Sign In

By signing in or creating an account, you agree with Associated Broadcasting Company's Terms & Conditions and Privacy Policy.

Propose Day 2025: ಹೃದಯದಲ್ಲಿ ಬಚ್ಚಿಟ್ಟ ಪ್ರೀತಿ ಹೇಳುವ ಮುನ್ನ ಈ ದಿನದ ಇತಿಹಾಸ ಹಾಗೂ ಮಹತ್ವ ತಿಳಿಯಿರಿ

Valentine’s Week 2025 : ಇಂದಿನಿಂದ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದ್ದು, ಈ ಒಂದು ವಾರ ಪ್ರೇಮಿಗಳಿಗೆ ಹಬ್ಬವಿದ್ದಂತೆ. ಹೌದು, ರೋಸ್ ಡೇ, ಪ್ರಪೋಸ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ ಹೀಗೆ ಸಾಲು ಸಾಲು ಡೇಗಳನ್ನು ಆಚರಿಸಲಾಗುತ್ತದೆ. ಫೆಬ್ರವರಿ 8ರಂದು ಪ್ರೇಮ ನಿವೇದನೆ ದಿನ. ಪ್ರೇಮಿಗಳ ವಾರದ ಎರಡನೇ ದಿನದಂದು ಪ್ರೀತಿಯನ್ನು ತಾವು ಪ್ರೀತಿಸುವ ಜೀವಕ್ಕೆ ತಿಳಿಸುತ್ತಾರೆ. ಹೌದು, ಈ ದಿನದಂದು ತಮ್ಮ ಮನದಾಳದ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುತ್ತಾರೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

Propose Day 2025: ಹೃದಯದಲ್ಲಿ ಬಚ್ಚಿಟ್ಟ ಪ್ರೀತಿ ಹೇಳುವ ಮುನ್ನ ಈ ದಿನದ ಇತಿಹಾಸ ಹಾಗೂ ಮಹತ್ವ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2025 | 5:28 PM

ಲವ್ ಪ್ರಪೋಸ್‌ ಎಂಬುವುದು ಪ್ರತಿಯೊಬ್ಬರ ಬದುಕಿನಲ್ಲಿ ವಿಶೇಷವಾಗಿರುತ್ತದೆ. ಜೀವನ ಪರ್ಯಂತ ಸದಾ ನೆನಪಿನಲ್ಲಿ ಉಳಿಯುವ ಕಾರಣ ವಿಭಿನ್ನವಾಗಿ ಪ್ರಪೋಸ್ ಮಾಡಲು ಬಯಸುತ್ತಾರೆ. ಈ ಪ್ರೀತಿಯನ್ನು ಹೇಳಿಕೊಳ್ಳಲೆಂದೇ ಒಂದು ದಿನವಿದ್ದು, ಅದುವೇ ಪ್ರಪೋಸ್ ದಿನ. ಪ್ರೇಮಿಗಳ ವಾರದ ಆಚರಣೆಯಲ್ಲಿ ಎರಡನೇ ದಿನ (ಫೆಬ್ರವರಿ 8)ವನ್ನು ಪ್ರಪೋಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರೇಮ ಪಯಣಕ್ಕೆ ಹೊಸ ಹೆಜ್ಜೆ ಇಡಲು ಬಯಸುವವರಿಗೆ ಈ ದಿನವು ಬೆಸ್ಟ್. ಆದರೆ ಇಂತಹದೊಂದು ದಿನವನ್ನು ಆಚರಿಸುವ ಮೊದಲು ಈ ದಿನ ಇತಿಹಾಸವನ್ನು ತಿಳಿಯುವುದು ಮುಖ್ಯ.

ಪ್ರಪೋಸ್ ಡೇ ಯಾವಾಗ?

ಪ್ರೇಮಿಗಳ ವಾರದ ಆಚರಣೆಯ ಭಾಗವಾಗಿ ಪ್ರತಿವರ್ಷ ಫೆಬ್ರವರಿ 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ರೋಸ್ ಡೇಯ ಬಳಿಕ ಅಂದರೆ ಎರಡನೇ ದಿನ ತಮ್ಮ ಪ್ರೀತಿಯನ್ನು ತಮ್ಮ ಇಷ್ಟದ ವ್ಯಕ್ತಿಗೆ ತಿಳಿಸುವ ಸಲುವಾಗಿ ವ್ಯಾಲೆಂಟೈನ್ಸ್ ವಾರದ ಎರಡನೆ ದಿನದಂದು ಪ್ರಪೋಸ್ ಡೇಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಪ್ರಪೋಸ್ ಡೇ ಇತಿಹಾಸ

ವ್ಯಾಲೆಂಟೈನ್ಸ್ ವೀಕ್ ಆಚರಣೆಯ ಭಾಗವಾಗಿ ಎರಡನೇ ದಿನವನ್ನು ಪ್ರಪೋಸ್ ಡೇ ಆಚರಣೆ ಪ್ರಾರಂಭವಾಯಿತು ಎನ್ನಲಾಗಿದೆ. ಈ ದಿನವನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ಆಚರಣೆಯೂ ಮೊದಲಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾರಂಭವಾಯಿತು, ತದನಂತರದಲ್ಲಿ ಭಾರತ ಸೇರಿದಂತೆ ಇತರ ದೇಶಗಳಿಗೂ ಹರಡಿತು. ಆದರೆ ಈ ದಿನದ ಆಚರಣೆ ಯಾವಾಗ ಶುರುವಾಯಿತು ಎನ್ನುವ ಬಗ್ಗೆ ನಿಖರವಾದ ಇತಿಹಾಸವಿಲ್ಲ. ಆದರೆ ಕೆಲ ಮಾಹಿತಿಯ ಪ್ರಕಾರ 1477ರಲ್ಲಿ ಆಸ್ಟಿಯನ್ ರಾಜಕುಮಾರ ಮ್ಯಾಕ್ಸಿಮಿಲಿಯನ್, ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದನು ಎನ್ನಲಾಗಿದೆ. 1816ರಲ್ಲಿ ತನ್ನ ಭಾವಿ ಪತಿಯೊಂದಿಗೆ ರಾಜಕುಮಾರಿ ಷಾರ್ಲೆಟ್ ಅವರ ನಿಶ್ವಿತಾರ್ಥವು ಮಹತ್ವದ ಚರ್ಚೆಯಲ್ಲಿತ್ತು. ಹೀಗಾಗಿ ಈ ದಿನವನ್ನು ವ್ಯಾಲೆಂಟೈನ್ಸ್ ವೀಕ್‌ನ ಪ್ರಪೋಸ್ ಡೇ ಆಗಿ ಆಚರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರಪೋಸ್ ಡೇ ಆಚರಣೆಯು ಹೆಚ್ಚು ಜನಪ್ರಿಯವಾಗಿದ್ದು, ಜಗತ್ತಿನದಾದಂತ್ಯ ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ನಿಮ್ಮಿಷ್ಟದ ವ್ಯಕ್ತಿಗೆ ಪ್ರಪೋಸ್ ಮಾಡುವಾಗ ಈ ಉಡುಗೊರೆ ನೀಡಿ

ಪ್ರಪೋಸ್ ಡೇ ಮಹತ್ವ ಹಾಗೂ ಆಚರಣೆ ಹೇಗೆ?

ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪ್ರೀತಿಪಾತ್ರರಿಗೆ ಮದುವೆ ಅಥವಾ ಒಟ್ಟಿಗೆ ಜೀವನ ನಡೆಸಲು ಪ್ರಸ್ತಾಪಿಸಲು, ಪ್ರೀತಿಯನ್ನು ಅಭಿವ್ಯಕ್ತಿಸಲು ಇದೊಂದು ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ. ಅದಲ್ಲದೇ ತಾವು ಪ್ರೀತಿಸುವ ವ್ಯಕ್ತಿಗೆ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುವ ದಿನವಾಗಿದೆ. ಈ ದಿನವು ಸಂಬಂಧಕ್ಕೆ ಆರಂಭ ಬರೆಯುವ ದಿನ ಹಾಗೂ ಸಂಬಂಧದ ಮೈಲಿಗಲ್ಲು ಆಗಿದ್ದು, ಈ ಪ್ರಪೋಸ್ ದಿನವು ಪ್ರತಿಯೊಬ್ಬ ಪ್ರೇಮಿಗಳು ಮಹತ್ವದ್ದಾಗಿದೆ. ಹೀಗಾಗಿ ಈ ದಿನವನ್ನು ಆತ್ಯಕರ್ಷವಾಗಿಸಲು ತಮ್ಮ ಸಂಗಾತಿ ಅಥವಾ ಪ್ರೇಮಿಗೆ ವಿಶೇಷ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಕೆಲವರು ಈ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಸ್ಮರಣೀಯ ರೀತಿಯಲ್ಲಿ ಪ್ರಪೋಸ್ ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರು ವಿಭಿನ್ನವಾಗಿ ಆಚರಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ
ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ
ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ