷದಲ್ಲಿ (2024-25) 12 ತಿಂಗಳ ಪೈಕಿ ಒಂದು ತಿಂಗಳು ಮಾತ್ರವೇ ಹಣದುಬ್ಬರವು ಆರ್​​ಬಿಐನ ತಾಳಿಕೆ ಮಿತಿಗಿಂತ ಹೊರಗೆ ಹೋಗಿರುವುದು. ಆರ್​​ಬಿಐನ ಹಣದುಬ್ಬರ ಗುರಿ ಶೇ. 4 ಇದೆ. ಇದಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಲಾಗಿದೆ. ಅಂದರೆ, ಹಣದುಬ್ಬರವು ಈ ಮಿತಿಗಿಂತ ಹೊರಗೆ ಹೋಗದಂತೆ ನೋಡಿಕೊಳ್ಳಲು ಆರ್​​ಬಿಐ ಆದ್ಯತೆ ಕೊಡುತ್ತದೆ.

ಇದನ್ನೂ ಓದಿ: ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್​​ಬಿಐ ಎಂಪಿಸಿ ಸದಸ್ಯರ ವರದಿ

2024ರ ಅಕ್ಟೋಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ 6.21 ಇತ್ತು. ಉಳಿದೆಲ್ಲಾ ತಿಂಗಳೂ ಶೇ. 6ರ ಒಳಗೆಯೇ ಇದೆ. 2024ರ ಜುಲೈ ಮತ್ತು ಆಗಸ್ಟ್, ಹಾಗೂ 2025ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಣದುಬ್ಬರವು ಶೇ. 4ಕ್ಕಿಂತಲೂ ಕಡಿಮೆ ಇದೆ.

2024-25ರಲ್ಲಿ ತಿಂಗಳುವಾರು ಹಣದುಬ್ಬರ ದರ

  • 2024ರ ಏಪ್ರಿಲ್: ಶೇ. 4.83
  • 2024ರ ಮೇ: ಶೇ. 4.80
  • 2024ರ ಜೂನ್: ಶೇ. 5.08
  • 2024ರ ಜುಲೈ: ಶೇ. 3.60
  • 2024ರ ಆಗಸ್ಟ್: ಶೇ. 3.65
  • 2024ರ ಸೆಪ್ಟೆಂಬರ್: ಶೇ. 5.49
  • 2024ರ ಅಕ್ಟೋಬರ್: ಶೇ. 6.21
  • 2024ರ ನವೆಂಬರ್: ಶೇ. 5.48
  • 2024ರ ಡಿಸೆಂಬರ್: ಶೇ. 5.22
  • 2025ರ ಜನವರಿ: ಶೇ. 4.26
  • 2025ರ ಫೆಬ್ರುವರಿ: ಶೇ. 3.61
  • 2025ರ ಮಾರ್ಚ್: ಶೇ. 3.34

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Tue, 15 April 25

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ