Valentine's Day
ಪ್ರತಿ ವರ್ಷ ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಇತಿಹಾಸವು ಬಹಳ ಹಿಂದಿನದ್ದು. ಈ ಪ್ರೇಮಿಗಳ ದಿನಾಚರಣೆ ಈಗ ಚುಂಬನ, ಉಡುಗೊರೆಗಳು ಮತ್ತು ಡಿನ್ನರ್ಗೆ ಜನಪ್ರಿಯವಾಗುತ್ತಿದೆ. ಪ್ರೇಮಿಗಳಿಗಾಗಿ ಇರುವ ದಿನ ಈ ವ್ಯಾಲೆಂಟೈನ್ಸ್ ಡೇ. ಈ ದಿನವನ್ನು ಪ್ರೇಮಿಗಳ ತಮ್ಮ ಪ್ರೇಮ ನಿವೇದನೆಗೆ, ಸಂಗಾತಿಗೆ ಸರ್ಪ್ರೈಸ್ ನೀಡಲು, ಅವರೊಂದಿಗೆ ತಮ್ಮ ದಿನವನ್ನು ಕಳೆಯಲು ಬಳಸಿಕೊಳ್ಳುತ್ತಾರೆ. 5ನೇ ಶತಮಾನದ ಕೊನೆಯಲ್ಲಿ ಪೋಪ್ ಗೆಲಾಸಿಯಸ್ ಫೆಬ್ರವರಿ 14 ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿದರು. ಅಂದಿನಿಂದ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಪ್ರೇಮಿಗಳಿಗೆ ಮೀಸಲಾಗಿರುವ ದಿನವೆಂದು ಪರಿಗಣಿಸುವುದಕ್ಕಿಂತಲೂ ಪೋಷಕರು, ಸ್ನೇಹಿತರು ಎಲ್ಲರೂ ತಾವು ಪ್ರೀತಿಸುವ ಜೀವಕ್ಕೆ ಶುಭಾಶಯ ಕೋರುವ ದಿನವೆಂದು ಪರಿಗಣಿಸುವುದು ಹೆಚ್ಚು ಸೂಕ್ತ. ಈ ಪ್ರೇಮಿಗಳ ದಿನವನ್ನು ಆಚರಿಸಲು ಕರ್ನಾಟಕ ಸೇರಿದಂತೆ ಹಲವೆಡೆ ಪ್ರತಿ ವರ್ಷ ಭಾರೀ ವಿರೋಧ ವ್ಯಕ್ತವಾಗುತ್ತದೆ. ಆದರೂ ಹಲವು ರೆಸ್ಟೋರೆಂಟ್ಗಳು, ರೆಸಾರ್ಟ್, ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್ಗಳು ಪ್ರೇಮಿಗಳ ದಿನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತವೆ.