Gold Silver Price on 9th February: ಚಿನ್ನದ ಬೆಲೆ 10 ದಿನದಲ್ಲಿ 335 ರೂ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2024 February 9th: ಚಿನ್ನದ ಬೆಲೆಯ ಏರಿಕೆ ಓಟ ವಾರಾಂತ್ಯದವರೆಗೂ ಮುಂದುವರಿದಿದೆ. ಆಭರಣ ಚಿನ್ನದ ಬೆಲೆ ಹತ್ತು ದಿನದಲ್ಲಿ ಗ್ರಾಮ್​ಗೆ 335 ರೂನಷ್ಟು ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 7,945 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 8,667 ರೂ ಆಗಿದೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಸ್ಥಿರವಾಗಿದೆ. ಬೆಂಗಳೂರು ಇತ್ಯಾದಿ ಕಡೆ ಬೆಲೆ 99.50 ರೂನಲ್ಲಿ ಮುಂದುವರಿದಿದೆ.

Gold Silver Price on 9th February: ಚಿನ್ನದ ಬೆಲೆ 10 ದಿನದಲ್ಲಿ 335 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Feb 09, 2025 | 10:22 AM

ಬೆಂಗಳೂರು, ಫೆಬ್ರುವರಿ 9: ಚಿನ್ನದ ಬೆಲೆ ವಾರಾಂತ್ಯದಲ್ಲೂ ತುಸು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 8,667 ರೂಗೆ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಹೆಚ್ಚಳ ಆಗಿದೆ. 7,930 ರೂ ಇದ್ದ ಅದರ ಬೆಲೆ 7,945 ರೂಗೆ ಏರಿದೆ. 18 ಕ್ಯಾರಟ್ ಚಿನ್ನದ ಬೆಲೆ 6,800 ರೂ ಗಡಿ ದಾಟಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಈ ವಾರದ ಆರಂಭದಲ್ಲಿ ಇದ್ದ ಬೆಲೆಯೇ ಈಗಲೂ ಇದೆ. ಹತ್ತು ದಿನಗಳಿಂದ ಬೆಳ್ಳಿ ಬೆಲೆಯಲ್ಲಿ 1 ರೂ ಮಾತ್ರವೇ ಏರಿಕೆ ಆಗಿರುವುದು. ಆದರೆ, ಚಿನ್ನದ ಬೆಲೆಯಲ್ಲಿ ಹತ್ತು ದಿನದಲ್ಲಿ ಗ್ರಾಮ್​ಗೆ 335 ರೂನಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 400 ರೂಗೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 79,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 86,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 79,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,950 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 9ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,670 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,010 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 79,450 ರೂ
  • ಚೆನ್ನೈ: 79,450 ರೂ
  • ಮುಂಬೈ: 79,450 ರೂ
  • ದೆಹಲಿ: 79,600 ರೂ
  • ಕೋಲ್ಕತಾ: 79,450 ರೂ
  • ಕೇರಳ: 79,450 ರೂ
  • ಅಹ್ಮದಾಬಾದ್: 79,500 ರೂ
  • ಜೈಪುರ್: 79,600 ರೂ
  • ಲಕ್ನೋ: 79,600 ರೂ
  • ಭುವನೇಶ್ವರ್: 79,450 ರೂ

ಇದನ್ನೂ ಓದಿ: World’s Powerful Passport 2025: ವಿಶ್ವದ ಪ್ರಬಲ ಪಾಸ್ ಪೋರ್ಟ್​​​ಗಳಲ್ಲಿ ಸಿಂಗಾಪುರ್ ಗೆ ಮೊದಲ ಸ್ಥಾನ, ಭಾರತಕ್ಕೆ ಎಷ್ಟನೇ ಸ್ಥಾನ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (71,790 ರುಪಾಯಿ)
  • ದುಬೈ: 3,207.50 ಡಿರಾಮ್ (76,690 ರುಪಾಯಿ)
  • ಅಮೆರಿಕ: 780 ಡಾಲರ್ (68,490 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (70,430 ರುಪಾಯಿ)
  • ಕತಾರ್: 3,250 ಕತಾರಿ ರಿಯಾಲ್ (78,300 ರೂ)
  • ಸೌದಿ ಅರೇಬಿಯಾ: 3,260 ಸೌದಿ ರಿಯಾಲ್ (76,330 ರುಪಾಯಿ)
  • ಓಮನ್: 340 ಒಮಾನಿ ರಿಯಾಲ್ (77,550 ರುಪಾಯಿ)
  • ಕುವೇತ್: 262.50 ಕುವೇತಿ ದಿನಾರ್ (74,670 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,950 ರೂ
  • ಚೆನ್ನೈ: 10,700 ರೂ
  • ಮುಂಬೈ: 9,950 ರೂ
  • ದೆಹಲಿ: 9,950 ರೂ
  • ಕೋಲ್ಕತಾ: 9,950 ರೂ
  • ಕೇರಳ: 10,700 ರೂ
  • ಅಹ್ಮದಾಬಾದ್: 9,950 ರೂ
  • ಜೈಪುರ್: 9,950 ರೂ
  • ಲಕ್ನೋ: 9,950 ರೂ
  • ಭುವನೇಶ್ವರ್: 10,700 ರೂ
  • ಪುಣೆ: 9,950

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us