World’s Powerful Passport 2025: ವಿಶ್ವದ ಪ್ರಬಲ ಪಾಸ್ ಪೋರ್ಟ್ಗಳಲ್ಲಿ ಸಿಂಗಾಪುರ್ ಗೆ ಮೊದಲ ಸ್ಥಾನ, ಭಾರತಕ್ಕೆ ಎಷ್ಟನೇ ಸ್ಥಾನ?
ಹೆನ್ಲೀ ಅಂಡ್ ಪಾರ್ಟ್ನರ್ಸ್ ಪ್ರತೀ ವರ್ಷ ಪ್ರಬಲ ಪಾಸ್‌ಪೋರ್ಟ್‌ಗಳ ಪಟ್ಟಿ ಪ್ರಕಟಿಸುತ್ತದೆ. 2025 ರ ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆಯಾಗಿದ್ದು, ಹೆನ್ಲೀ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಗಳಲ್ಲಿ ಸಿಂಗಾಪುರ ಮೊದಲ ಸ್ಥಾನ ಗಳಿಸಿಕೊಂಡಿದೆ. 2025 ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತದ ಪಾಸ್‌ಪೋರ್ಟ್ 80ನೇ ಸ್ಥಾನ ಪಡೆದಿದೆ. ಈ ಸ್ಥಾನದಲ್ಲಿ ಅಲ್ಜೀರಿಯಾ, ಈಕ್ವಟೋರಿಯಲ್ ಗಿನಿಯಾ ಮತ್ತು ತಜಿಕಿಸ್ತಾನ್ ಗಳು ಸೇರಿಕೊಂಡಿವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದೇಶ ಪ್ರಯಾಣ ಮಾಡಬೇಕೆಂದರೆ ನಿಮ್ಮ ಬಳಿ ಪಾಸ್ ಪೋರ್ಟ್ ಇರುವುದು ಕಡ್ಡಾಯವಾಗಿದೆ. ಒಂದು ವೇಳೆ ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಇದೀಗ ಪ್ರಪಂಚದಾದ್ಯಂತ ಇರುವ ದೇಶಗಳ ಪಾಸ್‌ಪೋರ್ಟ್‌ಗಳ ಸ್ಥಿತಿಯನ್ನು ನೀಡುವ ವರದಿಯನ್ನು ಇಂಡೆಕ್ಸ್ ಹೆನ್ಲಿ & ಪಾರ್ಟ್‌ನರ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯಾವ ದೇಶವು ವಿಶ್ವದ ಪ್ರಬಲ ಪಾಸ್ ಪೋರ್ಟ್ ಹೊಂದಿದೆ ಹಾಗೂ ಭಾರತದ ಪಾಸ್ ಪೋರ್ಟ್ ಗೆ ಎಷ್ಟನೇ ಸ್ಥಾನ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಾಗತಿಕ ಸರ್ಕಾರಿ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟ್‌ನರ್ಸ್, ವಿಶ್ವದ 199 ಪಾಸ್‌ಪೋರ್ಟ್‌ಗಳನ್ನು ಅವು ತಲುಪಬಹುದಾದ ಸ್ಥಳಗಳ ಸಂಖ್ಯೆಯ ಆಧಾರದ ಮೇಲೆ ಶ್ರೇಣೀಕರಿಸಿದೆ. ಸಿಂಗಾಪುರ ಪಾಸ್‌ಪೋರ್ಟ್ ಒಟ್ಟು 227 ದೇಶಗಳಲ್ಲಿ 193 ದೇಶಗಳಿಗೆ ವೀಸಾ ರಹಿತ ಪ್ರವೇಶವನ್ನು ಅನುಮತಿಸುವ ಮೂಲಕ ಮೊದಲ ಸ್ಥಾನ ಗಳಿಸಿ ಕೊಂಡಿದೆ. ಎರಡನೇ ಸ್ಥಾನದಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ ಪಾಸ್‌ಪೋರ್ಟ್‌ಗಳಿವೆ.
ಈ ಪಾಸ್‌ಪೋರ್ಟ್‌ಗಳು 190 ದೇಶಗಳಿಗೆ ವೀಸಾ ರಹಿತ ಪ್ರವೇಶವನ್ನು ಅನುಮತಿಸುತ್ತವೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ ಮತ್ತು ಸ್ಪೇನ್ ಸೇರಿದಂತೆ ಒಟ್ಟು ಏಳು ದೇಶಗಳು ಸೇರಿದ್ದು, ಈ ಪಾಸ್‌ಪೋರ್ಟ್‌ಗಳು 189 ದೇಶಗಳಿಗೆ ವೀಸಾ ರಹಿತ ಪ್ರವೇಶವನ್ನು ಅನುಮತಿಸುತ್ತದೆ.
ಪಾಕಿಸ್ತಾನ 96 ನೇ ಸ್ಥಾನ ಗಳಿಸಿಕೊಂಡಿದ್ದು, 30 ದೇಶಗಳಲ್ಲಿ ಪಾಸ್ ಪೋರ್ಟ್ ಅನುಮತಿಸುವ ಮೂಲಕ ಇರಾಕ್ 97 ನೇ ಸ್ಥಾನದಲ್ಲಿದೆ.. 27 ದೇಶಗಳಲ್ಲಿ ವೀಸಾ ರಹಿತ ಪ್ರವೇಶವನ್ನು ಅನುಮತಿಸುವ ಮೂಲಕ ಸಿರಿಯಾ 98 ನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನವು 99ನೇ ಸ್ಥಾನದಲ್ಲಿದ್ದು, ಕೇವಲ 25 ದೇಶಗಳಿಗೆ ವೀಸಾ ರಹಿತ ಪ್ರವೇಶವನ್ನು ಅನುಮತಿಸುವ ಈ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಚಾಕೊಲೇಟ್ ಡೇಗೆ ಸ್ಪೆಷಲ್ ವ್ಯಕ್ತಿಗೆ ಈ ಉಡುಗೊರೆ ನೀಡಿ ಖುಷಿ ಪಡಿಸಿ
ಭಾರತ ಎಷ್ಟನೇ ಸ್ಥಾನದಲ್ಲಿದೆ?
ಹೆನ್ಲೀ ಇಂಡೆಕ್ಸ್ ವರದಿಯ ಪ್ರಕಾರ, ಭಾರತವು 56 ದೇಶಗಳಿಗೆ ವೀಸಾ ರಹಿತ ಪ್ರವೇಶವನ್ನು ಅನುಮತಿಸುವ ಮೂಲಕ ಈ ವರ್ಷ 80ನೇ ಸ್ಥಾನದಲ್ಲಿದೆ. ಇನ್ನು ಉಳಿದಂತೆ ಈ ಸ್ಥಾನವನ್ನು ತಜಿಕಿಸ್ತಾನ್, ಅಲ್ಜೀರಿಯಾ ಮತ್ತು ಈಕ್ವಟೋರಿಯಲ್ ಗಿನಿಯಾ ದೇಶಗಳು ಹಂಚಿಕೊಂಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Sat, 8 February 25




