Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 February 26th: ಬುಧವಾರ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 25 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 8,075 ರೂನಿಂದ 8,050 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಗ್ರಾಮಿಗೆ 3 ರೂ ಇಳಿದಿದೆ. ಬೆಂಗಳೂರಲ್ಲಿ 101 ರೂ ಇದ್ದ ಬೆಳ್ಳಿ ಬೆಲೆ 98 ರೂಗೆ ಇಳಿದಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Feb 26, 2025 | 11:10 AM

ಬೆಂಗಳೂರು, ಫೆಬ್ರುವರಿ 26: ಶಿವರಾತ್ರಿ ಹಬ್ಬದ ದಿನವಾದ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶಾದ್ಯಂತ ಹಾಗು ವಿಶ್ವಾದ್ಯಂತ ವಿವಿಧ ಮಾರುಕಟ್ಟೆಗಳಲ್ಲಿ ಸ್ವರ್ಣ ಬೆಲೆ ಕುಸಿತ ಕಂಡಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಚಿನ್ನಕ್ಕಿಂತ ಹೆಚ್ಚು ಭರ್ಜರಿ ಇಳಿಕೆ ಕಂಡಿದೆ. ಬೆಂಗಳೂರು, ಮುಂಬೈ ಇತ್ಯಾದಿ ಮಾರುಕಟ್ಟೆಗಳಲ್ಲಿ ಗ್ರಾಮ್​ಗೆ ಬರೋಬ್ಬರಿ ಮೂರು ರೂನಷ್ಟು ಕುಸಿದಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರೂ ಇದ್ದದ್ದು 9,800 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 87,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 26ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,820 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,870 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,820 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 80,500 ರೂ
  • ಚೆನ್ನೈ: 80,500 ರೂ
  • ಮುಂಬೈ: 80,500 ರೂ
  • ದೆಹಲಿ: 80,650 ರೂ
  • ಕೋಲ್ಕತಾ: 80,500 ರೂ
  • ಕೇರಳ: 80,500 ರೂ
  • ಅಹ್ಮದಾಬಾದ್: 80,550 ರೂ
  • ಜೈಪುರ್: 80,650 ರೂ
  • ಲಕ್ನೋ: 80,650 ರೂ
  • ಭುವನೇಶ್ವರ್: 80,500 ರೂ

ಇದನ್ನೂ ಓದಿ: Credit Card spend: ಜನವರಿಯಲ್ಲಿ ಕ್ರೆಡಿಟ್ ಕಾರ್ಡ್​ನಿಂದ ಜನರ ವೆಚ್ಚ 1.84 ಲಕ್ಷ ಕೋಟಿ ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,080 ರಿಂಗಿಟ್ (80,380 ರುಪಾಯಿ)
  • ದುಬೈ: 3,292.50 ಡಿರಾಮ್ (78,110 ರುಪಾಯಿ)
  • ಅಮೆರಿಕ: 880 ಡಾಲರ್ (76,680 ರುಪಾಯಿ)
  • ಸಿಂಗಾಪುರ: 1,221 ಸಿಂಗಾಪುರ್ ಡಾಲರ್ (79,530 ರುಪಾಯಿ)
  • ಕತಾರ್: 3,310 ಕತಾರಿ ರಿಯಾಲ್ (79,120 ರೂ)
  • ಸೌದಿ ಅರೇಬಿಯಾ: 3,310 ಸೌದಿ ರಿಯಾಲ್ (76,910 ರುಪಾಯಿ)
  • ಓಮನ್: 345 ಒಮಾನಿ ರಿಯಾಲ್ (78,080 ರುಪಾಯಿ)
  • ಕುವೇತ್: 267.10 ಕುವೇತಿ ದಿನಾರ್ (75,470 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,800 ರೂ
  • ಚೆನ್ನೈ: 10,600 ರೂ
  • ಮುಂಬೈ: 9,800 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,800 ರೂ
  • ಕೇರಳ: 10,600 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 10,600 ರೂ
  • ಪುಣೆ: 9,800

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us